
ಗಂಗಾವತಿ.. ತಾಲೂಕಿನ ಹೇರೂರು ಗ್ರಾಮಕ್ಕೆ ಇಂದು ಜನಾರ್ಧನ್ ರೆಡ್ಡಿಯವರು ವಿರೂಪಾಕ್ಷಪ್ಪ ಗೌಡ ನಾಯಕ ಧೀರ ಕರ್ನಾಟಕ ರಕ್ಷಣ ವೇದಿಕೆ ರಾಜ್ಯ ಅಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿ.
ಅವರ ಮನೆಯಲ್ಲಿ ಉಪವಾರ ಸೇವಿಸಿ, ನಂತರ ಮಾತನಾಡಿ ಜನಾರ್ದನ್ ರೆಡ್ಡಿ ಅವರು ನಾಯಕ ಜನಾಂಗವು ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟುಕೊಂಡಿದೆ ಈ ವಿಶ್ವಾಸವು ಇವತ್ತಿಂದಲ್ಲ ನಾನು ರಾಜಕೀಯ ಬರಬೇಕಾದರೆ ಮೊದಲು ಇದೇ ಎಸ್ ಟಿ ಸಮುದಾಯದವರು ಕಾರಣ. ಮತ್ತು ಈ ಎಸ್ ಟಿ ಸಮುದಾಯದಲ್ಲಿ ಹುಟ್ಟಿದಂತಹ ಶ್ರೀ ವಾಲ್ಮೀಕಿ ಮಹಾಋಷಿಗಳು ಅವರು ಈ ಜಗತ್ತಿಗೆ ರಾಮನನ್ನು ಪರಿಚಯಿಸಿದರು ಅಂತಹ ದೊಡ್ಡ ಸಮುದಾಯವಿದು.
ಈ ಒಂದು ಸಮುದಾಯಕ್ಕೆ ನಾನು ಯಾವತ್ತೂ ಮರೆಯೋದಿಲ್ಲ ಈ ಸಮುದಾಯಕ್ಕೆ ನಾನು ಯಾವಾಗಲೂ ಸದಾ ಚಿರಋಣಿಯಾಗಿದ್ದೇನೆ ಮತ್ತು ನನ್ನನ್ನು ತಮ್ಮ ಮನೆಗೆ ಕರೆದು ನನಗೆ ಸನ್ಮಾನ ಮಾಡಿದ್ದಕ್ಕಾಗಿ ತುಂಬಾ ಖುಷಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು
ನಂತರ ವಿರುಪಾಕ್ಷಪ್ಪ ಗೌಡ ನಾಯಕ ಮಾತನಾಡಿ ಜನಾರ್ದನ್ ರೆಡ್ಡಿ ಅವರು ನಮ್ಮ ನಿವಾಸಕ್ಕೆ ಬಂದಿರುವುದು ತುಂಬಾ ಸಂತೋಷವಾಗಿದೆ.

ಇಂತಹ ದೊಡ್ಡ ವ್ಯಕ್ತಿ ಇಷ್ಟು ಸರಳ ಜೀವಿ ಎಂಬುದು ನಮಗೆ ತಿಳಿದಿರಲಿಲ್ಲ ಇವರು ನಮ್ಮ ನಿವಾಸಕ್ಕೆ ಬಂದ ನಂತರ ಬಹಳ ಸರಳ ಜೀವಿ ಇವರು ಎಂದು ತಿಳಿಯಿತು ಇಂಥವರನ್ನು ನಮ್ಮ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಇವರನ್ನು ನಾವು ಆಯ್ಕೆ ಮಾಡಿ ತಂದರೆ ನಮ್ಮ ಕೆಲಸ ಕಾರ್ಯಗಳು ಬಹಳ ಸುಲಭದ ರೀತಿಯಲ್ಲಿ ಆಗಬಹುದೆಂದು ಹೇಳಿದರು ಮತ್ತು ಈಗ ಇರುವಂತಹ ಹಾಲಿ ಮತ್ತು ಮಾಜಿ ಶಾಸಕರು ಯಾವುದೇ ರೀತಿಯಲ್ಲಿ ನಮ್ಮ ತಾಲೂಕ ಬದಲಾವಣೆ ಕಂಡಿಲ್ಲ ಇಂಥವರನ್ನು ನಾವು ಮತ್ತೆ ಆಯ್ಕೆ ಮಾಡಿದರೆ ನಮ್ಮ ಗಂಗಾವತಿ ಕ್ಷೇತ್ರದ ಸ್ಥಿತಿ ಹದೋಗತೆಯಾಗುತ್ತದೆ ಮತ್ತು ಮುಂದೆ ಬರುವ ಚುನಾವಣೆಗಳಲ್ಲಿ ಇವರಿಗೆ ಮತ ನೀಡೋಣ ಎಂದು ಹೇಳಿದರು
ಈ ಸಂದರ್ಭದಲ್ಲಿ ಶಂಭುಲಿಂಗ ಚಲವಾದಿ ಬಸವರಾಜ ವಿರುಪಾಕ್ಷ ಗೌಡರ ಮನೆ ಕುಟುಂಬದವರು ಎಲ್ಲಾ ಅಣ್ಣತಮ್ಮಂದಿರು ಭಾಗವಹಿಸಿದ್ದರು