
ಗಂಗಾವತಿ: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರಪಾವತಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ರಾಜ್ಯಸರ್ಕಾರ ತೀರ್ಮಾನ
ತೆಗೆದುಕೊಂಡಿರುವ ಬಗ್ಗೆ ಎ.ಐ.ಸಿ.ಸಿ.ಟಿ.ಯು ಸ್ವಾಗತಿಸುತ್ತದೆ ಎಂದು ಎ.ಐ.ಸಿ.ಸಿ.ಟಿ.ಯು ನ ರಾಜ್ಯ ಉಪಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣೆ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ನೇರಪಾವತಿ ಪೌರಕಾರ್ಮಿಕರು, ತ್ಯಾಜ್ಯ ವಾಹನಗಳ ಚಾಲಕರು, ಕ್ಲೀನರ್‍ಗಳು, ಲೋಡರ್‍ಗಳು,ಒಳಚರಂಡಿಯಲ್ಲಿ ಕೆಲಸ ಮಾಡುವವರು ಮತ್ತು ಮೇಲ್ವಿಚಾರಕರನ್ನು
ಒಳಗೊಂಡಂತೆ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕೆಂದು.
ಬಿಬಿಎಂಪಿ ಪೌರಕಾರ್ಮಿಕರ ಸಂಘಟನೆ, ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘಟನೆ ಮತ್ತು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರ ಹಾಗೂ ಸಹಾಯಕ ಸಂಘದ ವತಿಯಿಂದ (ಎ.ಐ.ಸಿ.ಸಿ.ಟಿ.ಯು ನೊಂದಿಗೆ ಸಂಯೋಜನೆಗೊಂಡಿದೆ) ದಿನಾಂಕ: 01.07.2022 ರಿಂದ ಅನಿರ್ಧಿಷ್ಟಾವಧಿ ಧರಣಿಯನ್ನು ರಾಜ್ಯಾಧ್ಯಂತ ಹಮ್ಮಿಕೊಂಡಿತ್ತು.
ಆ ಸಮಯದಲ್ಲಿ ಸಂಘಟನೆಯ ಮುಖಂಡರೊಡನೆ ಸಭೆ ನಡೆಸಿ.ಮಾನ್ಯಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಪೌರಕಾರ್ಮಿಕರನ್ನು ಖಾಯಂಗೊಳಿಸುವುದಾಗಿ
ಲಿಖಿತ ರೂಪದಲ್ಲಿ ಭರವಸೆ ನೀಡಿದ್ದರು ಮತ್ತು ಆ ಸಂಬಂಧ ಸಮಿತಿಯನ್ನು ಸಹ ಸರ್ಕಾರ ರಚಿಸಿತ್ತು. ಆ ಸಮಿತಿಯಲ್ಲಿ ಎ.ಐ.ಸಿ.ಸಿ.ಟಿ.ಯು ಸಂಘಟನೆಯು ಸಹ ಸದಸ್ಯ ಸ್ಥಾನ ಹೊಂದಿದ್ದು, ನೇರಪಾವತಿ ಪೌರಕಾರ್ಮಿಕರು, ತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರು,ಕ್ಲೀನರ್‍ಗಳು, ಲೋಡರ್‍ಗಳು,ಒಳಚರಂಡಿಯಲ್ಲಿ ಕೆಲಸಮಾಡುವವರನ್ನು ಒಳಗೊಂಡಂತೆ ಎಲ್ಲಾ ಪೌರಕಾರ್ಮಿಕರನ್ನು
ಏಕಕಾಲಕ್ಕೆಖಾಯಂಗೊಳಿಸಬೇಕೆಂದು ಶಿಫಾರಸ್ಸು ಮಾಡಿತ್ತು ಮತ್ತು ಒತ್ತಾಯಿಸಿತ್ತು.
ಆದರೆ ಸರ್ಕಾರ ಕೇವಲ ನೇರವೇತನ ಪಾವತಿ ಪೌರಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಲು ಮುಂದಾಗಿದ್ದು, ಇತರೆ ಪೌರಕಾರ್ಮಿಕರಾದ
ತ್ಯಾಜ್ಯ ವಿಲೇವಾರಿ ವಾಹನಗಳ ಚಾಲಕರು, ಕ್ಲೀನರ್‍ಗಳು, ಲೋಡರ್‍ಗಳು, ಒಳಚರಂಡಿಯಲ್ಲಿ ಕೆಲಸ ಮಾಡುವವರನ್ನು ಖಾಯಂಗೊಳಿಸಲು ನಿರ್ಧಾರ ಮಾಡಿರುವುದಿಲ್ಲ. ಈ ನಿಟ್ಟಿನಲ್ಲಿ ಎ.ಐ.ಸಿ.ಸಿ.ಟಿ.ಯು ಸಂಘಟನೆಯು ಈ ಎಲ್ಲಾ
ಪೌರಕಾರ್ಮಿಕರನ್ನು ಖಾಯಂಗೊಳಿಸುವವರೆಗೂ ತನ್ನ ನಿರಂತರವಾದ ಹೋರಾಟವನ್ನು ನಡಸುತ್ತದೆ ಎಂದು ಎ.ಐ.ಸಿ.ಸಿ.ಟಿ.ಯು ಸಂಘಟನೆ ರಾಜ್ಯಉಪಾಧ್ಯಕ್ಷರು,
ಭಾರಧ್ವಾಜ್ ಪತ್ರಿಕೆ ಪ್ರಕಟಣೆ. ತಿಳಿಸಿದ್ದಾರೆ