ಗಂಗಾವತಿ ಪಟ್ಟಣದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್  ವೃತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ ಎ ನಾರಾಯಣಗೌಡರ ಬಣದಿಂದ ನಗರ ಘಟಕ  ಅಧ್ಯಕ್ಷರಾದ ಯಮನೂರ ಭಟ್ಟ ಅವರ ನೇತೃತ್ವದಲ್ಲಿ ಮಾತೆ ಸಾವಿತ್ರಿ ಬಾಪುಲೆ ಅವರ ಜನ್ಮದಿನವನ್ನು ತುಂಬಾ ಅದ್ದೂರಿಯಾಗಿ ಮಾತೆ ಸಾವಿತ್ರಿ  ಬಾಪುಲೆಯವರ  ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜನ್ಮದಿನವನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಘಟಕ ಅಧ್ಯಕ್ಷರಾದ ಯಮನೂರ ಭಟ್ ಅವರು ಭಾರತ ದೇಶದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂದೇ ಗುರುತಿಸಿಕೊಂಡ ಮಾತೆ ಸಾವಿತ್ರಿ ಬಾಪುಲೆ ಅವರು ಈ ದೇಶದ ಕೊಡುಗೆ ಎಂದೇ ಗುರುತಿಸಿಕೊಂಡು ಅವರು ಭವ್ಯ ಭಾರತದ ಶೋಷಿತ ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ ವಂಚಿತ  ಹೆಣ್ಣು ಮಕ್ಕಳ  ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮೊದಲಿ ನವರಾಗಿದ್ದರು.

ಇಂಥ  ಧೀರ ಹೆಣ್ಣು ಮಕ್ಕಳು ಭಾರತ ದೇಶಕ್ಕೆ ಕಳಶ ಇದ್ದಂತೆ ಭಾರತ  ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಇಲ್ಲದಿದ್ದಾಗ ಮಾತೆ ಸಾವಿತ್ರಿ ಬಾಪುಲೆ ಅವರು ಮನೆ ಮನೆಗೂ ತೆರಳಿ ಅವರ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸುವಂತೆ ಮನವಿ ಮಾಡಿ.

ಪ್ರತಿ ಹಳ್ಳಿಗೂ  ತೆರಳಿ ವಿದ್ಯಾಭಾಸವನ್ನು ನಡೆಸಿ ಕೊಡುತ್ತಿದ್ದರು ವಿದ್ಯಾಭ್ಯಾಸ ಮಾಡಿಸಿ ಬರುವ ದಾರಿಯಲ್ಲಿ ಕೆಲವು ಪುಂಡು ಪುಂಡಪೋಕರಿ ಜನರು ಅವರ ಮೇಲೆ ದಾಳಿ ಮಾಡಿಸಿ ಅವರ ಮೇಲೆ ಹಸುವಿನ ಸಗಣಿ ಮೊಟ್ಟೆ ಟೊಮೊಟೊ ಎಸಗಿ ಅವಮಾನ ಮಾಡುತ್ತಿದ್ದರು ಆದರೂ ಮಾತೆ ಸಾವಿತ್ರಿ  ಬಾಪುಲೆ ಅವರು ತಮ್ಮ ಬ್ಯಾಗಿನಲ್ಲಿ ಎರಡು ಸೀರೆಯನ್ನು ದಿನನಿತ್ಯ ಒಯ್ಯುತ್ತಿದ್ದರು ಒಂದು ಸೀರೆಗೆ ಸಗಣೆ ನೀರನ್ನು ಎರಚಿದ ನಂತರ ಬೇರೆ ಸೀರೆಯನ್ನು ಬದಲಾವಣೆ ಮಾಡುತ್ತಿದ್ದರು ಮಾತೆ ಸಾವಿತ್ರಿ ಅವರ ಮೇಲೆ ಎಷ್ಟೇ ಆಪಾದನೆ ಮಾಡಿದರು  ಅದನ್ನು ಲೆಕ್ಕಿಸದೆ.

ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ದೇಯಾತೊಟ್ಟು ಸಮಾಜದ ಪುಂಡುಪೋಕರಿಗಳ ಜೊತೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಲಿಸುವಲ್ಲಿ ಯಶಸ್ಸನ್ನು ಕಾಣುತ್ತಿದ್ದರು ಎಂದು ಹೇಳಿದರು.

ತದನಂತರ ಮಾತನಾಡಿದ ದೇವನ ಸಂಗಪ್ಪ ರವರು  ಈ ದೇಶದಲ್ಲಿ ಶಿಕ್ಷಣ ವಂಚಿತ ಹೆಣ್ಣು ಮಕ್ಕಳಿಗೆ ಶಾಂತಿಸುವಸ್ತು ಕಾಪಾಡುವಂತ ಶಿಕ್ಷಣವನ್ನು ಮಹಾಂತರವಾಗಿ ನೀಡಿದ  ಶೋಷಿತ ಸಮುದಾಯಗಳ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಮೂಲಕ ಮಹತ್ವದ ಕಾರ್ಯ ಮಾಡಿದರೆಂದು ಹೇಳಿದರು.

ಈ ಸಂದರ್ಭದಲ್ಲಿ  ಮರಿಸ್ವಾಮಿ C. K ( ಡಿಎಸ್ಎಸ್ ಭೀಮವಾದ ಜಿಲ್ಲಾಧ್ಯಕ್ಷರು ) ಹಾಗೂ  ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಲಕ್ಷ್ಮಣ್ ಸಿಂಗ್ ಪವನ್ ಕುಮಾರ್ G ಸುನಿಲ್ ಕುಮಾರ್ ಚಲವಾದಿ  ಹುಲಿಗೇಶ್ ಹನುಮೇಶ್ ಕುರುಬ ಶರಣಪ್ಪ ಭಜಂತ್ರಿ ಬಸವರಾಜ್ ಭಜಂತ್ರಿ ರಮೇಶ್  ಹನುಮಂತ ಭಜಂತ್ರಿ ಹಾಗೂ ಇನ್ನಿತರ ಮುಖಂಡರುಗಳು ಭಾಗಿಯಾಗಿದ್ದರು

error: Content is protected !!