ಕೊಪ್ಪಳ :ಈಗಾಗಲೇ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಹೇಳಿದರು.


ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2023ರ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನವರಿ 05 ರಂದು ಹಮ್ಮಿಕೊಂಡ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.


ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರ ಒಂದು ಪ್ರತಿಯನ್ನು ನೋಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಮತದಾರರ ಪಟ್ಟಿಗಳನ್ನು ಸಹಾಯಕ ಆಯುಕ್ತರ ಕಛೇರಿಗಳಲ್ಲಿ, ತಹಶೀಲ್ದಾರ ಕಛೇರಿಗಳಲ್ಲಿ ಹಾಗೂ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಇರಿಸಲಾಗಿದ್ದು, ಪರಿಶೀಲಿಸಿಕೊಳ್ಳಬಹುದಾಗಿದೆ.

ಅಲ್ಲದೇ ವೆಬ್‌ಸೈಟ್ koppal.nic.in ನಲ್ಲಿಯೂ ಸಹ ವೀಕ್ಷಿಸಬಹುದು ಎಂದು ಹೇಳಿದರು.


ಭಾರತ ಚುನಾವಣಾ ಆಯೋಗವು ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳನ್ನು 18 ರಿಂದ 19 ವಯಸ್ಸಿನ ಯುವ ಮತದಾರರ ನೊಂದಣಿಗಾಗಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನಾಗಿ ನೇಮಿಸಿದೆ ಎಂದರು.


ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ವಿಕಲಚೇತನರಿಗೆ ಅನುಕೂಲವಾಗಲು ರ‍್ಯಾಂಪ್‌ಗಳು, ರಸ್ತೆ ಸಂಪರ್ಕ ಇರುವ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚಿಸಿದರು.


ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ನೋಂದಾಯಿತ ಅಂಚೆ ಮೂಲಕ ವಿತರಿಸಲಾಗುತ್ತಿದ್ದು, ಹೊಸದಾಗಿ ನೋಂದಾಯಿತರಾದ, ತಿದ್ದುಪಡಿ ಮಾಡಿಕೊಳ್ಳಲಾದ ಮತದಾರರಿಗೆ ಗುರುತಿನ ಚೀಟಿಗಳನ್ನು ನೋಂದಾಯಿತ ಅಂಚೆಯ ಮೂಲಕ ಕಳುಹಿಸಲಾಗುವುದು ಎಂದು ತಿಳಿಸಿದರು.


ಮತದಾರರ ಪಟ್ಟಿ ಮತ್ತು ಇತರೆ ಚುನಾವಣೆ ಸಂಬಂಧಿತ ಮಾಹಿತಿ ಪಡೆಯಲು ಅಥವಾ ದೂರುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ 1950 ಟೋಲ್‌ಫ್ರೀ ಸಂಖ್ಯೆಯೊಂದಿಗೆ ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ಸಹಾಯವಾಣಿಗೆ ಕರೆಮಾಡಿ ಮಾಹಿತಿ ಪಡೆಯಬಹುದು ಅಥವಾ ದೂರು ಸಲ್ಲಿಸಬಹುದು. ಮತದಾರರ ಪಟ್ಟಿಗಳ ನಿರಂತರ ಕಾಲೋಚಿತಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ವೋಟರ್ ಹೆಲ್ಪ್ಲೈನ್ ಆ್ಯಪ್, https://nvsp.in/ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. “ಯಾವುದೇ ವ್ಯಕ್ತಿ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು” ಎಂಬುದು ಭಾರತ ಚುನಾವಣಾ ಆಯೋಗದ ಆಶಯವಾಗಿದ್ದು, ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.


*ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯ ಮತದಾರು:* ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 278 ಮತಗಟ್ಟೆಗಳು, 1,15,924 ಪುರುಷ ಮತದಾರರು, 1,14,334 ಮಹಿಳಾ ಹಾಗೂ 8 ಇತರೆ ಸೇರಿ ಒಟ್ಟು 2,30,266 ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 264 ಮತಗಟ್ಟೆಗಳು, 1,08,499 ಪುರುಷ, 1,11,346 ಮಹಿಳಾ ಹಾಗೂ 8 ಇತರೆ ಸೇರಿ ಒಟ್ಟು 2,19,853 ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 235 ಮತಗಟ್ಟೆಗಳು, 97,886 ಪುರುಷ, 99,323 ಮಹಿಳಾ ಹಾಗೂ 10 ಇತರೆ ಸೇರಿ ಒಟ್ಟು 1,97,219 ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 256 ಮತಗಟ್ಟೆಗಳು, 1,10,555 ಪುರುಷ, 1,09,643 ಮಹಿಳಾ ಹಾಗೂ 11 ಇತರೆ ಸೇರಿ ಒಟ್ಟು 2,20,209 ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 289 ಮತಗಟ್ಟೆಗಳು, 1,24,444 ಪುರುಷ, 1,26,248 ಮಹಿಳಾ ಹಾಗೂ 12 ಇತರೆ ಸೇರಿ ಒಟ್ಟು 2,50,704 ಮತದಾರರಿದ್ದಾರೆ. ಈ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1322 ಮತಗಟ್ಟೆಗಳಿದ್ದು, 5,57,308 ಪುರುಷ ಮತದಾರರು, 5,60,894 ಮಹಿಳಾ ಮತದಾರರು ಹಾಗೂ 49 ಇತರೆ ಮತದಾರರು ಸೇರಿ ಒಟ್ಟು 11,18,251 ಮತದಾರರಿದ್ದಾರೆ ಎಂದರು.


18 ರಿಂದ 19 ವಯೋಮಾನದ 23002 ಯುವ ಮತದಾರರು :  ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 2829 ಗಂಡು, 2041 ಹೆಣ್ಣು ಸೇರಿ 4870 ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2480 ಗಂಡು, 1659 ಹೆಣ್ಣು ಹಾಗೂ 2 ಇತರೆ ಸೇರಿ ಒಟ್ಟು 4141 ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 2352 ಗಂಡು, 1800 ಹೆಣ್ಣು ಸೇರಿ ಒಟ್ಟು 4152 ಮತದಾರರು. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 2569 ಗಂಡು, 1825 ಹೆಣ್ಣು, 01 ಇತರೆ ಸೇರಿ 4395 ಮತದಾರರು. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 3097 ಗಂಡು, 2347 ಹೆಣ್ಣು ಸೇರಿ 5444 ಮತದಾರರು. ಈ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ 13327 ಗಂಡು, 9672 ಹೆಣ್ಣು, 03 ಇತರೆ ಸೇರಿ ಒಟ್ಟು 23002 ಮತದಾರರಿದ್ದಾರೆ ಎಂದು ಹೇಳಿದರು.


ಜಿಲ್ಲೆಯಲ್ಲಿ 13824 ವಿಕಲಚೇತನ ಮತದಾರರು : ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 1738 ಗಂಡು, 1038 ಹೆಣ್ಣು ಸೇರಿ 2776 ವಿಕಲಚೇತನ ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1645 ಗಂಡು, 1168 ಹೆಣ್ಣು ಸೇರಿ ಒಟ್ಟು 2813 ವಿಕಲಚೇತನ ಮತದಾರರು. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 1427 ಗಂಡು, 1081 ಹೆಣ್ಣು ಸೇರಿ ಒಟ್ಟು 2502 ವಿಕಲಚೇತನ ಮತದಾರರು. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 1962 ಗಂಡು, 1157 ಹೆಣ್ಣು ಸೇರಿ 3119 ವಿಕಲಚೇತನ ಮತದಾರರು. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1483 ಗಂಡು, 1125 ಹೆಣ್ಣು ಸೇರಿ 2608 ವಿಕಲಚೇತನ ಮತದಾರರು. ಈ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಜಿಲ್ಲೆಯಲ್ಲಿ 8255 ಗಂಡು, 5569 ಹೆಣ್ಣು ಸೇರಿ ಒಟ್ಟು 13824 ವಿಕಲಚೇತನ ಮತದಾರರಿದ್ದಾರೆ.


ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಕಷ್ಣಪ್ಪ ಎಂ ಇಟ್ಟಂಗಿ, ಮಂಜುನಾಥ ಸೊರಟೋರು, ಕೆ.ಎಸ್ ಮೈಲಾರಪ್ಪ, ಮಲ್ಲಿಕಾರ್ಜುನ ಬಿ.ಗೌಡರ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ತಹಶೀಲ್ದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!