ಗಂಗಾವತಿ. ನಗರಕ್ಕೆ ನೂತನವಾಗಿ ಆಗಮಿಸಿದ   ಡಿವೈಎಸ್ಪಿ ಶೇಖರಪ್ಪ  ಎಚ್ ಮತ್ತು ನಗರ ಠಾಣೆಯ ಸಿಪಿಐ ಅಡಿವೆಪ್ಪ ಅವರಿಗೆ  ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ)  ಜಿಲ್ಲಾ ಸಮಿತಿ ವತಿಯಿಂದ  ಗೌರವ ಪೂರಕವಾಗಿ ಸ್ವಾಗತವನ್ನು ಸಲ್ಲಿಸಲಾಯಿತು.

ನಂತರ  ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ ಬರಗೂರು ಡಿವೈಎಸ್ಪಿ ಜೊತೆ ಮಾತನಾಡಿ ಗಂಗಾವತಿ ತಾಲೂಕು ಕಾರಟಗಿ ತಾಲೂಕು ಕನಕಗಿರಿ ತಾಲೂಕುಗಳಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು  ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಅದಕ್ಕೆ ತಾವು ಕಡಿವಾಣ ಕಡಿವಾಣ ಹಾಕಲು ಮುಂದಾಗಬೇಕೆಂದು ಅವರಲ್ಲಿ  ಮನವಿ ಮಾಡಿದರು .

ನಮ್ಮ ಸಂಘಟನೆ  ಅನ್ಯಾಯದ ವಿರುದ್ಧ ನ್ಯಾಯದ ಪರವಾಗಿ ಸತತವಾಗಿ ಹಲವು ವರ್ಷಗಳಿಂದ ಜಿಲ್ಲೆಯಾದ್ಯಂತ ಬಡವರ ಹಿಂದುಳಿದವರ ಪರವಾಗಿ  ಉತ್ತಮ ಜನಪರ ಹೋರಾಟಗಳನ್ನು ಮಾಡುತ್ತಿದ್ದು ನಮ್ಮ ಸಂಘಟನೆಗೆ ನಿಮ್ಮ ಸಹಕಾರ ಅಗತ್ಯವಿದೆ ಎಂದು ಹೇಳಿದರು ತಾವು ನಮ್ಮ ಗಂಗಾವತಿ ನಗರಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು  ಆತ್ಮೀಯವಾಗಿ ಸ್ವಾಗತವನ್ನು ಕೋರಿದರು ಈ ಸಂದರ್ಭದಲ್ಲಿ.

ಮಂಜುನಾಥ್ ದಾವಿ. ಭಾಷಾ. ಸಂತೋಷ ಅಯೋಧ್ಯ. ಪರಶುರಾಮ್. ನಾಸಿರ್. ಸದ್ದಂ ಗಂಗಾವತಿ. ದುರ್ಗೇಶ್ ಅಳ್ಳಳ್ಳಿ. ಸುರೇಶ್ ಗಾಂಧಿನಗರ. ಸುಂಕಪ್ಪ ಗಂಗಾವತಿ. ಶಿವರಾಜ್ ಸಂಗಾಪುರ್. ಜಂಬೂ ಗಂಗಾವತಿ. ಇತರರಿದ್ದರು

error: Content is protected !!