ಜಾಗತೀಕರಣದ  ನಂತರ ಮಾಧ್ಯಮ ಲೋಕ ಕೂಡ ಸುದ್ದಿ ಪ್ರಸಾರದ ಜೊತೆ ಇತರೆ ವಾಣಿಜ್ಯಾಧಾರದ ಕಾರ್ಯಕ್ರಮಗಳನ್ನು ಆಯೋಜಿಸುತ್ತ, ಸುದ್ದಿ ಮನೆಗಳು, ಅಂಗಡಿಗಳಾಗಿ ಬದಲಾಗತೊಡಗಿದವು. ಈ ವಾಣಿಜ್ಯ ವ್ಯವಹಾರ ಲಾಭ ನಷ್ಟಗಳ ಲೆಕ್ಕದಲ್ಲಿ ಹಿಂದಿನಿಂದ ಅನೂಚಾನವಾಗಿ ಪಾಲಿಸಿಕೊಂಡು ಬಂದ ಪತ್ರಿಕಾ ಧರ್ಮಗಳು ಹಿನ್ನೆಲೆಗೆ ಬಂದು ಕುಳಿತವು.

    ತಮ್ಮ ವರದಿ ಶೈಲಿಯಿಂದ ಓದುಗರಲ್ಲಿ ಅಭಿಮಾನಿ ಬಳಗ ಪಡೆದ ವರದಿಗಾರರು, ಸಂಪಾದಕರಿಗಿಂತ, ವ್ಯಾಪಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಹೆಚ್ಚು ಜಾಹಿರಾತು ತರುವ ವ್ಯವಸ್ಥಾಪಕರು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದಂತೆ ದೇಶದಲ್ಲಿ, ರಾಜ್ಯಗಳಲ್ಲಿ ಹಲವಾರು ಸುದ್ದಿ ವಾಹಿನಿಗಳು ದೃಶ್ಯ ಮಾಧ್ಯಮ ಲೋಕಕ್ಕೆ ಪ್ರವೇಶ ಪಡೆದು ತಮ್ಮ ತಮ್ಮ ಇರುವಿಕೆಯನ್ನು ಸಾರ್ವಜನಿಕರಲ್ಲಿ ಮನಗಾಣಿಸಲು ಸರ್ಕಸ್‍ಗಳನ್ನು ಶುರು ಮಾಡಿದರು.

ಇಲ್ಲಿಂದ ಪ್ರಾರಂಭವಾಯಿತು, ಸುದ್ದಿಗಾರರೆಂದರೆ ಸಾರ್ವಜನಿಕರ ಅಭಿವ್ಯಕ್ತಿಗಳು ಎಂದಿದ್ದ ಭಾವನೆ ಕ್ರಮೇಣ ಕರಗುತ್ತಾ, ಇವರು ತಮ್ಮ ಕಂಪೆನಿಯ ಅಭಿಪ್ರಾಯವನ್ನು ಸಾರ್ವಜನಿಕರಲ್ಲಿ, ಸಮಾಜದ ಮನದಲ್ಲಿ ಹೇರುವ ಹಾಗೂ ಗೊಂದಲ ಮೂಡಿಸುವವರು ಎಂದು. ಒಂದು ಸುದ್ದಿ ವಾಹಿನಿಯಲ್ಲಿ ಒಬ್ಬ ಚಲನಚಿತ್ರ ನಟನ ಬಗ್ಗೆ ಇಲ್ಲಸಲ್ಲದ ಆರೋಪಗಳು ಬಿತ್ತರಣೆಯಾಗುತ್ತಿದ್ದರೆ, ಇನ್ನೊಂದು ವಾಹಿನಿಯಲ್ಲಿ ಅದೇ ನಟನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವ ಚರ್ಚೆ ನಡೆಯುತ್ತಿರುತ್ತದೆ.

      ಮಾಧ್ಯಮ ರಂಗ ನಮ್ಮ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಸಂವಿಧಾನದಲ್ಲಿನ ನಾಗರಿಕ ಸಮುದಾಯದ ಸಾಮೂಹಿಕ ಧ್ವನಿಯಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯುತ ಕ್ಷೇತ್ರ. ಸರ್ಕಾರವನ್ನು ಸದಾ ಎಚ್ಚರಿಸಿ, ಸಮಾಜದಲ್ಲಿನ ಹುಳುಕುಗಳನ್ನು, ಅಕ್ರಮಗಳನ್ನು ತೋರಿಸಿ ಅವುಗಳೆಡೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಹಿತೆಗೆ ಧಕ್ಕೆಯಾಗದಂತೆ ಸುದ್ದಿ ಬಿತ್ತರಿಸುವುದು ಆದ್ಯ ಕರ್ತವ್ಯ. ಜನರ ಖಾಸಗಿತನದ ವಿಷಯಗಳನ್ನು ಅನಾವರಣಗೊಳಿಸಿದರೆ ಯಾವ ಕಾನೂನು ಮಾಧ್ಯಮದ ಪಾಲಿಗೆ ಕಂಟಕವಾಗಬಹುದು ಎಂದು ಗಮನಿಸಿದರೆ, ಮೊದಲು ಕಂಡು ಬರುವುದೇ ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮ.

       ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮದ ಕಲಂ 67 ಹಾಗೂ 67ಎ ಗಳನ್ನು ಗಮನಿಸಿದಾಗ, ಮಾಧ್ಯಮವನ್ನೊಳಗೊಂಡು ಯಾವುದೇ ವ್ಯಕ್ತಿ ತನ್ನದಾಗಲಿ ಅಥವಾ ಇತರೆ ವ್ಯಕ್ತಿಗಳ ಖಾಸಗಿ ಕ್ಷಣಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಲಂ ಗಳನ್ನು ವಿವರವಾಗಿ ನೋಡುವುದು ಅತ್ಯಗತ್ಯ.
ಕಲಂ 67: ಅಶ್ಲೀಲ ಮಾಹಿತಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಪ್ರಕಟಿಸಿದರೆ ಅಥವಾ ರವಾನಿಸಿದರೆ ದಂಡನೆ.

ಯಾವುದೇ ವ್ಯಕ್ತಿ ಪ್ರಚೋದನಕಾರಿ ಅಥವಾ ಕಾಮುಕ ಆಸಕ್ತಿ ಹೊಂದಿರುವಂತೆ ತೋರುವ ಮತ್ತು ಅದರಲ್ಲಿರುವ ಹಾಗೂ ಒಳಗೊಂಡಿರುವ ವಿಷಯವನ್ನು ಯಾವ ವ್ಯಕ್ತಿ ಓದಲು, ನೋಡಲು ಅಥವಾ ಕೇಳಲು ಸಾಧ್ಯತೆ ಇರುವ, ಭ್ರಷ್ಟರನ್ನಾಗಿಸುವ ಯಾವುದೇ ವಿಷಯದ ಬಗ್ಗೆ ಒಲವು ತೋರಿ ವಿದ್ಯುನ್ಮಾನ ರೂಪದಲ್ಲಿ ಪ್ರಕಟಿಸುವ, ಹರಡುವ ಅಥವಾ ರವಾನಿಸುವಂತಹ ಅಥವಾ ಅದಕ್ಕೆ ಪ್ರೇರೇಪಿಸುವಂತಹ ಮೊದಲನೇ ಅಪರಾಧ ನಿರ್ಣಯಕ್ಕೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ವಾಸ ಅಥವಾ ಐದು ಲಕ್ಷ ರೂಪಾಯಿಗಳವರೆಗೆ ದಂಡ ಎರಡರಲ್ಲೊಂದು ಮತ್ತು ಅಂತಹ ಎರಡನೇ ಅಥವಾ ನಂತರ ಅಪರಾಧ ನಿರ್ಣಯಕ್ಕೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ವಾಸ ಮತ್ತು ಹತ್ತು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ಎರಡರಲ್ಲೊಂದು.

    ಪ್ರಸಾರ ಮಾಡುವ ಸುದ್ದಿಯಲ್ಲಿ ನೋಡುಗರ, ಓದುಗರ ಅಥವಾ ಕೇಳುಗರ ಮನಸ್ಸನ್ನು ಕಾಮ ಪ್ರಚೋದಕಗೊಳಿಸುವ ರೀತಿಯಲ್ಲಿ ಅಥವಾ ಲೈಂಗಿಕ ಕ್ರಿಯೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವಂತಹ ಅಥವಾ ನೈತಿಕವಾಗಿ ಭ್ರಷ್ಟಗೊಳಿಸುವಂತಹ ರೀತಿಯಲ್ಲಿದ್ದರೆ, ಖಂಡಿತವಾಗಿ ಸಂಬಂಧಿಸಿದ ವ್ಯವಸ್ಥಾಪಕ ಸಂಪಾದಕರು, ಮಾಲೀಕರು ಹಾಗೂ ವರದಿಗಾರರು ಕಾನೂನಿನ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ.

    ಇನ್ನು ಪ್ರಸಾರ ಮಾಡಿದ ಸುದ್ದಿಯಲ್ಲೂ ಎನಾದರೂ ಲೈಂಗಿಕ ಕ್ರಿಯೆಯ ಚಟುವಟಿಕೆಗಳು ಕಂಡು ಬಂದರೆ ಆಗ ಕಲಂ 67ಎ ಅನ್ವಯವಾಗುತ್ತದೆ.

     ಕಲಂ 67ಎ: ಲೈಂಗಿಕತೆ ಪ್ರಕಟಿಸುವ ಕೃತ್ಯ, ಇತ್ಯಾದಿಗಳನ್ನು ಒಳಗೊಂಡಿರುವ ವಿಷಯಗಳನ್ನು ವಿದ್ಯುನ್ಮಾನ ರೂಪದಲ್ಲಿ ಪ್ರಕಟಿಸಿದರೆ ಅಥವಾ ರವಾನಿಸಿದರೆ ದಂಡನೆ.

     ಯಾವುದೇ ವ್ಯಕ್ತಿ ಪ್ರಚೋದನಕಾರಿ ಅಥವಾ ಕಾಮುಕ ಆಸಕ್ತಿ ಹೊಂದಿರುವಂತೆ ತೋರುವ ಮತ್ತು ಅದರಲ್ಲಿರುವ ಹಾಗೂ ಒಳಗೊಂಡಿರುವ ವಿಷಯವನ್ನು ಯಾವ ವ್ಯಕ್ತಿ ಓದಲು, ನೋಡಲು ಅಥವಾ ಕೇಳಲು ಸಾಧ್ಯತೆ ಇರುವ, ಭ್ರಷ್ಟರನ್ನಾಗಿಸುವ ಯಾವುದೇ ವಿಷಯದ ಬಗ್ಗೆ ಒಲವು ತೋರಿ ವಿದ್ಯುನ್ಮಾನ ರೂಪದಲ್ಲಿ ಪ್ರಕಟಿಸುವ, ಹರಡುವ ಅಥವಾ ರವಾನಿಸುವಂತಹ ಅಥವಾ ಅದಕ್ಕೆ ಪ್ರೇರೇಪಿಸುವಂತಹ ಮೊದಲನೇ ಅಪರಾಧ ನಿರ್ಣಯಕ್ಕೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ವಾಸ ಅಥವಾ ಐದು ಲಕ್ಷ ರೂಪಾಯಿಗಳವರೆಗೆ ದಂಡ ಎರಡರಲ್ಲೊಂದು ಮತ್ತು ಅಂತಹ ಎರಡನೇ ಅಥವಾ ನಂತರ ಅಪರಾಧ ನಿರ್ಣಯಕ್ಕೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ವಾಸ ಮತ್ತು ಹತ್ತು ಲಕ್ಷಗಳವರೆಗೆ ವಿಸ್ತರಿಸಬಹುದಾದ ದಂಡ ಎರಡರಲ್ಲೊಂದು.

      ಪ್ರಸಾರ ಮಾಡುವ ಸುದ್ದಿಯಲ್ಲಿ ನೋಡುಗರ, ಓದುಗರ ಅಥವಾ ಕೇಳುಗರ ಮನಸ್ಸನ್ನು ಕಾಮ ಪ್ರಚೋದಕಗೊಳಿಸುವ ರೀತಿಯಲ್ಲಿ ಅಥವಾ ಲೈಂಗಿಕ ಕ್ರಿಯೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುವಂತಹ ಅಥವಾ ನೈತಿಕವಾಗಿ ಭ್ರಷ್ಟಗೊಳಿಸುಂತಹ ರೀತಿಯಲ್ಲಿದ್ದರೆ, ಖಂಡಿತವಾಗಿ ಸಂಬಂಧಿಸಿದ ವ್ಯವಸ್ಥಾಪಕ ಸಂಪಾದಕರು, ಮಾಲೀಕರು ಹಾಗೂ ವರದಿಗಾರರು ಕಾನೂನಿನ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ. ಇನ್ನು ಪ್ರಸಾರ ಮಾಡಿದ ಸುದ್ದಿಯಲ್ಲು ಏನಾದರೂ ಲೈಂಗಿಕ ಕ್ರಿಯೆಯ ಚಟುವಟಿಕೆಗಳು ಕಂಡು ಬಂದರೆ ಆಗ ಕಲಂ 67ಎ ಅನ್ವಯವಾಗುತ್ತದೆ.

ಕಲಂ 67ಎ: ಲೈಂಗಿಕತೆ ಪ್ರಕಟಿಸುವ ಕೃತ್ಯ, ಇತ್ಯಾದಿಗಳನ್ನು ಒಳಗೊಂಡಿರುವ ವಿಷಯಗಳನ್ನು ವಿದ್ಯುನ್ಮಾನ ರೂಪದಲ್ಲಿ ಪ್ರಕಟಿಸಿದರೆ ಅಥವಾ ರವಾನಿಸಿದರೆ ದಂಡನೆ;
   ಲೈಂಗಿಕತೆಯನ್ನು ಬಹಿರಂಗಪಡಿಸುವ ಕ್ರಿಯೆ ಅಥವಾ ನಡವಳಿಕೆಯನ್ನು ಒಳಗೊಂಡಿರುವ ಯಾವುದೇ ವಸ್ತುವನ್ನು ವಿದ್ಯುನ್ಮಾನ ರೂಪದಲ್ಲಿ ಯಾರಾದರೂ ಪ್ರಕಟಿಸಿದರೆ ಅಥವಾ ರವಾನಿಸಿದರೆ ಅಥವಾ ಪ್ರಕಟಿಸಲು ಕಾರಣರಾದರೆ ಅಥವಾ ರವಾನಿಸಲು ಕಾರಣರಾದರೆ ಅಂತಹ ಮೊದಲನೆ ಅಪರಾಧ ನಿರ್ಣಯಕ್ಕೆ ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹವಾಸ ಅಥವಾ ಹತ್ತು ಲಕ್ಷರೂಪಾಯಿಗಳವರೆಗೆ ದಂಡ ಎರಡರಲ್ಲೊಂದು ಮತ್ತು ಅಂತಹ ಎರಡನೇ ಅಥವಾ ನಂತರ ಅಪರಾಧ ನಿರ್ಣಯಕ್ಕೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಕಾರಾಗೃಹ ವಾಸ ಮತ್ತು ಹತ್ತು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ಎರಡರಲ್ಲೊಂದು.

     ವೈದ್ಯಕೀಯ ಮಾಹಿತಿಗಳನ್ನು ನೀಡುವಾಗ ಲೈಂಗಿಕ ಶಿಕ್ಷಣದ ಮಾಹಿತಿಗಳನ್ನು ತೋರಿಸುವುದು ಅಪರಾಧವಲ್ಲ. ಆದರೆ ಸುದ್ದಿಯ ಹೆಸರಿನಲ್ಲಿ ವ್ಯಕ್ತಿಗಳ ಖಾಸಗಿ ಕ್ಷಣಗಳನ್ನು ‘ಬ್ಲರ್’ ಮಾಡಿ ತೋರಿಸಿದರು ಹಾಗೂ ಅವುಗಳು ಕಲಂ 67 ಅಥವಾ 67ಎ ವ್ಯಾಪ್ತಿಯಲ್ಲಿ ಬರುವಂತಾದರೆ ಕಾನೂನು ತನ್ನ ಕ್ರಮ ಕೈಗೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಮಾಧ್ಯಮದವರು ತಮ್ಮ ಪ್ರಸಾರ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಜನರ ಖಾಸಗಿತನದ ವಿಷಯಗಳನ್ನು ಬಹಿರಂಗಗೊಳಿಸಿದರೆ ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂದು ಮನಗಂಡು ಸ್ವ ನಿರ್ಬಂಧಿತ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.

error: Content is protected !!