ಗಂಗಾವತಿ. ನಗರದ  ಪ್ರವಾಸಿ ಮಂದಿರದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆಯ ಟಿ ಏ ನಾರಾಯಣ ಗೌಡರ ಬಣ್ಣದಿಂದ ಕೆ ಚಂದ್ರಶೇಖರ್  ಶೆಟ್ಟಿ ಅವರ ಅಧ್ಯಕ್ಷತೆಯ ಯಮನೂರ್ ಭಟ್ ಅವರ ನೇತೃತ್ವದಲ್ಲಿ  ತಾಲೂಕ ಪೂರ್ವಭಾವಿ ಸಭೆ ಕರೆಯಲಾಯಿತು.

ಈ ಸಭೆಯಲ್ಲಿ ನಗರದ ಕುಂದುಕೊರತೆಗಳ ಬಗ್ಗೆ ಚರ್ಚೆಯಾಯಿತು ಮತ್ತು ತಾಲೂಕಿನ ನಗರ ಘಟಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಮತ್ತು ಪತ್ರಿಕೋದ್ಯಮ ಸಲಹೆಗಾರರು ತಾಲೂಕ ಅಧ್ಯಕ್ಷರನ್ನು  ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘಟನೆ ಕುರಿತು ಮಾತನಾಡಿದ ನಗರ ಘಟಕ ಅಧ್ಯಕ್ಷರಾದ ಯಮನೂರ್ ಭಟ್ ಅವರು ನಮ್ಮ ಕರ್ನಾಟಕ  ರಾಜ್ಯದ ರಕ್ಷಣಾ ವೇದಿಕೆಯ  ರಾಜ್ಯದ್ಯಕ್ಷರಾದ ಟಿ ಏ ನಾರಾಯಣಗೌಡರು 40 ವರ್ಷದಿಂದ ನಿರಂತರವಾಗಿ ಸಂಘಟನೆಯನ್ನು ಶ್ರಮವಯಿಸಿ ಸಂಘಟನೆ  ಕೊಟ್ಟಿರುತ್ತಾರೆ ಮತ್ತು ಕನ್ನಡದ ನೆಲ ಜಲ ಭಾಷೆಗೆ ಕರ್ನಾಟಕ ರಕ್ಷಣಾ ವೇದಿಕೆಯು ಮುಂದಿನ ದಿನಮಾನಗಳಲ್ಲಿ ಕನ್ನಡದ ಕೀರ್ತಿಯನ್ನು ದೇಶ ವಿದೇಶಗಳ ಮೂಲೆ ಮೂಲೆಗೂ ಕನ್ನಡದ ಹೆಸರನ್ನು ರಾರಾಜಿಸುತ್ತಿದೆ .

600 ವರ್ಷಗಳಿಂದ ನಮ್ಮ ಕನ್ನಡ ಭಾಷೆ ಇತಿಹಾಸವಿದ್ದು ಪಂಪ ರನ್ನ ಪೊನ್ನ ಅಂತಹ ಸಂಸ್ಕೃತಿಕ ನೈತಿಕ ಕವಿಗಳಿದ್ದಂತ ನಾಡು ನಮ್ಮದು  ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಂತ ಕುವೆಂಪು ದಾರಾ ಬೇಂದ್ರೆಯತವರು  ಸಾಹಿತಿಗಳು ಹುಟ್ಟಿದಂತ ನಾಡು ಇಂತಹ ನಾಡಿಗೋಸ್ಕರ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಯುವಕರು ಮುಂದಿನ ದಿನಮಾನಗಳಲ್ಲಿ ಧ್ವನಿ  ಇಲ್ಲದವರ ಪರವಾಗಿ ಧ್ವನಿ ಯಾಗಿ ನಿಂತು ಬಡವರಿಗೂ ಹೆಣ್ಣು ಮಕ್ಕಳಿಗೂ ಶಾಲಾ ಬಡ ವಿದ್ಯಾರ್ಥಿಗಳಿಗೂ ಹಾಗೂ ತುಳಿತಕ್ಕೆ ಒಳಗಾದವರಿಗೆ  ಸಾಮಾಜಿಕ ನ್ಯಾಯ ಕೊಡಿಸುವಗೋಸ್ಕರ ನ್ಯಾಯ ಸಮ್ಮತವಾದ ಹೋರಾಟವನ್ನು ಮಾಡಲಾಗುವುದು ಎಂದು ಯಮನೂರ್ ಭಟ್ ಅವರು ಹೇಳಿದರು.

ಈ ಸಂದರ್ಭದಲ್ಲಿ  ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ತಾಲೂಕ್ ಅಧ್ಯಕ್ಷರಾಗಿ  ಚನ್ನಬಸವ (ಮಾನ್ವಿ). ನೇಮಕ ಮಾಡಲಾಯಿತು ಮತ್ತು ನಗರ ಘಟಕದ ಉಪಾಧ್ಯಕ್ಷನಾಗಿ ಲಕ್ಷ್ಮಣ್ ಸಿಂಗ್. ತಾಲೂಕು ಉಪಾಧ್ಯಕ್ಷನಾಗಿ ಶರಣಪ್ಪ ಭಜಂತ್ರಿ. ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಹುಲಿಗೇಶ್ ಕೊಜ್ಜೀ.. ತಾಲೂಕು ಯುವ ಘಟಕ ಉಪಾಧ್ಯಕ್ಷರಾಗಿ ಹನುಮೇಶ್ ಕುರುಬ. ಹಾಗೂ ತಾಲೂಕು ಸಂಘಟನಾ ಸಂಚಾಲಕರನ್ನಾಗಿ G ಪವನ್ ಕುಮಾರ್. ಬಸವರಾಜ್ ಭಜಂತ್ರಿ. ಹಾಗೂ ತಾಲೂಕು ಕಾರ್ಯದರ್ಶಿಯಾಗಿ ಹನುಮಂತ ಗುತ್ತೂರಿ ಭಜಂತ್ರಿ ಅವರನ್ನು ನೇಮಕ ಮಾಡಲಾಯಿತು ಮತ್ತು  ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭಾಗಿಯಾಗಿದ್ದರು

error: Content is protected !!