ಗಂಗಾವತಿ :ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ್ದು ಕರ್ನಾಟಕದ ಎಲ್ಲ ಜನತೆಯನ್ನು ನಿರಾಶೆಗೆ ದೂಡಿದಂತಾಗಿದೆ.ಕರ್ನಾಟಕದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಕಾಗುವಷ್ಟು ಹಣಕಾಸನ್ನು ಈ ಬಜೆಟ್ ಅಲ್ಲಿ ಇಡಲು ವಿಫಲವಾಗಿದೆ.

ಮಹದಾಯಿ ಯೋಜನೆಯ ಬಗ್ಗೆ ಚಕಾರವನ್ನು ಎತ್ತದ ಈ ಬಜೆಟ್ ನಿಜವಾಗಿಯೂ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದಂತಾಗಿದೆ, ಶಿಕ್ಷಣದ ವಿಚಾರಕ್ಕೆ ಬಂದರೆ ಇಂದಿನ ಡಿಜಿಟಲ್ ಶೈಕ್ಷಣಿಕ ಯುಗದಲ್ಲಿಯೂ ಕೂಡ ಶೇಕಡ 9 ರಷ್ಟು ಹಣಕಾಸು ಸಹ ಶಿಕ್ಷಣಕ್ಕೆ ಮೀಸಲಿಡುವಲ್ಲಿ ಸಫಲವಾಗಿಲ್ಲ, ವಿದ್ಯಾರ್ಥಿಗಳ ಅಭಿವೃದ್ಧಿಗೆ ಯಾವುದೇ ಕ್ರಮವನ್ನು, ಶಿಕ್ಷಣದ ಸಬಲೀಕರಣಕ್ಕೆ ಪ್ರಯತ್ನವನ್ನಾಗಲಿ ಹಣಕಾಸು ನಿಯೋಜನೆ ಆಗಲಿ ಮಾಡಿಲ್ಲದ ಶಿಕ್ಷಣ ವಿರೋಧಿ ಬಜೆಟ್ ಇದಾಗಿದೆ, ರೈತ ಸಮುದಾಯಕ್ಕಂತೂ ದೀರ್ಘಕಾಲದ ಮತ್ತು ಪರಿಣಾಮಕಾರಿಯಾದ ಯಾವುದೇ ಯೋಜನೆಗಳಿಗೆ ಹಣಕಾಸನ್ನು ಮೀಸಲಿಡುವಲ್ಲಿ ಸಂಪೂರ್ಣ ವಿಫಲವಾಗಿದೆ .

ಆ ಮೂಲಕ ರೈತರ ಬಡ ಬೆನ್ನೆಲುಬುಗೆ ಮತ್ತೆ ಹೊಡೆತ ಕೊಟ್ಟಿದೆ.ಕೇವಲ ಕರ್ನಾಟಕದ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾತ್ರ ಮಾಡಿದ್ದ ಕೇಂದ್ರ ಸರ್ಕಾರ ಜನಸಾಮಾನ್ಯರ ನಿರೀಕ್ಷೆಗಳನ್ನು ಗಾಳಿಗೆ ತೂರಿದ ಶ್ರೀಮಂತರ ಬಜೆಟ್ ಇದಾಗಿದೆ, ಇದೆ ಬಿಜೆಪಿ ಸರ್ಕಾರ ಮಂಡಿಸಿದ ಕೊನೆಯ ಬಜೆಟ್ ಆಗಲಿ ಎಂದು ಜನಸಾಮಾನ್ಯರ ನಿರೀಕ್ಷೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ-ಎಂದು ಹರಿಹಾಯ್ದಿದ್ದಾರೆ.

error: Content is protected !!