ಗಂಗಾವತಿ,ಜ 18 :ಸಮೀಪದ ಹೇರೂರು ಗ್ರಾಮಸ್ಥರು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ 3 ಕ್ವಿಂಟಾಲ್ 60 ಕರ್ಚೆಕಾಯಿಯನ್ನು ದೇಣಿಗೆಯಾಗಿ ನೀಡಿದರು.
ಅಮರಯ್ಯಸ್ವಾಮಿ ಹಿರೇಮಠ ಮಾತನಾಡಿ ಶ್ರೀ ಗವಿಸಿದ್ದೇಶ್ವರಮಠ ಅನ್ನ ಅಕ್ಷರ ಆರೋಗ್ಯ ಎಂಬ ತ್ರಿವಿಧ ದಾಸೋಹಕ್ಕೆ ಹೆಸರಾಗಿದೆ,ಜ್ಞಾನ ದಾಸೋಹ ಮತ್ತು ಸಾಮಾಜಿಕ ಕಳಕಳಿಯ ಶಕ್ತಿ ಕೇಂದ್ರಗಳಲ್ಲಿ ಒಂದಾಗಿದೆ,ಅಲ್ಲಿದೆ ಸಾವಿರಾರು ವಿಧ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ ಜಾತ್ರೆಗೆ ಹೇರೂರು ಗ್ರಾಮದ ಯುವಕರು ವತಿಯಿಂದ ಪ್ರತಿವರ್ಷದಂತೆ ಈ ವರ್ಷ ಹೇರೂರು ಗ್ರಾಮಸ್ಥರಿಂದ ತಮ್ಮ ತಮ್ಮ ಕೈಯಲ್ಲಿ ಎಷ್ಟು ದಾಸೋಹಕ್ಕೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ, ಇನ್ನೂ ಶ್ರೀ ಗವಿಸಿದ್ದೇಶ್ವರ ಆಶೀರ್ವಾದಿಂದ ಮಳೆ ಬೆಳೆ ಹಾಗೂ ಆರೋಗ್ಯ ಕೊಟ್ರೇ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಶ್ರೀಗವಿಮಠಕ್ಕೆ ದಾಸೋಹಕ್ಕೆ ಸಹಾಯ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ವೀರಯ್ಯಸ್ವಾಮಿ ಹಿರೇಮಠ,ಶಾರದ ವೀರಯ್ಯ ಹಿರೇಮಠ, ಸಿದ್ದನಗೌಡ ಹಿರೇಗೌಡ್ರು,ವಿರೂಪಾಕ್ಷಗೌಡ,ಬಸವರಾಜಗೌಡ ಪಿ.ಪಿ,ಶಂಕ್ರಗೌಡ ಕಲ್ಮಂಗಿ, ಚಂದ್ರಶೇಖರಯ್ಯ,ಮಲ್ಲಿಕಾರ್ಜುನ ಮೂಲಿಮನಿ,ಶೇಖರಪ್ಪ ಕುರುಬರ,ವಿರುಪಣ್ಣ ಹಡಪದ, ಮಂಜುನಾಥ ಹಿರೇಗೌಡ್ರು ಸೇರಿದಂತೆ ಇತರರು ಇದ್ದರು