
ಗಂಗಾವತಿ : ಗಾಲಿ ಜನಾರ್ಧನ ರೆಡ್ಡಿ ಎಂಬ ಮಿಣುಕು ದೀಪದ ಬೆನ್ನತ್ತಿ ಹೋದವರು ರೆಕ್ಕೆ ಸುಟ್ಟ ಮಿಂಚು ಹುಳುಗಳಂತಾಗುತ್ತಾರೆ. ಕ್ಷಣಿಕ ಆಕರ್ಷಣೆಗೆ ಒಳಗಾಗದೇ ಕಾದು ನೋಡಿ ಪರಾಮರ್ಶಿಸಿ ಯುವಕರು
ಕೆ.ಆರ್.ಪಿ.ಪಿ ಪಕ್ಷ ಸೇರುವ ನಿರ್ಧಾರ ಮಾಡಿ ದುಡುಕಬೇಡಿ ಕಾಂಗ್ರೆಸ್ ಯುವ ಮುಖಂಡ ರಮೇಶ ಕಾಳೆ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಿಗೆ ಹಾಗೂ ಪ್ರಮುಖ ಮುಖಂಡರುಗಳಿಗೆ ಆಮೀಷವೊಡ್ಡಿ ಕೆ.ಆರ್.ಪಿ.ಪಿ. ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯುವಕರು, ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಆಮೀಷಕ್ಕೆ ಒಳಗಾಗದೇ ಪಕ್ಷದ ಪರ ನಿಷ್ಠೆ ತೋರುವ ಸಮಯ ಬಂದಿದೆ.
ಅಭಿವೃದ್ಧಿ ಹರಿಕಾರ ಇಕ್ಬಾಲ್ ಅನ್ಸಾರಿಯವರ ಎರಡು
ಅವಧಿಯ ಆಡಳಿತ ಕಾಲದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಕಣ್ಣ ಮುಂದೆಯೇ ಇದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಸಂಘಟಿಸಿ ಮತ್ತೊಮ್ಮೆ ಅನ್ಸಾರಿಯವರನ್ನು ಅಧಿಕಾರಕ್ಕೆ ತರುವ ಕಾರ್ಯದಲ್ಲಿ ಯುವಕರು ತೊಡಗಬೇಕಿದೆ.
ಗಣಿಧಣಿ ಖ್ಯಾತಿಯ ರೆಡ್ಡಿ ಬಿಜೆಪಿ ಆಡಳಿತ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕೊಪ್ಪಳ ಜಿಲ್ಲೆಗೆ ಯಾವುದೇ ಕೊಡುಗೆಯನ್ನು ನೀಡಿರುವುದಿಲ್ಲ. ಹಣ ಮತ್ತು ಅಧಿಕಾರ ಇದ್ದಾಗಲೇ ಏನು ಮಾಡದ ವ್ಯಕ್ತಿ ಈಗ ಸ್ವಾಭಿಮಾನದ ಹೆಸರಿನಲ್ಲಿ ವೈಯಕ್ತಿಕ ಕಾರ್ಯಸಾಧನೆಗಾಗಿ ರಾಜಕೀಯ ಪ್ರವೇಶಿಸಿದ್ದಾರೆ. ಇದನ್ನು ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರು ಗಮನಿಸುತ್ತಿದ್ದಾರೆ.
ಹಾಗಾಗಿ ಕಾರ್ಯಕರ್ತರು ರೆಡ್ಡಿಯ ಪ್ರಭಾವಕ್ಕೆ ಒಳಗಾಗದೇ ಕಾಂಗ್ರೆಸ್ ಪರ ನಿಲ್ಲುವುದರ ಜೊತೆಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಕೈಬಲಪಡಿಸಬೇಕು. ರೆಡ್ಡಿ ಪಕ್ಷ ಸೇರಿದವರ ಸದ್ಯದ ಸ್ಥಾನಮಾನಗಳು ಏನಿವೆ ಎಂಬುವುದು ಈಗಾಗಲೇ ಬಯಲಾಗಿದೆ. ಪಕ್ಷ ಸೇರುವವರೆಗೂ ಮಾತ್ರ ಅಲ್ಲಿ ಗೌರವ, ನಂತರ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕ್ಷೇತ್ರದಾದ್ಯಂತ ಕೇಳಿಬರುತ್ತಿರುವುದು ರೆಡ್ಡಿಯ ಸ್ವಾರ್ಥ ರಾಜಕೀಯಕ್ಕೆ ಸಾಕ್ಷಿ ಎಂದು ಪತ್ರಿಕಾ
ಪ್ರಕಟಣೆ ಮೂಲಕ ತಿಳಿಸಿದ್ದಾರೆ.