ಕುಕುನೂರು: ಕುಕನೂರು ಪಟ್ಟಣದ ಟೀಚರ್ಸ್ ಕಾಲೋನಿ ಎಂದೇ ಪ್ರಸಿದ್ಧವಾಗಿರುವ ಡಾಕ್ಟರ್ ರಾಧಾಕೃಷ್ಣ ಕಾಲೋನಿ ವಾರ್ಡ್ ನಂಬರ್ 18 ಮುಖ್ಯ ಚರಂಡಿ ನಿರ್ಮಿಸುವ ಕಾಮಗಾರಿಯನ್ನು ಅರ್ಧದಲ್ಲಿ ಸ್ಥಗಿತಗೊಳಿಸಿರುವುದರ ಪರಿಣಾಮ ಚರಂಡಿ ಚರಂಡಿ ನೀರಲ್ಲ ತುಂಬಿಕೊಂಡು ರಸ್ತೆಯ ಮೇಲೆ ಹರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಬಹುತೇಕ ಶಿಕ್ಷಕರೇ ವಾಸವಾಗಿರುವ ಈ ಕಾಲೋನಿಯಲ್ಲಿ ಒಂದು ತಿಂಗಳಕ್ಕಿಂತ ಮುಂಚೆ ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದ್ದು ಯಾರದೊ ತಕರಾರು ಬಂದ ಕಾರಣದಿಂದ ಕಾಮಗಾರಿ ಸ್ಥಗಿತಗೊಳಿಸಿರುವುದಾಗಿ ಗುತ್ತಿಗೆದಾರರು ಹೇಳಿದ್ದು ಸದ್ಯ ಅರೆಬರೆ ಕಾಮಗಾರಿ ಆಗಿದ್ದು ಚರಂಡಿಯ ನೀರು ಮುಂದೆ ಹೋಗದೆ ಅಲ್ಲೇ ನಿಂತು ಹೆಚ್ಚಿನ ಚರಂಡಿ ನೀರು ರಸ್ತೆಯ ತುಂಬೆಲ್ಲ ಹರಿದಾಡುತ್ತಿದ್ದು ಮನೆಯೊಳಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.
ಈ ಕಾರಣಕ್ಕೆ 19.11.2022 ರಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿರದ ಕಾರಣ ಮಂಗಳವಾರ ದಿವಸ ಕಾಲೋನಿಯ ಬಹುತೇಕ ಜನರು ಪಟ್ಟಣದ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರುಗಡೆ ಶಾಂತಿಯುತ ಪ್ರತಿಭಟನೆ ನಡೆಸಿದ್ದು ಪ್ರತಿಭಟನೆಕಾರರು ನಿಂತ ಚರಂಡಿ ನೀರಿನಿಂದ ಕಾಲೋನಿ ಗಬ್ಬು ವಾಸನೆ ಪಸರಿಸಿದ್ದು ಹಾಗೂ ಸಂಕ್ರಾಮಿಕ ರೋಗ ಹರಡುವ ಬೀದಿ ತಮ್ಮನ್ನು ಕಾಡುತ್ತಿರುವದಾಗಿ ತಮ್ಮ ಅಳಲನ್ನು ತೋಡಿಕೊಂಡರು.