
ಹುಬ್ಬಳ್ಳಿ: ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ 1 ಕೋಟಿಗೂ ಅಧಿಕ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಪನಗರ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಸವ ರಿತೀಕ್ ಪ್ರಮೋದ್ ಬಂಧಿತ ಆರೋಪಿ.
ವ್ಯಕ್ತಿಯೊರ್ವ ಹೊಸ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟ್ಟಿದ್ದ. 2,000, 500, 200 ಹಾಗೂ 100 ರೂಪಾಯಿ ಮುಖಬೆಲೆಯ ಒಟ್ಟು 1 ಕೋಟಿ 14 ಲಕ್ಷ 70ಸಾವಿರ ರೂಪಾಯಿಯನ್ನು ಯಾವುದೇ ದಾಖಲೆಗಳಿಲ್ಲದೇ ಅನಧಿಕೃತವಾಗಿ ಹಣ ಸಾಗಿಸುತ್ತಿದ್ದ. ಈ ವೇಳೆ ಅನುಮಾನಗೊಂಡ ಪೊಲೀಸ್ ಅಧಿಕರಿಗಳು ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಸ್ ಹೂಗಾರ ನೇತೃತ್ವದಲ್ಲಿ ದಾಳಿ ನಡೆಸಿ ನಗದು ಹಣದ ಜೊತೆ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಈ ಕುರಿತು ಉಪನಗರ ಠಾಣೆ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.