ಕಾರಟಗಿ :”ಮೊಟ್ಟೆ ಮಾಯಾ” ಎಂಬ ಶಿರ್ಷಿಕೆಯಡಿ ಸಾಮಾಜಜಿಕ ಜಾಲಾತಾಣದಲ್ಲಿ ಪ್ರಸಾರವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು  ಸೇವೆಯಿಂದ ಅಮಾನತ್ತು.

ಕನಕಗಿರಿ ಯೋಜನೆ ವ್ಯಾಪ್ತಿಯ ಕಾರಟಗಿ ತಾಲೂಕಿನ ಗುಂಡೂರು-2ನೇ ಆಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ಜೆ, ಹಾಗೂ ಅಂಗನವಾಡಿ ಸಹಾಯಕಿ  ಶೈನಚಾ ಬೇಗಂ ಇವರು ಕೇಂದ್ರಕ್ಕೆ ಪೂರೈಕೆಯಾಗಿರುವ ಮೊಟ್ಟೆಗಳನ್ನು ಫಲಾನುಭವಿಗಳಿಗೆ ವಿತರಿಸದೆ ಅವರು ಸೇವಿಸುವ ಸಮಯದಲ್ಲಿ ವಾಪಸು ಪಡೆದು ಮೇಲ್ನೋಟಕ್ಕೆ ದುರುಪಯೋಗ ಪಡಿಸಿಕೊಂಡಿರುವುದು ಕಂಡುಬಂದಿರುತ್ತದೆ. ಮುಂದುವರೆದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿ ಸದರಿ ಕೃತ್ಯದ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಸಾರ್ವಜನಿಕರು ತೀರ್ವ ಆಕ್ಷೇಪಣೆ ಹಾಗೂ ಟೀಕೆಯನ್ನು ವ್ಯಕ್ತಪಡಿಸಿರುವ ಕಾರಣ ಸಂಬಂಧಿಸಿದ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಲು ಆಗ್ರಹಿಸಿರುವುದರಿಂದ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ ರವರು ಸದರಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು  ಸೇವೆಯಿಂದ ಅಮಾನ್ಯಗೊಳಿಸಲು ಸೂಚಿಸಿರುತ್ತಾರೆ.

ಲಕ್ಷ್ಮೀ ಜೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಶೈನಜಾ ಬೇಗಂ ಅಂಗನವಾಡಿ ಸಹಾಯಕಿ, ಗುಂಡೂರು-2ನೇ ಕೇಂದ್ರ, ಕನಕಗಿರಿ ಯೋಜನೆ ಇವರಗಳನ್ನು ಕರ್ತವ್ಯಲೋಪದ ಹಿನ್ನಲೆಯಲ್ಲಿ  ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿಯರ ಗೌರವಧನ ಸೇವೆಯಿಂದ ಅಮಾನ್ಯಗೊಳಿಸಲು ತೀರ್ಮಾನಿಸಿ ಕೆಳಕಂಡ ಆದೇಶ ಹೊರಡಿಸಿದೆ.

ವಿವರಿಸಿದ ಕಾರಣಗಳನ್ವಯ ಕನಕಗಿರಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಗುಂಡೂರು-2ನೇ ಅಂಗನವಾಡಿ ಕೇಂದ್ರದ  ಲಕ್ಷ್ಮೀ ಜೆ, ಅಂಗನವಾಡಿ ಕಾರ್ಯಕರ್ತೆ ಹಾಗೂ  ಶೈನಜಾ ಬೇಗಂ ಅಂಗನವಾಡಿ ಸಹಾಯಕಿ, ಇವರುಗಳನ್ನು ಕರ್ತವ್ಯಲೋಪದ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೆ ಗೌರವಧನ ಸೇವೆಯಿಂದ ಅಮಾನ್ಯಗೊಳಿಸಿ ಆದೇಶಿಸಿದೆ.

error: Content is protected !!