ಬಹುಜನ ಸಮಾಜ ಪಾರ್ಟಿಯ ರಾಜ್ಯ ನಾಯಕರಾದ
ಪ್ರೊಫೆಸರ್. ಜಿ ಅವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಗಂಗಾವತಿ :1974ರಲ್ಲಿ ಡಿ ಎಸ್ ಎಸ್ ಸಂಘಟನೆ ಕಟ್ಟಿ ರಾಜ್ಯ ದಲಿತ ಮನಸುಗಳ ಒಂದುಗೂಡಿಸಿ ಶೋಷಿತರಯಧ್ವನಿಯಾಗಿ ತ್ಯಾಗಜೀವನ ನಡೆಸಿದ್ದ ಹಾಗೂ ಮನುವಾದಿಗಳ ವಿರುದ್ಧ ಹೋರಾಡಲು ರಾಜಕೀಯ ಶಕ್ತಿಯೊಂದೆಂಬುದನ್ನರಿತು ಕೈಕಮಲಗಳ ಹಿಂಬಾಲಕರಾಗದೆ ತನ್ನ ಮನೆಯಾದ 1984ರಲ್ಲಿ ಅಂಬೇಡ್ಕರ್ ಹಾಗೂ ಇನ್ನೀತರ ಮಹಾತ್ಮರ ಕನಸು ಈಡೇರಿಸಲು ಮತ್ತು ಅಧಿಕಾರ ಹಿಡಿಯಲು ಸ್ಥಾಪಿಸಿವದಂಥ ಬಿಎಸ್ಪಿ ಪಕ್ಷದ ಕಾನ್ಸಿರಾಂರ ಒಡಗೂಡಿ ಪಕ್ಷ ಸಿದ್ಧಾಂತದ ಪರವಾಗಿ ಕೊನೆವರೆಗೂ ಇರುತ್ತೇನೆಂದು ನುಡಿದು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ನನ್ನ ವಾದ ಅಂಬೇಡ್ಕರ್ ವಾದ ನನ್ನ ಧರ್ಮ ಬೌದ್ಧಧರ್ಮ ನನ್ನ ಪಕ್ಷ ಬಿ ಎಸ್ ಪಿ ಪಕ್ಷ “ಎಂದು ನುಡಿದು ಸ್ವಾಭಿಮಾನದ ಶಬ್ದಕ್ಕೆ ಅರ್ಥವಾದರು.
ನಾವೂ ಹಾಗೆಯೇ ನುಡಿಯೋಣ,ನಡಿಯೋಣ ಬಂಧುಗಳೇ ಇನ್ನೂ ಎಲ್ಲಿಯವರೆಗೆ ಅವರಿವರಿಗೆ ಜೈ ಅನ್ನೋಣ ??ಇನ್ನೂ ಎಷ್ಟು ಹೋರಾಟ ಧಿಕ್ಕಾರ ಕೂಗುತ್ತಾ ಹೋಗುವುದು?? ನಮ್ಮ ಪೀಳಿಗೆಗೆ ನಾವೇನು ಹೋರಾಟ ಧಿಕ್ಕಾರ,ಸಂಘರ್ಷದ ಉಡುಗೊರೆ ನೀಡಿ ಹೋಗೋಣವೇ?? ಇನ್ನಾದರೂ ಜಾಗೃತರಾಗೋಣ ಉತ್ತಮ ಸಮಾಜದ ಪ್ರಗತಿಗೆ ಶ್ರಮಿಸಿ ನಮ್ಮ ಮುಂಬುರುವ ಪೀಳಿಗೆಗೆ ರಕ್ಷಣೆ ಉತ್ತಮ ಬದುಕಿಗೆ ಆನಂದದ ಬದುಕಿಗೆ ಶೈಕ್ಷಣಿಕ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಹೊಸಬದಲಾವಣೆಯ ಬಣ್ಣಬಳಿಯೋಣ !ಏಕತೆಸಾರಿ ನೀಲಿಬಾನಲಿ ತೇಲೋಣ!ಪಣತೋಡೋಣ!
ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಸೋಮನಾಥ್ ಭಂಡಾರಿ ಬಿಎಸ್ಪಿ ಜಿಲ್ಲಾ ಉಸ್ತುವಾರಿ ನಾಯಕರಾದ ಹುಲಿಗೇಶ್ ದೇವರಮನಿ ಹಂಪೇಶ್ ಹರಿಗೋಲ್ ಕೇಡಿಎಸ್ಎಸ್ ವಿಭಾಗಿಯ ಸಂಚಾಲಕರು ದುರುಗಪ್ಪ ಐಹೊಳೆ ಸಂಗಾಪುರ ತಾಲೂಕ್ ಸಂಚಾಲಕರು ಹುಸೇನಪ್ಪ ಹಂಚಿನಾಳ ವಕೀಲರು
ಬಿಎಸ್ಪಿ ಯುವ ಮುಖಂಡ ಶಂಕರ್ ಸಿದ್ದಾಪುರ ಸತ್ಯಪ್ಪ ಬೋವಿ ಇಸ್ಮಾಯಿಲ್ಸಾಬ್ ಫ್ರೂಟ್ ಹುಲುಗಪ್ಪ ಕೊಜ್ಜಿ ಅಕ್ಬರ್ ಸಾಬ್ ಸಲೀಂ ಭಗವಾನ್ ದೇವಣ್ಣ ಐಹೊಳೆ ಇನ್ನು ಅನೇಕ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರೊಫೆಸರ್ ಬಿ ಕೃಷ್ಣಪ್ಪ ಸಾಹೇಬರ ಜಯಂತೋತ್ಸವವನ್ನು ಆಚರಿಸಲಾಯಿತು .