ಗಂಗಾವತಿ:ಭಾರತದ ಭವ್ಯ ಪರಂಪರೆ. ಸಂಸ್ಕೃತಿ. ಪ್ರಸ್ತುತ ವಿಶ್ವದಲ್ಲಿ ಅವಿಸ್ಮರಣೆಯಾಗಿ ಉಳಿದುಕೊಂಡಿದೆ ಇಲ್ಲಿರುವ ಜಾತಿ ವ್ಯವಸ್ಥೆಯನ್ನು. ತ್ಯಜಿಸಿ ದೇಶವಾಸಿಗಳು. ರ‍್ಮ ರಕ್ಷಣೆಗಾಗಿ. ಒಗ್ಗಟ್ಟಿನಿಂದ ಕರ‍್ಯಪ್ರವೃತ್ತರಾಗಬೇಕಾದ ಅವಶ್ಯಕತೆ ಇದೆ ಎಂದು. ಹಿಂದೂ ಧರ್ಮದ ಪ್ರಚಾರಕಿ ಆರಿಕಾ ಮಂಜುನಾಥ್ ಹೇಳಿದರು.
ಅವರು ಗಂಗಾವತಿ ಆರ್ಯವೈಶ್ಯ ಸಮಾಜ ನಗರೇಶ್ವರ ಕಲ್ಯಾಣ ಮಂಟಪದಲ್ಲಿ. ಶರನ್ನ ನವರಾತ್ರಿ ಪ್ರಯುಕ್ತ ಆಯೋಜಿಸಿದ. ನವ ದುರ್ಗೆಯರ ಪ್ರವಚನ. ಉದ್ದೇಶಿಸಿ ಮಾತನಾಡಿದರು.
ಧರ್ಮೋ ರಕ್ಷತಿ ರಕ್ಷಿತಾ ಎನ್ನುವಂತೆ ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು. ಧರ್ಮ ರಕ್ಷಣೆಗಾಗಿ. ಜೀವಿಸಬೇಕು. ನವರಾತ್ರಿಯ. ಆಚರಣೆಯ ಉದ್ದೇಶವು ಸಹ ಇದೆ ಆಗಿದೆ.. ದುಷ್ಟರ ಸಂಹಾರ. ಶಿಷ್ಟರ ರಕ್ಷಣೆ ಇದನ್ನು ಆತ್ಮಸಾಕ್ಷಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರೀತಿ ವಿಶ್ವಾಸ ಅನುಕಂಪ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಮಾತ್ರ ದೇಶ ಹಾಗೂ ಧರ್ಮ ರಕ್ಷಣೆ ಹೇಳುತ್ತದೆ ಎಂಬ ಸಂದೇಶವನ್ನು ಸಾರಿದರು. ವಿಶ್ವದಲ್ಲಿ ಮೂರನೆಯ ಮಹಾಯುದ್ಧದ ಕಾರ್ಮೋಡ ಭೀತಿಯಲ್ಲಿದ್ದು ಇದ್ದಕ್ಕೆ ದ್ವೇಷ ಅಸೂಯೆ ಸ್ವಾರ್ಥ ಮನೋಭಾವನೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ರೂಪ ರಾಣಿ ರಾಯಚೂರು ವಾಸವಿ ಮಹಿಳಾ ಮಂಡಲದ ಅಧ್ಯಕ್ಷರಾದ ಶ್ರೀಮತಿ ಭಾಗ್ಯ ಈಶ್ವರ್ ಶೆಟ್ಟಿ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಪ್ರಸಾದ್ ಪಾನಗಂಟಿ ಬಿಜೆಪಿ ಮುಖಂಡರಾದ ಸಂತೋಪ್ ಕೆಲೋಜಿ ಹಿರೇಜಂತಕಲ್ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ್ ಆರ್ಯವೈಶ್ಯ ಸಮಾಜ ಗಂಗಾವತಿಯ ಉಪಾಧ್ಯಕ್ಷರಾದ ಜಿ,ಸುರೇಶ್ ಕಾರ್ಯದರ್ಶಿ ಸಿ,ಈಶ್ವರ ಶೆಟ್ಟಿ ಸಹಕಾರ್ಯದರ್ಶಿ ಮಾರುತಿ ಪ್ರಸಾದ್ ಪಾನಗಂಟಿ ಗೋಪಾಲ ಕೃಷ್ಣ ಮಂಜುನಾಥ ಸೇರಿದಂತೆ ಅಪಾರ ಸಮಾಜ ಬಾಂಧವರು ಪಾಲ್ಗೊಂಡಿದ್ದರು.