ಭಾರತದಲ್ಲಿ ನ್ಯಾಯ ವಿಳಂಬವಾಗಿ ಸಿಗುತ್ತದೆ ಎಂಬ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತೆ 32 ವರ್ಷಗಳ ಹಿಂದೆ ಅಂದರೆ 1991ರಲ್ಲಿ ನೂರು ರೂಪಾಯಿ ಲಂಚ ಪಡೆದ ವ್ಯಕ್ತಿಗೆ ಈಗ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿವರ: ಉತ್ತರ ಪ್ರದೇಶದ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮ ನಾರಾಯಣ ವರ್ಮ ಎಂಬವರು, ಪಿಂಚಣಿ ದಾಖಲಾತಿಗೆ ಸಂಬಂಧಿಸಿದಂತೆ ಉತ್ತರ ರೈಲ್ವೆ ನಿವೃತ್ತ ಚಾಲಕ ರಾಮ್ ಕುಮಾರ್ ತಿವಾರಿ ಅವರಿಂದ 150 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಮಾತುಕತೆ ಬಳಿಕ ನೂರು ರೂಪಾಯಿ ಲಂಚಕ್ಕೆ ರಾಮನಾರಾಯಣ ವರ್ಮಾ ಒಪ್ಪಿಕೊಂಡಿದ್ದು, ಆಗ ದಾಳಿ ನಡೆಸಿದ ಸಿಬಿಐ, ಲಂಚದ ಹಣದೊಂದಿಗೆ ರೆಡ್ ಹ್ಯಾಂಡ್ ಆಗಿ ರಾಮ ನಾರಾಯಣ ವರ್ಮಾರನ್ನು ಬಂಧಿಸಿ ಪ್ರಕರಣ ದಾಖಲಿಸಿತ್ತು. ಇದರ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸುದೀರ್ಘವಾಗಿ ನಡೆದಿತ್ತು.

ಇದೀಗ ಪ್ರಕರಣದ ತೀರ್ಪು ಹೊರ ಬಿದ್ದಿದ್ದು ಈಗ 82 ವರ್ಷದವರಾಗಿರುವ ರಾಮನಾರಾಯಣ ವರ್ಮಾ ಅವರಿಗೆ ಒಂದು ವರ್ಷದ ಜೈಲು ಶಿಕ್ಷೆ ಜೊತೆಗೆ 15,000 ರೂಪಾಯಿ ದಂಡ ವಿಧಿಸಲಾಗಿದೆ.

error: Content is protected !!