ತಹಸೀಲ್ದಾರ್ ಕಚೇರಿಯಲ್ಲಿ ಡಿ. ದೇವರಾಜ ಅರಸು 109ನೇ ಜನ್ಮದಿನಾಚರಣೆ ಹಾಗೂ ಸದ್ಭವನಾ ದಿನ ಆಚರಣೆ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ*

ಗಂಗಾವತಿ:ಇಂದು ತಹಶೀಲ್ದಾರ್ ಕಾರ್ಯಾಲಯ ಗಂಗಾವತಿಯಲ್ಲಿ ಶ್ರೀ ಬ್ರಹ್ಮಶ್ರೀ  ನಾರಾಯಣಗುರು ಜಯಂತಿ , ಶ್ರೀ ದೇವರಾಜ ಅರಸು ರವರ 109 ನೇ ಜನ್ಮ ದಿನಾಚರಣೆ ಹಾಗೂ “ಸದ್ಭಾವನಾ ದಿನ ” ಆಚರಣೆಯ ಪ್ರಯುಕ್ತ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.,ಮಹನೀಯರ ಭಾವಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪ್ರತಿಜ್ಞಾ ವಿಧಿಯನ್ನು ಗಂಗಾವತಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಅಧಿಕಾರಿ ಶ್ರೀಮತಿ ಉಷಾ ಏನ್ ಮುಜುಮ್ ದಾರ್ ಭೋದಿಸಿ ನಂತರ ಮಾತನಾಡಿ  ಡಿ.ದೇವರಾಜ್ ಅರಸ್ ಅವರ ಅಧಿಕಾರಾವಧಿಯು ವಿಶೇಷವಾಗಿ ಕರ್ನಾಟಕದ ತುಳಿತಕ್ಕೊಳಗಾದ ವರ್ಗಗಳಾದ ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದ ಜಾತಿಗಳನ್ನು ಗುರಿಯಾಗಿಸಿಕೊಂಡ ಸುಧಾರಣೆಗಳಿಗಾಗಿ ವಿಶೇಷವಾಗಿ ನೆನಪಿಸಿಕೊಳ್ಳು ವುದರ ಜೊತೆಗೆ ಭೂ ಕಾಯ್ದೆಯನ್ನು ಸಮರ್ಪಕ ವಾಗಿ ಜಾರಿಗೆ ತಂದು,ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆಯನ್ನ ಜಾರಿಗೆ ತಂದರು ಇದರ ಅನ್ವಯ ಕರ್ನಾಟಕ  ರಾಜ್ಯದಲ್ಲಿನ ಜಮೀನ್ದಾರರ ದರ್ಪವನ್ನು ಕೊನೆಗಾಣಿಸಿ ರೈತರಿಗೆ ಹೊಸ ಚೈತನ್ಯವನ್ನು ಕೊಟ್ಟರು ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ಅರಸುರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ತಮ್ಮ ಮಾತಿಗೆ ವಿರಾಮ ನೀಡಿದರು.

  ಈ ಕಾರ್ಯಕ್ರಮದಲ್ಲಿ ತಹಶೀಲ್ದಾರರು ಗ್ರೇಡ್ 2 ಅಧಿಕಾರಿ.,ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಉಷಾ ಏನ್. ಮುಜುಮ್ ದಾರ್ ಮತ್ತು ಇತರೆ ತಾಲೂಕು ಮಟ್ಟದ ಅಧಿಕಾರಿಗಳು,ಕಾರ್ಯಾಲಯದ ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು

error: Content is protected !!