*ಕೊಪಣ ಮಾಧ್ಯಮ ಹಬ್ಬದಲ್ಲಿ ಚಾಂಪಿಯನ್ಸ್ ಪಟ್ಟ*
ಗಂಗಾವತಿ :ಕೊಪ್ಪಳದಲ್ಲಿ ಬಹುತ್ವ ಮೀಡಿಯಾ ಹೌಸ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ಕೊಪಣ ಮಾಧ್ಯಮ ಹಬ್ಬದಲ್ಲಿ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದರು.
ಮಾಧ್ಯಮ ಹಬ್ಬದ ನಿಮಿತ್ತ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವರದಿಗಾರಿಕೆ, ಛಾಯಾಗ್ರಹಣ, ರಸಪ್ರಶ್ನೆ, ನ್ಯೂಸ್ ಆಂಕರಿಂಗ್ ಸೇರಿದಂತೆ ಒಟ್ಟು 7 ವಿಭಾಗದಲ್ಲಿ ಎಸ್‌ಕೆಎನ್‌ಜಿ ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.
7 ವಿಭಾಗಗಳ ಪೈಕಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ನ್ಯೂಸ್ ಆಂಕರಿಂಗ್ ಮತ್ತು ಕ್ರಿಯಾಶೀಲ ನಟನೆ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ವರದಿಗಾರಿಕೆ ಮತ್ತು ಕೋಲ್ಯಾಜ್ ಮೇಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ಒಟ್ಟಾರೆ ಸ್ಪರ್ಧೆಯಲ್ಲಿ ಚಾಂಪಿಯನ್ಸ್ ಆಗಿ ಪ್ರಶಸ್ತಿ ಗಿಟ್ಟಿಸಿಕೊಂಡರು.
*ಪ್ರಾಂಶುಪಾಲರ ಅಭಿನಂದನೆ:*
ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಡಾ.ಜಾಜಿ ದೇವೇಂದ್ರಪ್ಪ ಅವರು ಕಾಲೇಜಿನಲ್ಲಿ ಅಭಿನಂದನೆ ಸಲ್ಲಿಸಿದರು. ಶುಕ್ರವಾರ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಟ್ರೋಫಿ ನೀಡಿ ಅತಿ ಕಡಿಮೆ ಅವಧಿಯಲ್ಲಿ ಉಪನ್ಯಾಸಕರ ಮಾರ್ಗದರ್ಶನ ಪಡೆದು ಚಾಂಪಿಯನ್ಸ್ ಆಗಿದ್ದು ಕಾಲೇಜಿಗೆ ಮತ್ತು ವಿಭಾಗಕ್ಕೆ ಹೆಮ್ಮೆಯಾಗಿದೆ. ಇದರ ಜೊತೆಗೆ ಪ್ರಾಯೋಗಿಕವಾಗಿ ಸಹ ಪತ್ರಿಕೋದ್ಯಮ ವಿಭಾಗ ಮತ್ತಷ್ಟು ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಕರಿಗೂಳಿ ಸುಂಕೇಶ್ವರ ಅವರು ಸಹ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಭಾಗದ ಅತಿಥಿ ಉಪನ್ಯಾಸಕರಾದ ತಾಯಪ್ಪ ಮರ್ಚಡ್, ಹುಲಿಗೆಮ್ಮ,ವೈ.ಎಸ್. ವಗ್ಗಿ, ಅರ್ಥಶಾಸ್ತ್ರ ,ಮುಖ್ಯಸ್ಥರು.ಜಗದೇವಿ ಕಲ್ಲಶೆಟ್ಟಿ ಕನ್ನಡ ಮುಖ್ಯಸ್ಥರು, ಡಾ :ಸಿಭರಾಣಿ ಗಣಿತಶಾಸ್ತ್ರ ,ಡಾ :ಶಿವಕುಮಾರ್ ಭೌತಶಾಸ್ತ್ರ , ಡಾ :ಸಂಜಯಾನಂದ ಹಿಮಾನುಲ್ ರಾಘವೇಂದ್ರ ಚೌಡ್ಕಿ, ಖಾಜಾ ಸಾಬ್ ಗಡಾದ್, ಅಭಿಷೇಕ್ ಸಿ. ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.