ಬಳ್ಳಾರಿ: ಕಣ್ಮನ ಸೆಳೆಯುವ ವಿವಿಧ ವಿನ್ಯಾಸದ ಚಿತ್ರಗಳು, ಕಲಾತ್ಮಕತೆಯಿಂದ ಕೂಡಿದ ಬಗೆಬಗೆಯ ವಿನ್ಯಾಸಗಳು ಅಂಗೈನಲ್ಲಿ ಮೂಡಿದ  ಸುಂದರ ಕ್ಷಣವದು.
ನಗರ ಮುನಿಸಿಪಲ್ ಮೈದಾನದಲ್ಲಿ ಶನಿವಾರ ಬಳ್ಳಾರಿ ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮೆಹಂದಿ ಸ್ಪರ್ಧೆಯಲ್ಲಿ ವಿವಿಧ ಶೈಲಿಯ ಮೆಹಂದಿಯ ಪ್ರದರ್ಶನ ಕಂಡುಬಂತು.

  ಮೆಹಂದಿ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಎಲ್ಲರೂ ಗಮನ ಸೆಳೆಯುವಂತೆ ಮೆಹಂದಿ ಹಾಕಿಸಿಕೊಂಡರು.

  ಬೆಳಿಗ್ಗೆ 10.45 ಕ್ಕೆ ಆರಂಭವಾದ ಮೆಹಂದಿ ಸ್ಪರ್ಧೆಯು ಮಧ್ಯಾಹ್ನ 12.15 ರವರೆಗೂ ನಡೆಯಿತು. ಅಂಗೈನಲ್ಲಿ ತಮ್ಮ ಕಲ್ಪನೆಯ ಚಿತ್ತಾರ ಮೂಡಿಸಲು ಸುಮಾರು 1.30 ಗಂಟೆಯ ಕಾಲಾವಕಾಶ ನೀಡಲಾಗಿತ್ತು.

ಮೆಹಂದಿ ಸ್ಪರ್ಧೆಯ ತೀರ್ಪುಗಾರರಾಗಿ ಪೆÇ್ರೀಬೇಷನರಿ ಐ ಎ ಎಸ್ ಅಧಿಕಾರಿ ರೂಪಿಂದರ್ ಕೌರ್ ಕಾರ್ಯನಿರ್ವಹಿಸಿದರು.

ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿವರಿಗೆ ರೂ. 3000/-, ದ್ವಿತೀಯ ಸ್ಥಾನಕ್ಕೆ ರೂ. 2000/- ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 1000/- ನಗದು ಬಹುಮಾನ, ಐದು ಸಮಾಧಾನಕರ ಬಹುಮಾನ ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ಬಳ್ಳಾರಿ ಉತ್ಸದ ನಿಮಿತ್ತ ಅಭಿನಂದನಾ ಪತ್ರ ನೀಡಲಾಯಿತು.

ಬಳ್ಳಾರಿ ಉತ್ಸವಕ್ಕೆ ಮಹಿಳಾ ಮೆರಗು: ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವದಲ್ಲಿ ನಗರದ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ಸವಕ್ಕೆ ವಿಶೇಷ ಮೆರಗು ನೀಡಿದ್ದಾರೆ ಎಂದು ಪಾಲಿಕೆ ಮೇಯರ್ ರಾಜೇಶ್ವರಿ ಹೇಳಿದರು.

ನಗರದ ಮುನಿಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೆಹಂದಿ ಸ್ಪರ್ಧೆಯಲ್ಲಿ ಸ್ವತಃ ಅಂಗೈಗೆ ಮೆಹಂದಿ ಹಾಕಿಸಿಕೊಳ್ಳುವುದರ ಚಾಲನೆ ನೀಡಿ ಅವರು ಮಾತನಾಡಿದರು.

ಉತ್ಸವದಲ್ಲಿ ಮಹಿಳೆಯರು ಪಾಲ್ಗೊಳ್ಳವ ನಿಟ್ಟಿನಲ್ಲಿ ರಂಗೋಲಿ, ಪಾನೀಪುರಿ, ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಮಹಿಳೆಯರು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು, ಬಹಳಷ್ಟು ಯುವತಿಯರು ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮುಂದೆ ಯುವತಿಯರೆಲ್ಲರಿಗೂ ಮದುವೆ ಮೆಹಂದಿ ಹಾಕಿಸಿಕೊಳ್ಳವ ಅದೃಷ್ಟ ಬರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಕೀನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿರರು ಇದ್ದರು.

error: Content is protected !!