
ಗಂಗಾವತಿ: ರಾಜ್ಯದಲ್ಲಿ ಒಂದುವರೆ ಕೋಟಿಯಷ್ಟಿರುವ ಕ್ಷತ್ರಿಯ ಸಮುದಾಯದ ನಿಗಮಗಳಿಗೆ ಸೂಕ್ತ ಅನುದಾನ ಹಾಗು ಕ್ಷತ್ರಿಯರಿಗೆ ಅಗತ್ಯ ಮೀಸಲಾತಿ ಒದಗಿಸುವಂತೆ ಒತ್ತಾಯಿಸಿ ಅರಮನೆ ಮೈದಾನ ಬೆಂಗಳೂರಲ್ಲಿ ಜ.29, ಬೆಳಗ್ಗೆ 10 ಗಂಟೆಗೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ.ಕರ್ನಾಟಕ ಕ್ಷೆತ್ರಿಯ ಒಕ್ಕೂಟದ ಗಂಗಾವತಿ ತಾಲೂಕ ಅಧ್ಯಕ್ಷ ತಿಪ್ಪಣ್ಣ ಬಿದರ್‍ಕರ್ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಸೋಮವಾರ ಮಾತನಾಡಿದರು. ಹಿಂದುಳಿದ ಸಮಾಜವಾಗಿರುವ ಕ್ಷತ್ರಿಯ ಒಕ್ಕೂಟದಡಿ ಅತ್ಯಂತ ಕಡಿಮೆ
ಸಂಖ್ಯೆಯಲ್ಲಿರುವ ಅನೇಕ ಸಮುದಾಯಗಳು ಸೇರಿ ಒಗ್ಗೂಡಿ ಸರಕಾರಕ್ಕೆ ಮನವಿ ಮಾಡಿದಾಗ ಮಾತ್ರ ನಮ್ಮ ಬೇಡಿಕೆ ಈಡೇರಿಸಲು ಸಾಧ್ಯ ಎಂದರು.
ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾಥೋಡ್ ಮಾತನಾಡಿ, ಕೊಡುವ ಕೈ ಕ್ಷತ್ರಿಯರದ್ದು ಆದರೆ, ಬೇಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ನಾವು ಹೋರಾಟದ ಮೂಲಕ ಸೌಕರ್ಯ ನಮ್ಮ ಹಕ್ಕು ಬಾದ್ಯತೆಗಳನ್ನು ಒಕ್ಕೂಟದ ಬೆನ್ನಿಗೆ ಎಲ್ಲರೂ ನಿಲ್ಲಬೇಕಿದೆ ಎಂದು.ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪ್ರವರ್ಗ 1 ಒಕ್ಕೂಟದ ಗಂಗಾವತಿ ತಾಲೂಕ ಅಧ್ಯಕ್ಷ ಪ್ರಣವನಂದ, ಶರ್ಬೋಜಿರಾವ್ ಗಾಯಕವಾಡ, ಸಿದ್ದಗೌಳಿ, ಮುಖಂಡರಾದ ಗಿರೀಶ್ ಗಾಯಕವಾಡ್, ಟಿ.ಆರ್.ರಾಯಬಾಗಿ,ನಗರಸಭೆ ಸದಸ್ಯ ಶರಬೋಜಿರಾವ್ ಗಾಯಕವಾಡ್, ಘನಶ್ಯಾಮ್ ಸಿಂಗ್, ಶಿವರಾಮ ಕಲ್ಯಾಣಕರ, ಕೃಷ್ಣರಾವ್ ಕಾಂಬ್ಳೆ, ಶ್ರೀನಿವಾಸ್ ಹವಳೆ, ಪರಶುರಾಮ್ ಗೂಗ್ಲೆ, ಕೃಷ್ಣಪ್ಪ ಅಧಿಕಾರಿ, ಶ್ರೀನಿವಾಸ್ ಹವಳೆ, ಅಂಬಾದಾಸ್ ಮತ್ತು ನರಹರಿ ಇದ್ದರು.