ಬೆಂಗಳೂರು: ಕಸವನಹಳ್ಳಿ ರೋಡ್​ನಲ್ಲಿ ನಿತ್ಯ ಎಮ್ಮೆಗಳಿಂದ ಟ್ರಾಫಿಕ್ ಜಾಮ್​ ಉಂಟಾಗುತ್ತಿದೆ. ಇದರಿಂದ ಆ ಮಾರ್ಗವಾಗಿ ಚಲಿಸುವ MNC ಟೆಕ್ಕಿಗಳೆಲ್ಲ ಕಂಗಾಲಾಗಿದ್ದಾರೆ. ಹೀಗಾಗಿ ಎಮ್ಮೆಗಳ ವಿರುದ್ಧವೇ ಟೆಕ್ಕಿಗಳು ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಸೇವ್​ ಬೆಳ್ಳಂದೂರು ಎಂಬ ಟ್ವಿಟರ್​​ ಖಾತೆಯಿಂದ ಪೋಸ್ಟ್​ ಮಾಡಲಾಗಿದೆ. 3 ಪೋಟೋಗಳಲ್ಲಿ ಎಮ್ಮೆಗಳು ಸಾಲಾಗಿ ಹೋಗುತ್ತಿವೆ. ವಾಹನಗಳು ಅವುಗಳ ಹಿಂದೆ ನಿಂತುಕೊಂಡಿವೆ. ಇನ್ನು ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿಗೆ ಟ್ವೀಟ್​​ ಟ್ಯಾಗ್ ಮಾಡಲಾಗಿದೆ.

ಎಮ್ಮೆಗಳು ಸರತಿ ಸಾಲಿನಲ್ಲಿ ಹೋಗುವುದರಿಂದ ಕಸವನಹಳ್ಳಿ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್​ ಆಗುತ್ತಿದೆ. ದಿನಲೂ ಬೆಳಗ್ಗೆ ಆಫೀಸ್​ಗೆ ಹೋಗಬೇಕಾದ್ರೆ ತೊಂದರೆಯಾಗುತ್ತಿದೆ. ಇವುಗಳಿಂದ 45 ನಿಮಿಷ ಟ್ರಾಫಿಕ್​ನಲ್ಲೇ ನಿಲ್ಲಬೇಕಾಗಿದೆ. ಹೀಗಾಗಿ ಆಫೀಸ್​ಗೆ ಹೋಗಲು ತಡವಾಗುತ್ತಿದೆ. ಎಮ್ಮೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಟ್ವಿಟರ್​ ಮೂಲಕ ದೂರು ನೀಡಿದ್ದಾರೆ.

error: Content is protected !!