ಗಂಗಾವತಿ :ಗಂಗಾವತಿಯ ಮಹಾ ಜನತೆಯನ್ನು ತಾನು ಬಿಜೆಪಿ ಪಕ್ಷದಿಂದ ಸಿಡಿದು ಹೊರಬಂದಿದ್ದಾಗಿ ನಾಟಕ ಮಾಡಿ ನಿಜ ಎಂದು ನಂಬಿಸಿ ಅವರ ಭಾವನೆಗಳ ಜೊತೆಗೆ ಚೆಲ್ಲಾಟವಾಡಿ ಈಗ ಕೊನೆಗೆ ಅದೇ ಬಿಜೆಪಿ ಪಕ್ಷದ ಒಳಗೆ ಸೇರಿಕೊಳ್ಳುವ ಮೂಲಕ ಗಂಗಾವತಿಯ ಮಹಾಜನತೆಗೆ ಶಾಸಕ ಜಿ.ಜೆ.ರೆಡ್ಡಿ ಅವರು ಮಹಾ ಮೋಸವನ್ನೇ ಮಾಡಿದ್ದಾರೆ. ಗಂಗಾವತಿಯ ಅಪಾರ ಕಾರ್ಯಕರ್ತರು, ಮಹಾಜನತೆ ರೆಡ್ಡಿಗೆ ಮೇಲೆ ಇಟ್ಟುಕೊಂಡಿದ್ದ ಅಪಾರ ವಿಶ್ವಾಸಕ್ಕೆ ವೈಯಕ್ತಿಕ ಲಾಭವನ್ನು ನೋಡಿಕೊಂಡು ಧಕ್ಕೆ ತಂದಿದ್ದಾರೆ. ಇದನ್ನು ಗಂಗಾವತಿಯ ಪ್ರತಿ ಪ್ರಜೆಯೂ ಖಂಡಿಸುತ್ತಿದ್ದಾರೆ. ಗಂಗಾವತಿ ಮಹಾಜನತೆಯ ವಿಶ್ವಾಸ ಮತ್ತು ಪ್ರೀತಿ ಹಾಗೂ ಹೃದಯ ವೈಶಾಲ್ಯ ಗಳಿಗೆ ಬೆಂಕಿ ಇಡುವ ಮೂಲಕ ತಮ್ಮ ಗುಳ್ಳೆ ನರಿ ಬುದ್ಧಿಯನ್ನು ಮತ್ತೆ ತೋರಿಸಿದ್ದಾರೆ.

ಇನ್ನು ಭ್ರಷ್ಟ ಎಂದು ,ಮಣ್ಣು ಚೋರ ಎಂದು ಇದೇ ರೆಡ್ಡಿಯನ್ನು ಹೀನಾಯವಾಗಿ ಹೀಯಾಳಿಸಿ ಬೈಯುತ್ತಿದ್ದ ಬಿಜೆಪಿ ಪಕ್ಷದವರು ಈಗ ರೆಡ್ ಕಾರ್ಪೆಟ್ ಹಾಕಿ ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದು ನಾಚಿಕೆಗೇಡಿನ ಸಂಗತಿ. ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬುದಕ್ಕೆ ಸಾಕ್ಷಿಯಾಗಿದೆ ಬಿಜೆಪಿ. ಇಂತಹ ಪಕ್ಷವನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಜನಸಾಮಾನ್ಯರು ಹೀನಾಯವಾಗಿ ಸೋಲಿಸಲಿದ್ದಾರೆ ಎಂದು-ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಶರಣಪ್ಪ ಸಜ್ಜೆ ಹೊಲ ಗುಡುಗಿದರು.

error: Content is protected !!