
ಶ್ರೀನಿವಾಸಪುರ :- ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಪುರಸಭೆ ಸಿಬ್ಬಂದಿಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು.
ಕಾರ್ಯಕ್ರಮ ಕುರಿತು ಮಾತನಾಡಿದ ಸಂಸದ ಮುನಿಸ್ವಾಮಿ ಬೀದಿ ಬದಿ ವ್ಯಾಪಾರಿಗಳು ಸಾಲಕ್ಕಾಗಿ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಯಾವ ರೀತಿಯಾಗಿ ಮರುಪಾವತಿ ಮಾಡಬೇಕು ಮೊದಲಿಗೆ 10ಸಾವಿರ ನಂತರ 20 ಸಾವಿರ ಈ ರೀತಿಯಾಗಿ ಹಂತ ಹಂತವಾಗಿ ಹೆಚ್ಚಿಗೆ ಹಣವನ್ನು ಯಾವುದೇ ಅಡಮಾನ ವಿಲ್ಲದೆ ಪಿ ಎಂ ಸ್ವಾನಿಧಿ ಯೋಜನೆಯಲ್ಲಿ ಸಾಲ ನೀಡಲಾಗುತ್ತದೆಂದರು.
ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಕಾರಣ ಎಲ್ಲಾ ಕಷ್ಟವನ್ನು ಅರಿತು ಬಡವರ ಅರೋಗ್ಯದ ಹಿತ ದೃಷ್ಟಿಯಿಂದ ಆಯುಷ್ ಮಾನ್ ಬಾರತ್,ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ, ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಬಾರ್ ನಿಧಿ ಈ ರೀತಿಯಾಗಿ ಹಲವು ಯೋಜನೆಗಳನ್ನು ತಂದಿದ್ದು ಸದುಪಯೋಗ ಪಡೆಸಿಕೊಂಡಿರುವ ಪಲಾನುಭವಿ ಜೊತೆ ಉಳಿದ ಪಲಾನುಭವಿಗಳು ಸದುಪಯೋಗ ಪಡೆಸಿಕೊಳ್ಳುವಂತೆ ಮನವಿ ಮಾಡಿದರು.