
ಕುಕನೂರ: ರಾಜೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾ ಯೋಗಿ ವೇಮನ ಜಯಂತೋತ್ಸವವನ್ನು ಆಚರಣೆ ಮಾಡದೇ ಮಹಾ ದಾರ್ಶನಿಕರಿಗೆ ಹಾಗೂ ಸಮಾಜಕ್ಕೆ ಅಗೌರವ ತೋರಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಸಮಾಜಕ್ಕೆ ತನ್ನದೇ ಆದ ವಚನಗಳಿಂದ ಗುರು ಸ್ಥಾನವನ್ನು ಅಲಂಕರಿಸಿಕೊಂಡಿರುವ ಮಹಾಯೋಗಿ ವೇಮನ ಜಯಂತಿಯನ್ನು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಿ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಣೆ ಮಾಡಬೇಕಾಗಿರುವುದು ರೂಡಿಗತ ನಿಯಮ, ಸಮಾಜದ ಅಂಕು ಡೊಂಕುಗಳನ್ನು ತನ್ನ ವಚನಗಳಿಂದ ತಿದ್ದಿ, ಮಾನವ ಕುಲದ ಏಳಿಗೆಗೆ ಶ್ರಮಿಸಿದ್ದಾರೆ.
ಅಂತಹ ಮಹಾನ್ ಪುರುಷರ ಜಯಂತಿಯನ್ನು ಕಚೇರಿಯಲ್ಲಿ ಆಚರಿಸದೆ ನಿರ್ಲಕ್ಷ್ಯ ವಹಿಸಿರುವುದು ಸರಿಯಾದ ನಿರ್ಧಾರವಲ್ಲ, ಈ ಮೊದಲೇ ತಹಸಿಲ್ದಾರ್ ಕಾರ್ಯಾಲಯದಲ್ಲಿ ನಡೆದ ಪೂರ್ವಸಭೆಯಲ್ಲಿ ಪ್ರತಿಯೊಂದು ಕಚೇರಿಗಳಲ್ಲಿ ಮಹಾಯೋಗಿ ವೇಮನ ಜಯಂತಿಯನ್ನು ಆಚರಿಸುವಂತೆ ಸಮಾಜದ ಮುಖಂಡರು ಮನವಿ ಮಾಡಿಕೊಂಡಿದ್ದರು, ಸರ್ಕಾರದ ಆದೇಶ ಪ್ರಕಾರ ಪ್ರತಿಯೊಂದು ಸಮಾಜದ ಧಾರ್ಮಿಕ ಮಹಾನ್ ಆದರ್ಶ ಪುರುಷರ ಜಯಂತಿಯನ್ನು ಆಚರಿಸುವಂತೆ ಆದೇಶವಿದ್ದರೂ ಕೂಡ ನಿರ್ಲಕ್ಷ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ ಎಂಬುದು ಸಮಾಜದ ಮುಖಂಡರ ಒತ್ತಾಯವಾಗಿದೆ
ಬಾಕ್ಸ್ ನ್ಯೂಸ್
ಮಹಾಯೋಗಿ ವೇಮನರ ಜಯಂತಿಯನ್ನು ರಾಜೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಆಚರಣೆ ಮಾಡದೇ ನಿರ್ಲಕ್ಷ ವಹಿಸಿರುವುದು ಖಂಡನೀಯ , ಈ ಕುರಿತು ತಹಸಿಲ್ದಾರ್ ಹಾಗೂ ತಾಲೂಕ ಪಂಚಾಯತಿ ಮುಖ್ಯಾಧಿಕಾರಿಗಳಿಗೆ ಬೇಜವಾಬ್ದಾರಿ ಪಿಡಿಒ ಸಿದ್ದನಗೌಡ ವಿರುದ್ಧ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಲಾಗುವುದು.
ದೇವಪ್ಪ ಅರಿಕೇರಿ
ರೆಡ್ಡಿ ಸಮಾಜದ ಮುಖಂಡರು