ಹಾಸನ ಅಶ್ಲೀಲ ವಿಡಿಯೋ ವೈರಲ್ ಕೇಸ್ ಗೆ ಸಂಬಂಧಪಟ್ಟಂತೆ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ರನ್ನ SIT ಅಧಿಕಾರಿಗಳು ಕೋರ್ಟ್ಗೆ ಹಾಜರು ಪಡಿಸಿದ್ದಾರೆ.3 ಗಂಟೆಗೆ ಹಾಜರು ಪಡಿಸಲು ಸೂಚಿಸಿದ್ದ ನ್ಯಾಯಾಲಯದ ಆದೇಶದ ಮೇರೆಗೆ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ.

ಈ ಸಂಧರ್ಬದಲ್ಲಿ ನ್ಯಾಯಾದೀಶರು ಪ್ರಜ್ವಲ್ ರೇವಣ್ಣರನ್ನ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲಿಗೆ ನಿಮ್ಮ ಹೆಸರೇನು ಎಂದು ಪ್ರಜ್ವಲ್ ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ನಂತರ ಎಲ್ಲಿ ನಿಮ್ಮನ್ನ ವಶಕ್ಕೆ ಪಡೆಯಲಾಯಿತು ಎಂದು ಕೇಳಿದ್ದಾರೆ. ಕೆಂಪೇಗೌಡ ಏರ್ ಪೋರ್ಡ್ ನಲ್ಲಿ ನನ್ನ ವಶಕ್ಕೆ ಪಡೆದ್ರು ಎಂದು ಪ್ರಜ್ವಲ್ ಹೇಳಿದ್ದಾರೆ.

ನಂತರ ನಿಮ್ಮ ಮನೆಗೆ ತಿಳಿಸಿದ್ದರಾ ಎಂದಾಗ ನಮ್ಮ ತಂದೆಗೆ ಹೇಳಲು ಹೇಳಿದೆ ಎಂದಿರುವ ಪ್ರಜ್ವಲ್ , ಏನಾದ್ರೂ ಟಾರ್ಚರ್ ಆಯ್ತಾ ಎಂದು ಜಡ್ಜ್ ಕೇಳಿದಾಗ, ಇಲ್ಲ ಟಾರ್ಚರ್ ಏನು ಆಗಿಲ್ಲ, ಆದರೆ ಎಸ್‌ಐಟಿ ಕಛೇರಿಯ ಶೌಚಾಲಯದ ಬಗ್ಗೆ ಪ್ರಜ್ವಲ್ ಅಳಲು ತೋಡಿಕೊಂಡಿದ್ದಾರೆ. ಶೌಚಾಲಯ ತುಂಬಾ ವಾಸನೆ ಬರುತ್ತದೆ ಎಂದು ಹೇಳಿದ್ದಾರೆ.ಈ ವೇಳೆ ಅಲ್ಲೇ ಇದ್ದ ಕೆಲವರು ನಗಲು ಆರಂಭಿಸಿದ್ರು. ಇದನ್ನ ಗಮನಿಸಿದ ಜಡ್ಜ್ ಎಲ್ಲರೂ ಸುಮ್ಮನಿರುವಂತೆ ಸೂಚಿಸಿರುವ ಘಟನೆ ನಡೆದಿದೆ.

error: Content is protected !!