
ಕೊಪ್ಪಳ :ಜನವರಿ 05ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ-2023ರ ಅಂಗವಾಗಿ ತಾಲೂಕಿನ ಗಿಣಿಗೇರಾ ಗ್ರಾಮದ ಕೆರೆಯಲ್ಲಿ ಜ.5ರಂದು ಹಮ್ಮಿಕೊಂಡಿದ್ದ ಜಲಕ್ರೀಡೆಗೆ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ಚಾಲನೆ ನೀಡಿದರು.
ಬಳಿಕ ಶ್ರೀಗಳು ತಾಲೂಕಿನ ಗಿಣಿಗೇರಾ ಗ್ರಾಮದ ಕೆರೆಯಲ್ಲಿ ಭೂ-ಸಾಹಸ, ಜಲಕ್ರೀಡೆ, ಕೆರೆ ದಡದಲ್ಲಿನ ಉದ್ಯಾನವನ ಹಾಗೂ ಗವಿಶ್ರೀ ಸಭಾಂಗಣವನ್ನು ಉದ್ಘಾಟಿಸಿ, ಕೆರೆಯ ಪುನಶ್ಚೇತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗಿಣಗೇರಾ ಆನೆಗೊಂದಿ ಸಂಸ್ಥಾನ ಸರಸ್ವತಿ ಪೀಠಾಧೀಶರಾದ ಅಭಿನವ ಶ್ರೀಕಂಠ ಸ್ವಾಮೀಜಿ, ನಾಗಲಿಂಗ ಸ್ವಾಮೀಜಿ, ನರಸಿಂಹ ಸ್ವಾಮೀಜಿ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುಬ್ಬಣಾಚಾರ್ಯ ವಿದ್ಯಾನಗರ, ಮಾಜಿ ಶಾಸಕ ಬಸವರಾಜ ಹಿಟ್ನಾಳˌ ಮುಖಂಡರಾದ ಸಿ.ವಿ ಚಂದ್ರಶೇಖರ, ಜಿ.ಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿˌ ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಡೊಳ್ಳಿನ, ಡಿವೈಎಸ್‌ಪಿ ಎಸ್.ಬಿ ಸುಬೇದಾರ್, ಸಿಪಿಐಗಳಾದ ಮಹಾಂತೇಶ ಸಜ್ಜನ್, ವಿಶ್ವನಾಥ ಹೀರೆಗೌಡ್ರು, ಕಲ್ಯಾಣಿ ಕಂಪನಿ ಸಿಇಒ ರತ್ನಪ್ರಸಾದ, ಮುಕುಂದ ಸುಮಿ, ಗ್ರಾಮದ ಮುಖಂಡರು ಹಾಗೂ ಇನ್ನೀತರರು ಉಪಸ್ಥಿತರಿದ್ದರು.