
ದಾವಣಗೆರೆ: ಐಪಿ ಪಂಪ್‍ಸೆಟ್‍ಗೆ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡಲು ಪ್ರತಿಸಂಪರ್ಕಕ್ಕೆ 5 ಸಾವಿರ ರೂಪಾಯಿಯಂತೆ ಬೇಡಿಕೆ ಇಟ್ಟು, ಅಂತಿಮವಾಗಿ 1 ಸಾವಿರ ರೂ.ಗೆ ಒಪ್ಪಿ 6 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಸಹಾಯಕ ಅಭಿಯಂತರ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ.
ಹರಿಹರ ನಗರ ಬೆಸ್ಕಾಂ (BESCOM) ಕಚೇರಿಯ ಸಹಾಯಕ ಅಭಿಯಂತರ ಬಿ.ಎಂ. ಕರಿಬಸಯ್ಯ ಹಣದ ಸಮೇತ ಬೆಸ್ಕಾಂ ಕಚೇರಿಯಲ್ಲಿ ಹಣ ಪಡೆಯುವಾಗ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ. ಮಹೇಶ್ವರಪ್ಪ ಬೇವಿನಹಳ್ಳಿ ಇವರಿಂದ ಐಪಿ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡಲು ಮುಂಚೆಯೇ ಪ್ರತಿ ಸಂಪರ್ಕಕ್ಕೆ 5 ಸಾವಿರ ರೂ.ಗಳಿಗೆ ಆರೋಪಿ ಎಇಯಾದ ಕರಿಬಸಯ್ಯ ಬೇಡಿಕೆ ಇಟ್ಟಿದ್ದರು.
ಅಂತಿಮವಾಗಿ ಪ್ರತಿ ಸಂಪರ್ಕಕ್ಕೆ 1 ಸಾವಿರದಂತೆ ಒಪ್ಪಿ 8 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪಿರ್ಯಾದಿ ಬೇವಿನಹಳ್ಳಿ ಮಹೇಶ್ವರಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಂತರ ಹರಿಹರ ನಗರ ಬೆಸ್ಕಾಂ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಬಿ.ಎಂ. ಕರಿಬಸಯ್ಯ ಬೇವಿನಹಳ್ಳಿ ಮಹೇಶ್ವರಪ್ಪನಿಂದ 6 ಸಾವಿರ ರೂ. ಲಂಚ ಪಡೆಯುವಾಗ ಹಣದ ಸಮೇತ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಕೆ.ಜಿ.ರಾಮಕೃಷ್ಣ, ಇನ್ಸ್‍ಪೆಕ್ಟರ್‍ಗಳಾದ ಎಚ್.ಎಸ್. ರಾಷ್ಟ್ರಪತಿ, ಆಂಜನೇಯ, ಪ್ರಭು ನೇತೃತ್ವದ ತಂಡ ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡು, ಆರೋಪಿ ಸಹಾಯಕ ಇಂಜಿನಿಯರ್ ಕರಿಬಸಯ್ಯನಿಗೆ ಬಂಧಿಸಿ, ತನಿಖೆ ಮುಂದುವರಿಸಿದೆ.