ಮೈಸೂರು, ಜ.28: ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವುದು ಸ್ವಾಗತಾರ್ಹ. ಆದರೆ ಅವರು ನರೇಂದ್ರ ಮೋದಿಯಿಂದಲೇ ಈ ಪ್ರಶಸ್ತಿ ಲಭಿಸಿರುವುದು ಎಂಬ ಹೇಳಿಕೆ ನೀಡಿದ್ದು, ಇದು ಭೈರಪ್ಪರ ಘನತೆಯನ್ನು ಕಡಿಮೆ ಮಾಡಲಿದೆ, ಪ್ರಶಸ್ತಿಯ ಗೌರವಕ್ಕೆ ಕುಂದುಂಟು ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೀವೊಬ್ಬ ದೊಡ್ಡ ಸಾಹಿತಿ, ನಿಮ್ಮ ಬರವಣಿಗೆ ಯೋಚನಾ ಲಹರಿಯಿಂದ ಹಲವಾರು ಸಾಹಿತ್ಯಗಳು ಹೊರಬಂದಿವೆ. ಆ ಹಿನ್ನಲೆಯಲ್ಲಿ ನಿಮಗೆ ಪದ್ಮಭೂಷಣ ಲಭಿಸಿರುವುದು. ನೀವು ಬರವಣಿಗೆ ಪ್ರಾರಂಭ ಮಾಡಿದಾಗ ಮೋದಿ ಹುಟ್ಟಿರಲಿಲ್ಲವೇನೊ. ಆದರೆ ನೀವು ಮೋದಿಯಿಂದಲೇ ಪದ್ಮಭೂಷಣ ಬಂದಿರುವುದು ಎಂದಿರುವುದು ಅತ್ಯಂತ ದುರಂತ ಎಂದು ಹೇಳಿದರು.

ನಿಮಗೆ ಪದ್ಮಭೂ಼ಷಣ ಲಭಿಸಿದೆ.‌ ಇನ್ನೇನು ಬೇಕು, ಜ್ಞಾನಪೀಠಕ್ಕಾಗಿ ಓಲೈಕೆಯ ಮಾತುಗಳನ್ನು ಆಡುತ್ತಿದ್ದೀರಿ. ಅದು ಸಿಗಲಿದೆ. ಸ್ವಲ್ಪ ಕಾಯಿರಿ, ಅದಕ್ಕಾಗಿ ಮೋದಿ ಕುರಿತು ಓಲೈಕೆಯ ಮಾತುಗಳನ್ನು ಆಡಬೇಡಿ ಎಂದು ಎಚ್.ವಿಶ್ವನಾಥ್ ನುಡಿದರು.

error: Content is protected !!