ಚಿಕ್ಕಮಗಳೂರು, ಜ.26 : ‘ಆರೋಪ ಮಾಡುವವರು ಅಧಾರವನ್ನ ಕೊಡಬೇಕು. ಅಲ್ಲದೇ, ಆರೋಪ ಮಾಡುವವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಭರವಸೆ ಇಟ್ಟಿರಬೇಕು’ ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ.ರವಿ, ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್​ ಮಾಡಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.

”ಆಧಾರವನ್ನ ಕೊಟ್ಟು ಆರೋಪ ಮಾಡಿದರೆ ನಂಬಬಹುದು. ಈಗ ಕಾಲಕೆಟ್ಟು ಹೋಗಿದೆ, ಹಿಂದೆಲ್ಲ ಹೀಗಿರಲಿಲ್ಲ, ಎಲ್ಲರೂ ಕಳ್ಳರು ಅಂತ ಸಾಮಾನ್ಯವಾಗಿ ಮಾತಿಗೆ ಹೇಳುತ್ತಾರೆ. ಅದು‌ ಆರೋಪ ಅನ್ನಿಸಿಕೊಳ್ಳುತ್ತೆ. ಆದರೆ, ಸಾರ್ವತ್ರಿಕವಾಗಿ ಎಲ್ಲರೂ ಕಳ್ಳರು ಎಂದು ಹೇಳಲಾಗುವುದಿಲ್ಲ” ಎಂದು ಅಭಿಪ್ರಾಯಿಸಿದರು.

ಹಾಸನದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಧಿಸಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೊಡ್ಡಗೌಡರ ಕುಟುಂಬದ ಜಗಳದಲ್ಲಿ ನಾವು ತಲೆ ಹಾಕುವುದಕ್ಕೆ ಬಯಸುವುದಿಲ್ಲ. ಅವರ ಕುಟುಂಬದ ಒಳಗಿನ ಜಗಳದಲ್ಲಿ ನಮ್ಮ ಪಾತ್ರ ಏನಿಲ್ಲ.ಆ ಕುಟುಂಬದೊಳಗಿನ ಜಗಳದ ಒಳಗೆ ನಾವೇಕೆ ಕೈ ಹಾಕಬೇಕು? ಆ ಕುಟುಂಬದ ಜಗಳ ಅವರಿಗೆ ಬಿಡ್ತೀವಿ ಎಂದು ಹೇಳಿದರು.

error: Content is protected !!