*ಜಿಲ್ಲಾಡಳಿತ ನೀರಿಗಾಗಿ ಕೋಟಿ ಕೋಟಿ ಖರ್ಚು ಮಾಡುತ್ತಿದೆ ಆದರೆ ಪುರಸಭೆ ಅಧಿಕಾರಿಗಳು ನೀರು ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ*
ರಾಜೇಶ್ವರಿ ನಾಯಕ್

ಕಾರಟಗಿ: ಪಟ್ಟಣದ ಪುರಸಭಾ ವ್ಯಾಪ್ತಿಯ 14ನೇ ವಾರ್ಡಿನಲ್ಲಿ ಸುಮಾರು ಎರಡು ತಿಂಗಳಿನಿಂದ ನೀರಿನ ಅಭಾವ ಉಂಟಾಗಿದ್ದು. ವಾರ್ಡಿನ ನಿವಾಸಿಗಳು ಎಲ್ಲಿಂದರಲ್ಲಿ ನೀರಿಗಾಗಿ ಪರದಾಡುತ್ತಿದ್ದಾರೆ. ವಾರ್ಡಿನ ನಿವಾಸಿಗಳು ಪುರಸಭಾ ಅಧಿಕಾರಿ ಸುರೇಶ್ ಶೆಟ್ಟರ್ ಅವರಿಗೆ ಹೇಳಿದರೆ ವಾಟರ್ ಮ್ಯಾನ್ ಗೆ ಹೇಳುವುದಕ್ಕೆ ಆಗುವುದಿಲ್ಲ ಎಂದು ಬೇಜವಾಬ್ದಾರಿಯ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

14ನೇ ವಾರ್ಡಿನಲ್ಲಿ ವಾಟರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಯಪ್ಪ  ವಾಟರ್ ಮ್ಯಾನ್ ಗಳಿಂದ ಈ ಸಮಸ್ಯೆ ಉದ್ಭವವಾಗಿದ್ದು. ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ತಮಗೆ ಬೇಕಾದವರಿಗೆ ಮಾತ್ರ ನೀರನ್ನು ಬಿಡುವ ವ್ಯವಸ್ಥೆ ನಡೆಸಿಕೊಂಡಿದ್ದಾರೆ  ಎಂದು ವಾರ್ಡ್  ನಿವಾಸಿಗಳು ದೂರಿದ್ದಾರೆ, ಸಚಿವ ಶಿವರಾಜ್ ತಂಗಡಗಿಯವರಿಗೆ  ದೂರವಾಣಿ ಮುಖಾಂತರ ನಮ್ಮ ಸಮಸ್ಯೆಯನ್ನು ಹೇಳಿದ್ದೇವೆ. ಯಾವುದೇ ಸಚಿವರು ಶಾಸಕರು ಇದಕ್ಕೆ ಗಮನಹರಿಸುತ್ತಿಲ್ಲ ಎಂದು ವಾರ್ಡಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವೇಳೆ ವಾರ್ಡಿನ ನಿವಾಸಿ ರಾಜೇಶ್ವರಿ ನಿಜಾನಂದ  ನಾಯಕ ಮಾತನಾಡಿ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ನೀರಿಗಾಗಿ ಅಲೆಯುತ್ತಿರುವ ಸಾರ್ವಜನಿಕರು.  ಶಾಸಕರೇ ಇತ್ತ ಚಿತ್ತ ಹಾಯಿಸಿ. ಸರ್ಕಾರಿ ಅಧಿಕಾರಿಗಳಿಗೆ  ಕಾರಟಗಿ , ನಗರದ 14 ಮತ್ತು 15ನೇ  ವಾರ್ಡ್ ಗಳಲ್ಲಿ ಹಾಗೂ  ಅನೇಕ ಓಣಿಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ ಎಂದು ದಯವಿಟ್ಟು ಮನವರಿಕೆ ಮಾಡಿಕೊಡುವ ಕನಿಷ್ಠ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ. ತಾವು ಅಧಿಕಾರಿಗಳೊಂದಿಗೆ ಧಾವಿಸಿ ಕ್ಷೇತ್ರದಲ್ಲಿ ಯಾವ ಯಾವ ವಾರ್ಡಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗಿದೆ ಎಂದು ಪ್ರಾಥಮಿಕ ವರದಿ ತೆಗೆದುಕೊಂಡು
ತತ್ ಕ್ಷಣವೇ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಮಾಡಿ. ಕ್ಷೇತ್ರಕ್ಕೆ ಅಂಟಿದ ಜಲಕಂಟಕ ನಿವಾರಿಸಲು ಪ್ರಯತ್ನಿಸಿ ಎಲೆಕ್ಷನ್ ಬಂದಾಗ ಮಾತ್ರ ಬಂದು ಸಮಸ್ಯೆಗಳನ್ನು ಆಲಿಸುತ್ತೀರಿ.! ತದನಂತರ ಯಾರು ನಮ್ಮ ಸಮಸ್ಯೆಗಳನ್ನು ಕೇಳುವರು.! ಸರ್ಕಾರ ಬೇಸಿಗೆಯಲ್ಲಿ ನೀರಿಗಾಗಿ ಅನೇಕ  ಯೋಜನೆಗಳನ್ನು ಅನುದಾನಗಳನ್ನು ನೀಡುತ್ತಿದೆ, ಆದರೆ ಅಧಿಕಾರಿಗಳು ಸಾರ್ವಜನಿಕರಿಗೆ ನೀರು ಸಮರ್ಪಕವಾಗಿ ತಲುಸುವಲ್ಲಿ  ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪುರಸಭಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಾಸ್ತವ ಸ್ಥಿತಿ ತಿಳಿದುಕೊಳ್ಳಬೇಕಾಗಿದೆ, ಅಧಿಕಾರಿಗಳು ಇತ್ತ ಗಮನಹರಿಸದಿದ್ದರೆ ಪುರಸಭೆ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡಿನ ನೂರಾರು ನಿವಾಸಿಗಳು ಇದ್ದರು.

error: Content is protected !!