ಕೊರ್ಲಗುಂದಿಯಿಂದ ತಾಳೂರು ವರೆಗೆ ಹದಗೆಟ್ಟ ರಸ್ತೆ

ಬಳ್ಳಾರಿ,ಜ.18 : ತಾಲೂಕಿನ ಕೊರ್ಲಗುಂದಿ ಯಿಂದ ತಾಳೂರು ಮುಖ್ಯ ರಸ್ತೆಯ ವರೆಗೆ, ಮುಖ್ಯ ರಸ್ತೆ ಪೂರ ಹದಗೆಟ್ಟು ಹೋಗಿದೆ, ಸುಮಾರು 15 ವರ್ಷಗಳ ಹಿಂದೆ ಹಾಕಿದ ರಸ್ತೆ ಮಳೆಯಿಂದ, ಒಡಾಡುವ ದೊಡ್ಡ ವಾಹನಗಳಿಂದ ರಸ್ತೆ ತಗ್ಗು, ದಿನ್ನೆ, ಗುಂಡಿಗಳು ಬಿದ್ದಿರುತ್ತವೆ. ಇದರಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರ ದ ವಾಹನದಲ್ಲಿ ತೆರಳುತ್ತಿರುವ ಸಾರ್ವಜನಿಕರು ತುಂಬಾ ಮೈ ಕೈ ನೋವು, ಸುಸ್ತಾಗಿ, ಅಲ್ಲದೆ ಕೆಲವೊಂದು ಸಮಯದಲ್ಲಿ ಅಪಘಾತಗಳು ಸಂಭವಿಸಿವೆ, ಅದಕ್ಕಾಗಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿ ರಾಜ್ಯ ಸರ್ಕಾರದ ಯೋಜನೆಗಳ ಅನುದಾನಗಳ ಮೂಲಕ ರಸ್ತೆ ಅಭಿವೃದ್ದಿ ಮಾಡಿ ಎಂದು ಸಾರ್ವಜನಿಕರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಅಭಿವೃದ್ಧಿ ಮಾಡಲು ತಕ್ಷಣವೇ ಇದರ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು.

ಕಳೆದ 15 ವರ್ಷಗಳ ಹಿಂದೆ ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ.ಹೆಚ್. ಸುರೇಶ್ ಬಾಬು ಅವರು ಶಾಸಕರಾಗಿದ್ದ ಅವಧಿಯಲ್ಲಿ ಈ ರಸ್ತೆ ಅಭಿವೃದ್ಧಿ ಆಗಿದೆ, ನಂತರ ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು, ಈಗ 5 ವರ್ಷ ದಾಟಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಕ್ಷೇತ್ರದ ಜನರಲ್ಲಿ ಮಂದಹಾಸ ಮೂಡಿದೆ. ಮತ್ತೆ ಕ್ಷೇತ್ರ ಜನಗಳ ಬಗ್ಗೆ, ರೈತರ ಪರವಾಗಿ ಕಾರ್ಮಿಕರ ಪರವಾಗಿ ಧ್ವನಿ ಎತ್ತುವಂತ ಶಾಸಕರು ಸಿಕ್ಕಿದ್ದಾರೆ ಎಂದರು. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲಿ ಎಂದು ಸಾರ್ವನಿಕರ ಮಾತಲ್ಲಿ ನುಡಿತಿದೆ. ಆದರೆ ರಾಜ್ಯ ಸರ್ಕಾರ ವಿವಿಧ ಭಾಗ್ಯಗಳ ಜೊತೆಗೆ ಜನಕ್ಕೆ

ಬೇಕಾಗಿರುವುದು ಉತ್ತಮವಾದ ರಸ್ತೆ, ಬಡ ಜನತೆಗೆ ಆಶ್ರಯ ಅಥವಾ ನಿವೇಶನ, ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗಗಳು ಇಷ್ಟು ಸಿಕ್ಕರೆ ಜನಕ್ಕೆ ಬೇರೆ ಏನು ಬೇಕು ಎಂಬುದು ಸಾರ್ವಜನಿಕರ ಬಾಯಲ್ಲಿ ತೆಲಾಡುತ್ತಿದೆ. ಅದಕ್ಕೆ ರಾಜ್ಯ ಸರ್ಕಾರವು ಸರ್ಕಾರದ ಯೋಜನೆಗಳ ಮೂಲಕ ಅಥವಾ ಜಿಲ್ಲೆಯ ಕ್ಷೇತ್ರದ ಅನುದಾನಗಳ ಮೂಲಕ ಹದ ಗೆಟ್ಟ ರಸ್ತೆಯನ್ನು ತಕ್ಷಣವೇ ಕ್ರಮ ಕೈಗೊಂಡು ಅಭಿವೃದ್ಧಿ ಮಾಡಬೇಕೆಂದು ಸಾರ್ವಜನಿಕರ ಮಾತಾಗಿದೆ.

error: Content is protected !!