
ಯಾದಗಿರಿ: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾದಗಿರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ನಾನು ಅವರಿಗೆ ನೆರವಾಗುವೆ ಎಂದು ಬಿಜೆಪಿ ಮುಖಂಡರೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಚಂದ್ರರಾಯ ನಾಗರಾಳ ಹುಲಕಲ್, ”ನಾನು ಬಿಜೆಪಿ ಕಾರ್ಯಕರ್ತನಾಗಿದ್ದರೂ ಪಕ್ಷ ತೊರೆದು ಕಾಂಗ್ರೆಸ್ ಸೇರುವೆ.
ಸಿದ್ದರಾಮಯ್ಯ ಅವರ ಚುನಾವಣಾ ಖರ್ಚು ನಿಭಾಯಿಸುವೆ. ಅವರು ಸ್ಪರ್ಧಿಸಿದರೆ, ಯಾದಗಿರಿ ಸೇರಿ ಇಡೀ ಜಿಲ್ಲೆ ಅಭಿವೃದ್ಧಿ ಆಗುವುದು” ಎಂದು ಹೇಳಿದರು.
‘ನಾನು ರೈತನೇ ಹೊರತು ಉದ್ಯಮಿ, ಗುತ್ತಿಗೆದಾರ ಅಲ್ಲ. ಸಿದ್ದರಾಮಯ್ಯ ಅವರು ಸ್ಪರ್ಧಿಸಿದರೆ, 1 ಕೋಟಿ ನೀಡುವೆ. ಶಹಾಪುರದ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಯಾದಗಿರಿಯಿಂದ ಸ್ಪರ್ಧಿಸಿದರೆ 25 ಲಕ್ಷ ರೂ.ನೀಡುವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.