ಗಂಗಾವತಿ.ಸ.21: 15 ವರ್ಷಗಳ ಹಿಂದೆ ವಿಧ್ಯಾರ್ಥಿ ಸ್ನೇಹಿತರಾಗಿದ್ದ ಇವರೆಲ್ಲರೂ ಈಗ ಮತ್ತೆ ಬೇಟೆಯಾಗಿ ಅಂದಿನ ಬಾಲ್ಯದ ಸಮಧುರ ಕ್ಷಣಗಳನ್ನು ಪರಸ್ಪರ ಸ್ಮರಸಿಕೊಂಡು ಆ ದಿನಗಳು ಎಷ್ಟು ಚಂದ ಇದ್ದವಲ್ಲ ಎಂದು ಮೆಲಕು ಹಾಕಿದರು. ಜೊತೆಗೆ ತಮಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ ಸನ್ಮಾನಿಸಿ ಪುನರ್ಮಿಲನ ಕಾರ್ಯ ಆಚರಿಸಿದರು.
ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದ ಗಂಗಾವತಿ ಶ್ರೀ ವಿನಾಯಕ ಅನುಧಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಕೊಂಡಮಿ) ಗಂಗಾವತಿ ಇಲ್ಲಿ 2008-9 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳು ಸೇರಿ ನಡೆದ ಅಪರೂಪದ ಪುನರ್ಮಿಲನ ಮಾದರಿಯಾಯಿತು.ಅಂದಿನ ಕಾಲದ ಆಟೋಟ ಓದು ನೋವು ನೆಲಿವು ಹಳೆ ಕಾಲದ ಫ್ರೇಡ್ಸ ನೆನಪಿನ ಬುತ್ತಿ ಬಿಚ್ಚಿಟ್ಟರು,
ತಮ್ಮ ಹಿಂದಿನ ದಿನಗಳಲ್ಲಿಯ ಸ್ನೇಹಿತರ ಒಡನಾಟ ಚಲ್ಲಾಟ ಚೇಷ್ಟಿ ತಮಾಶೆ ಜಗಳ ಎಲ್ಲವು ನೆನಪಿಗೆ ಬಂದು ಅಂದಿನ ದಿನಗಳು ಎಷ್ಟು ಚೆಂದ ಇದ್ದವಲ್ಲ ಎಂದು ಸ್ಮರಿಸಿದರು ಈಗ ಸಿಕ್ಕಿರುವ ಹಳೆಯ ಗೆಳೆಯರ ನೆನಪುಗಳು ಹೆಚ್ಚು ಆಪ್ತವಾದವು ಬೇರೆ ಕಡೆಇದ್ದ ಸ್ನೇಹಿತರನ್ನು ಸಂಪರ್ಕ ತರಲು ನಮ್ಮಲ್ಲಿ ಎಲ್ಲರೂ ಪ್ರಯತ್ನ ಮಾಡೆದೆವು ಎಂದು ಹಳೆಯ ವಿಧ್ಯಾರ್ಥಿ ಪರಶುರಾಮ ದೇವರಮನಿ ಪರಸ್ಪರ ಅನಿಸಿಕೆ ಹಂಚಿಕೊಂಡರು. ಶಿಕ್ಷಣ ಇಲಾಖೆ ಪ್ರತಿವರ್ಷ ಕೊಡು ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀನಿವಾಸ ನಾಯ್ಡು ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ವಿದ್ಯ ಸಂಸ್ಥೆ ಉಪಾಧ್ಯಕ್ಷ ಶ್ಯಾವಿ ತಿಪ್ಪಣ,ಕಾರ್ಯದರ್ಶಿ ಕೆ.ವೀರೇಶ, ಹಿರೇಜಂತಕಲ್ ಸ.ಹಿ.ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ವೈ.ಗೌಡರ್,ದೈಹಿಕ ಶಿಕ್ಷಕರಾದ ಉಜ್ಜನಗೌಡ,ಸಂಕಲ್ಪ ಪದವಿ ಪೂರ್ವ ಕಾಲೇಜು ಉಪನ್ಯಾಸ ಹೆಚ್.ನಾಗರಾಜ,ಶಿಕ್ಷಕರಾದ ಶ್ರೀನಿವಾಸ ಯು,ಚನ್ನಬಸವ ಯು,ರಾಮನಗೌಡ,ದೊಡ್ಡಯ್ಯ ಹಿರೇಮಠ, ಸೌಮ್ಯಶ್ರೀ ಶ್ರೀನಿವಾಸ ನಾಯ್ಡು,
ಸಂತೋಷಕುಮಾರ ಬಿ. ಹಳೆಯ ವಿಧ್ಯಾರ್ಥಿಗಳಾದ ಆಂಜನೇಪ್ಪ,ಶೃತಿ, ಶ್ರೀದೇವಿ,ಮದನ್ ಸೇರಿದಂತೆ ಇತರರು ,ಸಾಗರ್,ಖಲದರ್,ಶಂಕರ್, ಅನಿಲ್,