ರಾಯಚೂರು ಜಿಲ್ಲಾ ಅಧ್ಯಕ್ಷರಾದ ಕೆ ನರಸಿಂಹ ನಾಯಕ್ ಹಾಗೂ ಸಂಘದ ವತಿಯಿಂದ ದಿನಾಂಕ 5 12 2022 ರಂದು ಅಂಬೇಡ್ಕರ್ ಸರ್ಕಲ್ ದಿಂದ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಜಾತ ಮುಖಂತರ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಕೆ ನರಸಿಂಹ ನಾಯಕ್ ಕಮಲಾಪುರ್ ಇವರು ನಮ್ಮ ಸಂಘದ 13 ಬೇಡಿಕೆಗಳನ್ನು ಈಡೇರಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ ಪಡೆಯಬೇಕು, ಕೇಂದ್ರ ಸರ್ಕಾರ ವಾಪಸ್ ಪಡೆದ ರೀತಿಯಲ್ಲಿ ರಾಜ್ಯ ಸರ್ಕಾರವು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ರೈತರು ಬೆಳೆದಂತಹ ಬೆಳೆಗಳಿಗೆ ಕಾನೂನಾತ್ಮಕ ಬೆಲೆ ನಿಗದಿ ಪಡಿಸಬೇಕು ರೈತರ ಪಂಪ್ಸೆಟ್ ಗಳಿಗೆ ವಿದ್ಯುತ್ ಮೀಟರ್ ಅಳವಡಿಸುವುದನ್ನು ರದ್ದುಪಡಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮಾನ್ಯ ಜಿಲ್ಲಾಧಿ ಕಾರಿಗಳ ಮುಖಾಂತರ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಮನವಿ ಪತ್ರವನ್ನು ಕಳಿಸಲು ಒತ್ತಾಯಿಸಿದರು.