
*ಹಣ ಮಾಡುವುದಷ್ಟೇ ಇನ್‌ಫುಯೆನ್ಸರ್‌ಗಳ ಕೆಲಸವಲ್ಲ
*ಇನ್‌ಫ್ಲುಯೆನ್ಸರ್‌ಗಳ ಅಸಲಿ ಜವಾಬ್ದಾರಿ ನೆನಪಿಸಿದ ಕೇಂದ್ರ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು
ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಯುವಜನತೆ ತಮ್ಮಕಲೆ ಮತ್ತು ವೈಶಿಷ್ಟ್ಯಗಳನ್ನು ಜನರ ಮುಂದೆ ತೆರೆದಿಡುವ ಮೂಲಕ ಇನ್‌ಫುಯೆನ್ಸರ್‌ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಸಿನಿಮಾ ತಾರೆಯರು, ಖ್ಯಾತ ಕ್ರೀಡಾ ಪಟುಗಳು ಕೂಡ ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಲ್ಲಿ
ಸಕ್ರಿಯರಾಗಿರುತ್ತಾರೆ. ನಾನಾ ಹಿನ್ನೆಲೆಯ ಅನೇಕರು
ಇವತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಫುಯೆನ್ಸರ್‌ಗಳಾಗಿ ಗುರುತಿಸಿಕೊಂಡಿದ್ದು, ತಮ್ಮ
ಪೋಸ್ಟ್ (ವಿಡಿಯೋ, ಫೋಟೋ) ಗಳಲ್ಲಿ ವಾಣಿಜ್ಯ
ಉತ್ಪನ್ನಗಳು ಅಥವಾ ಗ್ರಾಹಕ ಸೇವಾ ಸಂಸ್ಥೆಗಳಿಗೆ ಪ್ರಚಾರ
ನೀಡಿ ಲಕ್ಷ, ಕೋಟಿಗಟ್ಟಲೇ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಹೀಗೆ ಭಾರೀ ಮೊತ್ತದ ಹಣ ಪಡೆದು ವಾಣಿಜ್ಯ ಉತ್ಪನ್ನ ಮತ್ತು ಗ್ರಾಹಕ ಸೇವೆಗಳಿಗೆ ಪ್ರಚಾರ ನೀಡುವ ವರ್ಗ, ತಾವು ವೀಕ್ಷಕರಿಗೆ ಶಿಫಾರಸು ಮಾಡುವ ಉತ್ಪನ್ನಗಳ ಬಗ್ಗೆ ಸರಿಯಾದ ಮಾಹಿತಿ ನೀಡದೆ ಅಥವಾ ನಿಖರ ಮಾಹಿತಿ ಮರೆಮಾಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ವ್ಯವಹಾರಗಳ ಸಚಿವಾಲಯ ಇದೀಗ
ಇನ್‌ಫುಯೆನ್ಸರ್‌ಗಳಿಗೆ ತಮ್ಮ ಅಸಲಿ ಜವಾಬ್ದಾರಿ
ಮನದಟ್ಟು ಮಾಡಿಸಲು ಹೊಸ ಮಾರ್ಗಸೂಚಿಗಳನ್ನು
ಹೊರಡಿಸಿದೆ.
ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ವಾಣಿಜ್ಯ
ಉತ್ಪನ್ನ ಮತ್ತು ಸೇವೆಗಳ ಪ್ರಚಾರಕ್ಕಿಳಿಯುವ
ಇನ್‌ಫುಯೆನ್ಸರ್‌ಗಳು ಕೇಂದ್ರದ ಹೊಸ ಮಾರ್ಗಸೂಚಿ
ಪಾಲಿಸಲೇಬೇಕು. ಇಲ್ಲವಾದಲ್ಲಿ 10ರಿಂದ 50
ಲಕ್ಷದವರೆಗಿನ ದಂಡಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.
ಜೊತೆಗೆ ನಿಯಮ ಪಾಲಿಸದ ಇನ್‌ಫುಯೆನ್ಸರ್‌ಗಳ
ಸಾಮಾಜಿಕ ಜಾಲತಾಣ ಖಾತೆಗಳನ್ನು 6 ತಿಂಗಳಿನಿಂದ 2ವರ್ಷದವರೆಗೆ ಅಮಾನತು ಮಾಡುವ ಅಧಿಕಾರ
ನಮಗಿರುತ್ತದೆ ಎಂದು ಗ್ರಾಹಕ ಸಚಿವಾಲಯದ
ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು
*ತಮ್ಮ ಪೋಸ್ಟ್‌ಗಳಲ್ಲಿ (ವಿಡಿಯೋ ಅಥವಾ ಫೋಟೋ)
ಇನ್‌ಫುಯೆನ್ಸರ್‌ಗಳು ಜಾಹಿರಾತು ಪ್ರದರ್ಶಿಸುವಾಗ
ಅದು ಪ್ರಾಯೋಜಿತ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿ
ಗೋಚರಿಸುವಂತೆ ನೋಡಿಕೊಳ್ಳಬೇಕು. ಪೋಸ್ಟ್
ಜೊತೆಗಿನ ವಿವರಣೆಯ ಜಾಗದಲ್ಲೂ ಜಾಹಿರಾತು
ಕುರಿತಾದ ವಿವರಗಳನ್ನು ಹ್ಯಾಷ್‌ಟ್ಯಾಗ್ ಅಥವಾ
ಲಿಂಕ್‌ಗಳ ಜೊತೆಗೆ ಬೆರಸಿ ಗ್ರಾಹಕರಲ್ಲಿ ಗೊಂದಲ ಮೂಡಿಸಬಾರದು.
*ಇನ್‌ಫುಯೆನ್ಸರ್‌ಗಳು ತಮ್ಮ ಪೋಸ್ಟ್‌ಗಳಲ್ಲಿ (ವಿಡಿಯೋ
ಅಥವಾ ಫೋಟೋ ತೋರಿಸುವ ಜಾಹಿರಾತು ಮತ್ತುಅದರ ಬಗೆಗಿನ ವಿವರಗಳು ಒಂದೇ
ಭಾಷೆಯಲ್ಲಿರಬೇಕು.
*ನಿರ್ದಿಷ್ಟ ಪೋಸ್ಟ್ (ವಿಡಿಯೋ ಅಥವಾ ಫೋಟೋ)
ಪ್ರಾಯೋಜಿತವಾಗಿದ್ದಲ್ಲಿ ಅಂತಹ ವಿಡಿಯೋ ಪ್ರಸಾರದ
ಅವಧಿಯುದ್ದಕ್ಕೂ ಅದು ಪ್ರಾಯೋಜಿತ ವಿಡಿಯೋ
ಎಂಬುದನ್ನು ವೀಕ್ಷಕರಿಗೆ ಮನದಟ್ಟಾಗುವಂತೆ
ಸೂಚನೆಗಳನ್ನು ನೀಡಬೇಕು. ಫೋಟೋಗಳಾದರೆ
ಅದರಲ್ಲೂ ಪ್ರಾಯೋಜಿತ ಅಥವಾ ಜಾಹಿರಾತು ಎಂಬ
ಸೂಚನೆ ನೀಡಬೇಕು.
*ಪೋಸ್ಟ್ (ವಿಡಿಯೋ ಅಥವಾ ಫೋಟೋ) ಜೊತೆಗಿನ
ವಿವರಣೆಯಲ್ಲಿ ಯಾವುದೇ ರೀತಿಯ ಲಿಂಕ್‌ಗಳನ್ನು
ನೀಡಿ, ನೋಡುಗರಿಗೆ ಶಿಫಾರಸು ಮಾಡುವಾಗಲೂ ಆನಿರ್ದಿಷ್ಟ ಲಿಂಕ್ ಬಗೆಗಿನ ನಿಖರ ಮಾಹಿತಿ
ಹಂಚಿಕೊಳ್ಳುವುದು ಕಡ್ಡಾಯ.
*ಪೋಸ್ಟ್‌ನಲ್ಲಿ (ವಿಡಿಯೋ ಅಥವಾ ಫೋಟೋ) ಬರುವ
ಉತ್ಪನ್ನ ಅಥವಾ ಸೇವೆಗಳ ಕುರಿತಾದ ಮಾಹಿತಿ
ಜಾಹಿರಾತು ಅಥವಾ ಪ್ರಾಯೋಜಿತ ಎಂಬುದನ್ನು
ಆಡಿಯೋ, ವಿಡಿಯೋ ಅಥವಾ ಬರಹದ ರೂಪದಲ್ಲಿ
ಇನ್‌ಫುಯೆನ್ಸರ್‌ಗಳು ಬಹಿರಂಗಪಡಿಸಬೇಕು