ಗಂಗಾವತಿ :ನಗರದ ತಾಲೂಕ ಪಂಚಾಯತ್ ಮಂಥನ ಸಭಾಂಗಣ ದಲ್ಲಿ ನಡೆದ ಡಿ ದೇವರಾಜ ಅರಸು ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಬಾರದೆ ಇರುವುದು ಬಹಳ ವಿರಸದಾಯಕ ಸಂಗತಿಯಾಗಿದೆ., ದಿನಾಂಕ 20/08/2024 ರಂದು ನಡೆಯಲಿರುವ ದೇವರಾಜ್ ದೇವರಾಜ್ ಅರಸ್ ರವರ ಜನ್ಮ ದಿನಾಚರಣೆಯ ಅಂಗವಾಗಿ 16 ಆಗಸ್ಟ್ 2024 ರಂದು ಗಂಗಾವತಿ ನಗರದನಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿತ್ತು.
ಈ ಸಭೆಯಲ್ಲಿ ಅಧಿಕಾರಿಗಳು ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಭಾಗವಹಿಸಿರುವುದು ಬಹಳ ಸೊಚನಿಯವಾಗಿದೆ ಅಧಿಕಾರಿಗಳು ಈ ವರ್ತನೆಗೆ ಸಭೆಯಲ್ಲಿ ಪಾಲ್ಗೊಂಡವರು ಸಂಘಟನೆ ಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಡಿ.ದೇವರಾಜ್ ಅರಸ್ ರವರು 20 ಆಗಸ್ಟ್ 1915 (6 ಜೂನ್ 1982) ಜನಿಸಿದರು ಇವರು ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ದಕ್ಷಿಣ ಭಾರತದ ರಾಜ್ಯದ ಕರ್ನಾಟಕದ ಮೊದಲ ಮುಖ್ಯ ಮಂತ್ರಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು ದಿವಂಗತ ಮುಖ್ಯಮಂತ್ರಿಗಳ ಕೊಡುಗೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಶಿಕ್ಷಣದ ಮೇಲೆ ಒತ್ತು ನೀಡಲಾಯಿತು ಮತ್ತು ಸಮಾಜದ ಆ ವರ್ಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳನ್ನು ಸ್ಥಾಪಿಸ ಲಾಯಿತು. ದಲಿತರು ಮತ್ತು ಜೀತದಾಳುಗಳಿಂದ ರಾತ್ರಿ ಮಣ್ಣು ಸಾಗಿಸುವುದನ್ನು ರದ್ದುಪಡಿಸುವುದು , 1973 ರಲ್ಲಿ ಮೈಸೂರನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡುವುದು ಅವರು ತೆಗೆದು ಕೊಂಡ ಕೆಲವು ಮಹತ್ವದ ನಿರ್ಧಾರಗಳು.
ಡಿ.ದೇವರಾಜ ಅರಸರು ರಾಜ್ಯ ಕಂಡ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರು. ಅವರ ನೇತೃತ್ವದ ಭೂ ಸುಧಾರಣೆಗಳು, ಅದರಲ್ಲಿ ಭೂಮಿಯನ್ನು ಉಳುವ ವನೇ ಮಾಲೀಕನಾಗುವುದು ಮಾದರಿಯಾಗಿದೆ. ಇ ದು ಶ್ರೀಮಂತ ಮತ್ತು ಬಡವರ ನಡುವಿನ ಕಂದಕವ ನ್ನು ಕಡಿಮೆ ಮಾಡಿತು, ಸಾಮಾಜಿಕ ಅಸಮಾನತೆ ಯನ್ನು ಹೋಗಲಾಡಿಸಿತು.ಇಂತಹ ಧೀಮಂತರ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಗೈರಾಗಿರುವುದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ.