
ಜಿಲ್ಲೆಯ ಅನುಷ್ಟಾನ ಯೋಜನೆಗಳ ಸಮಗ್ರ ಮಾಹಿತಿ ನೀಡಿದ ಸಿಇಒ*
ಕೊಪ್ಪಳ: ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತಗಳಲ್ಲಿ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಗಳಿಂದ ಅನುಷ್ಟಾನಗೊಂಡ ಕಾರ್ಯಕ್ರಮಗಳನ್ನು ಅವಲೋಕಿಸಲು ಕೇರಳ ರಾಜ್ಯದ ಕ್ರೀಸ್ಪ್ (center for Research in Schemes & policies) ತಂಡವು ಜನವರಿ 17 ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿತು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನುಮ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡುತ್ತಾ, ಗ್ರಾಮ ಪಂಚಾಯತಗಳಲ್ಲಿ ಕಾರ್ಯನಿರ್ವಹಣೆ ಕುರಿತು ಅವಲೋಕನ, ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯತಿಗಳ ಪಾತ್ರ, ಗ್ರಾಮೀಣ ಗ್ರಂಥಾಲಯಗಳ ನಿರ್ವಹಣೆ, ಗ್ರಾಮ ಪಂಚಾಯತಿ ಮತ್ತು ಸ್ವ-ಸಹಾಯ ಗುಂಪುಗಳ ನೆಡುವೆ ಇರುವ ಸಮನ್ವಯತೆ, ಎಂಜಿ-ನರೇಗಾ ಯೋಜನೆಯಡಿ ಶಿಶು ಪಾಲನೆಗಳ ಪಾತ್ರ, ಗ್ರಾಮೀಣ ಕ್ರೀಡೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಹಯೋಗಗಳ ಕುರಿತು ಸುದೀರ್ಘವಾಗಿ ಚರ್ಚೆಯೊಂದಿಗೆ ಜಿಲ್ಲೆಯಲ್ಲಿ ಅನುಷ್ಟಾನಗೊಂಡ ಯೋಜನೆಗಳ ಸಮಗ್ರ ಮಾಹಿತಿ ನೀಡಿದರು.
*ಶಿಶು ಪಾಲನಾ ಕೇಂದ್ರದ ವೀಕ್ಷಣೆ:* ಸಭೆಯ ನಂತರ ಕ್ರೀಸ್ಪ್ ತಂಡವು ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಅನುಷ್ಟಾನಗೊಂಡ ಶಿಶು ಪಾಲನಾ ಕೇಂದ್ರವನ್ನು ವೀಕ್ಷಿಸಿದರು. ಜಿಲ್ಲೆಯಲ್ಲಿ ಅನುಷ್ಟಾನಗೊಂಡ ನರೇಗಾ ಶಿಶು ಪಾಲನ ಕೇಂದ್ರದ ನಿರ್ವಹಣೆಗಳ ಕುರಿತು ಮಾಹಿತಿ ಪಡೆದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಸಮಗ್ರ ಶಾಲಾ ಅಭಿವೃದ್ಧಿ ಕಾಮಗಾರಿಗಳು, ಪುರಾತನ ಕಲ್ಯಾಣಿಗಳು, ಲಿಂಗತ್ವ ಅಲ್ಪ ಸಂಖ್ಯಾತರಿಗೆ ಉದ್ಯೋಗ ಒದಗಿಸಿ ಸಾಮಾಜಿಕವಾಗಿ ಮುನ್ನೆಲೆಗೆ ತಂದಿರುವ ಪ್ರಯತ್ನಗಳ ಕುರಿತು, ಋತುಚಕ್ರ ನಿರ್ವಹಣೆ ಮತ್ತು ಸ್ಯಾನಿಟರಿ ಪ್ಯಾಡ್‌ಗಳ ವೈಜ್ಞಾನಿಕ ವಿಲೇವಾರಿಗಳ ಕಿರು ಚಿತ್ರಗಳನ್ನು ಕ್ರೀಸ್ಪ್ ತಂಡದವರು ವಿಕ್ಷೀಸಿದರು.
*ವಿವಿಧ ಗ್ರಾ.ಪಂ.ಗಳಿಗೆ ಭೆಟಿ:* ಕ್ರೀಸ್ಪ್ ತಂಡವು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಳಾದ ಮಂಗಳೂರು, ಮಸಬಹಂಚಿನಾಳ, ಬೇವೂರ, ಕಿನ್ನಾಳ, ಇಟಗಿ ಗ್ರಾಮ ಪಂಚಾಯತಗಳ ಜನಪ್ರತಿನಿಧಿಗಳೊಂದಿಗೆ ಮುಖಾ- ಮುಖಿ ಸಂವಾದ ನೆಡೆಸಲಿದ್ದಾರೆ.
ಇದರೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಯೋಜನೆಗಳಲ್ಲಿ ಅನುಷ್ಟಾನಗೊಂಡ ಕಾಮಗಾರಿಗಳ ಸ್ಥಳಕ್ಕೆ ಕ್ಷೇತ್ರ ಭೇಟಿ ನೀಡಿ ಅಧ್ಯಯನ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.

ಸಭೆಯಲ್ಲಿ ಕೇರಳ ರಾಜ್ಯದಿಂದ ಆಗಮಿಸಿದ ಜಗಜೀವನ್, ಕೇಶವ್ ನಾಯರ್ ಕುಟುಂಬ, ಅಭಿಯಾನದ ನಿರ್ದೇಶಕರು ಮತ್ತು ಕರ್ನಾಟಕ ರಾಜ್ಯದ ಕ್ರೀಸ್ಪ್ ಸದಸ್ಯರಾದ ಡಾ.ಲಲಿತಾ ಪುಲವರ್ತಿ, ಜಿ.ಪಂ ಉಪಕಾರ್ಯದರ್ಶಿಗಳಾದ ಸಮೀರ ಮುಲ್ಲಾ, ಯೋಜನ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಮುಖ್ಯ ಲೆಕ್ಕಾಧಿಕಾರಿಗಳಾದ ಅಮೀನ ಅತ್ತಾರ, ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿಗಳಾದ ಕುಂಬಲಯ್ಯ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ರೆಡ್ಡೇರ್, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರಾದ ಡಾ ಹೆಚ್.ನಾಗರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಪದ್ಮಾವತಿ ಜಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಸೇರಿದಂತೆ ವಿವಿಧ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಯೋಜನೆಯ ಎಲ್ಲಾ ಸಂಯೋಜಕರು ಹಾಜರಿದ್ದರು.