ಗಂಗಾವತಿ: ಗಂಗಾವತಿ ನಗರ ಠಾಣೆಯಲ್ಲಿ ಎ ಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಮಯ್ಯ ಸ್ವಾಮಿ ಇವರು ತಮ್ಮ ಜೀವನದ ಅತ್ಯಮೂಲ್ಯವಾದ ನಿವೃತ್ತಿ ಜೀವನವನ್ನು ಹೊಂದಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀಮತಿ ಯಶೋಧ ವಂಟಗೋಡೆ ಯವರು ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ರವಿವಾರ ಅವರಿಗೆ ಪೂರ್ಣ ಪ್ರಮಾಣದ ಬೀಳ್ಕೊಡುಗೆಯನ್ನು ನೀಡಿ ಅವರ ಮುಂದಿನ ಜೀವನ ಉತ್ತಮ ಮತ್ತು ಉಜ್ವಲವಾಗಿರಲಿ ಎಂದು ಇಲಾಖೆಯ ಪರವಾಗಿ ಶುಭ ಹಾರೈಸಿದರು.
ಸಿದ್ದರಾಮಯ್ಯಸ್ವಾಮಿ ಯವರು ತಮ್ಮ ಬದುಕಿನ ಜೀವನದಲ್ಲಿ 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು, ಪ್ರಪ್ರಥಮವಾಗಿ ರಾಯಚೂರು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಿ, ಅಂದಿನ ದಿನಗಳಲ್ಲಿ ಉತ್ತಮ ಹೆಸರು ಗಳಿಸಿದವರಲ್ಲಿ ಇವರು ಮೊದಲಿಗರಾಗಿದ್ದರು. ನಂತರ ಇಲಾಖೆಯಲ್ಲಿ ಜಮೇದಾರರಾಗಿ ಬಡ್ತಿ ಪಡೆದ ಸಿದ್ದರಾಮಯ್ಯ ಸ್ವಾಮಿ ಅವರು ಕೊಪ್ಪಳ ನಗರ ಠಾಣೆಯಲ್ಲಿ ಸೇವೆ ಆರಂಭಿಸಿದರು. ನಂತರ ದಿನಮಾನಗಳಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ, ಕುಷ್ಟಗಿ, ಮುನಿರಾಬಾದ್ ಪೊಲೀಸ್ ಠಾಣೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಪ್ರಶಂಸಿಗೆ ಪಾತ್ರರಾಗಿದ್ದರು.
ನಂತರ ಎಎಸ್ಐ ಯಾಗಿ ಬರ್ತಿ ಪಡೆದ ಸಿದ್ದರಾಮಯ್ಯ ಸ್ವಾಮಿ ಗಂಗಾವತಿ ನಗರ ಠಾಣೆಯಲ್ಲಿ ಉತ್ತಮ ಜನ ಸಂಪರ್ಕ ಹೊಂದಿಕೊಂಡು ತಮ್ಮ ಇಲಾಖೆಗೆ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಇಂದು ಇಲಾಖೆಯವರ ವಯೋ ನಿವೃತ್ತಿ ಹೊಂದಿದ ಸಿದ್ದರಾಮಯ್ಯ ಸ್ವಾಮಿಯವರಿಗೆ ತಮ್ಮ ಪೊಲೀಸ್ ಇಲಾಖೆಯಲ್ಲಿ ಬಿಳ್ಕೊಡುಗೆ ಕಾರ್ಯಕ್ರಮ ಮಾಡಿ ಹಿರಿಯ ಅಧಿಕಾರಿಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ,ಕೊಪ್ಪಳ ಮಹಿಳಾ ಪೊಲೀಸ್ ಠಾಣೆ ಸಿಪಿಐ ಆಂಜನೇಯ ಡಿ.ಎಸ್,ಗಂಗಾವತಿ ಗ್ರಾಮೀಣ ಸಿಪಿಐ ಸೋಮಶೇಖರ ಜುಟ್ಟಲ್, ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ,ಯಲಬುರ್ಗಾ ಸಿಪಿಐ ಮೌನೇಶ್ವರ ಮಾಲಿ ಪಾಟೀಲ್ ಸೇರಿದಂತೆ ಇತರರು ಇದ್ದರು.