
ಗಂಗಾವತಿ :ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾರ್ಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಇಂದು ಏರ್ಪಡಿಸಿದಂತಹ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ
ಉದ್ಗಾಟಕರಾಗಿ ಕೊಪ್ಪಳ ಲೋಕಸಭೆ ಸಂಸದರಾದ ಶ್ರೀ ಸಂಗಣ್ಣ ಕರಡಿ ಯವರು ಹಾಗೂ ಗಂಗಾವತಿಯ ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿಯವರು ಭಾಗಿಯಾಗಿದ್ದರು
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಶ್ರೀ ವೇ.ಮೂ.ಸಿದ್ದರಾಮಯ್ಯ ಗುರುವಿನ, ಶ್ರೀ ಸಿದ್ದಯ್ಯ ಗುರುವಿನ ಹಾಗೂ ಅಧ್ಯಕ್ಷತೆಯನ್ನ ಶ್ರೀ ಸಣ್ಣೆಪ್ಪ ಅವರು ವಹಿಸಿದ್ದರು

ಶಾಸರಕರು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಶಾಲೆ ಹಾಗೂ ಮಕ್ಕಳ ಕುರಿತು ಮಾತನಾಡಿದರು, ಈ ಸಮಯದಲ್ಲಿ ಶಾಲೆಯ ವತಿಯಿಂದ ಶಾಸಕರನ್ನ ಹಾಗೂ ಸಂಸದರನ್ನ ಗೌರವಿಸಿ ಸನ್ಮಾನಿಸಿದರು ಅದೇ ರೀತಿಯಾಗಿ ಉತ್ತಮ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು
ಈ ಕಾರ್ಯಕ್ರಮದಲ್ಲಿ ಶಾಲಾ ಕಮೀಟಿ ಸದಸ್ಯರಾದ ರುದ್ರೇಶ್ ಡ್ಯಾಗಿ, ದ್ಯಾಮಪ್ಪ ಅಂಗಡಿ, ಯಮನಪ್ಪ ವಿಠಲಾಪುರ, ಸಣ್ಣಕ್ಕಿ ನೀಲಪ್ಪ, ಹನುಮಂತಪ್ಪ ಗಡ್ಡಿ, ಬಾಳಪ್ಪ ವೆಂಕಟಗಿರಿ, ಶರಣೆಗೌಡ ಮಾ.ಪಾ, ಬಸವರಾಜ ವೆಂಕಟಗಿರಿ, ಗಾದಿಲಿಂಗಪ್ಪ ಚಿಕ್ಕಬೆಣಕಲ್, ರವಿಕುಮಾರ್ ವೆಲ್ಲಂಕಿ, ಧರ್ಮಣ್ಣ, ವಾಣಿಕುಮಾರ್, ಹನುಮೇಶ್ ಆರ್ಯಾಳ, ಮುಖ್ಯೋಪದ್ಯಾಯರಾದ ನಿಂಗಪ್ಪ ಗುಂಡೂರು, ಗವಿಸಿದ್ದಪ್ಪ, ಭಾಷಾ ಸಾಬ್ ಮುದಿ ಮಲ್ಲಪ್ಪ,ಶರಣಪ್ಪ ಮಾಟ್ರಂಗಿ, ಶರಣಪ್ಪ, ಶ್ಯಾಮಲ, ಆಂಜನೇಯಾ , ಹನುಮಂತಪ್ಪ, ಶರಣಪ್ಪ ಮಾಟ್ರಂಗಿ ಹಾಗೂ ಇನ್ನಿತರರು ಇದ್ದರು.