ಕಾರಟಗಿ.ಆ.20 :ತಾಲ್ಲೂಕು ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಧಾರಾಕಾರ ಸುರಿದ ಮಳೆಗೆ  ಗ್ರಾಮಸ್ಥರು ಪರದಾಡಿದರು.ಸೋಮವಾರ ಬೆಳಗಿನಿಂದ ಮೋಡ ಕವಿದ ವಾತಾವರಣದಿಂದ ಕೂಡಿತ್ತು. ಆಗಾಗ ಹನಿ ಉದುರುತ್ತಿದ್ದು, ರಾತ್ರಿ 2 ಗಂಟೆಗೆ ಆರಂಭವಾದ ಮಳೆ ಬೆಳಗಿನ ಜಾವ 6 ಗಂಟೆವರೆಗೆ ಬಿರುಸಾಗಿ ಸುರಿಯಿತು.

ಸತತವಾಗಿ ಸುರಿದ ಮಳೆಯಿಂದ ಕೆಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ನೀರನ್ನು ಹೊರಹಾಕಲು ಹರಸಾಹಸ ಪಟ್ಟರು. ತಾಲ್ಲೂಕಿನ ಕೆಲ ವಾರ್ಡ್‌ಗಳಲ್ಲಿ ಒಳಚರಂಡಿ ವ್ಯವಸ್ಥೆ ಹದೆಗಟ್ಟು, ರಸ್ತೆಯ ಮೇಲೆ ಕೊಳಚೆ ನೀರು ಹರಿದಾಡಿ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

ಹೊಲಗದ್ದೆಗಳಲ್ಲಿ ರಭಸವಾಗಿ ನೀರು ನುಗ್ಗಿದ ಪರಿಣಾಮ ಇತ್ತಿಚೀಗೆ ನಾಟಿ ಮಾಡಿದ ಬೆಳೆಗಳು ನಾಶವಾಗಿ ರೈತರಿಗೆ ನಷ್ಟ ಎದುರಾಗಿದೆ.

ತಾಲ್ಲೂಕಿನ ಬೆನ್ನೂರು ಸೇರಿದಂತೆ ನಂದಿಹಳ್ಳಿ, ಕಕ್ಕರಗೋಳ, ಶಾಲಿಗನೂರು,ಕುಂಟೋಜಿ, ಬರಗೂರು ಮೈಲಾಪುರ ಉಳೇನೂರು, ಸಿದ್ದಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

error: Content is protected !!