ಗಂಗಾವತಿ:ಜೆ.ಜೆ.ಎಂ. ಕಾಮಗಾರಿ ಅನುಷ್ಠಾನದ ಪರಿಶೀಲನಾ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಿ ಜಿಲ್ಲಾ ಪಂಚಾಯತ್ ಸಿ.ಇ.ಓ, ಇವರು ಹೊರಗೆ ಕಳುಹಿಸಿ ಅವಮಾನಿಸಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಂಗಾವತಿ ಪತ್ರಕರ್ತರು ಮತ್ತು ಮಾಧ್ಯಮದ ತಾ.ಪಂ.ಸಭಾಂಗಣ ಹಾಗೂ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗೂ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಜೆ.ಜೆ.ಎಂ. ಶುದ್ಧ ಕುಡಿಯುವ ನೀರಿನ ಕಾಮಗಾರಿ ಅನುಷ್ಠಾನದ ಲೋಪಗಳ ಬಗ್ಗೆ ಪರಾಮರ್ಶಿಸಲು ಜಿ.ಪಂ. ಸಿ.ಇ.ಓ. ಹಾಗೂ ಸ್ಥಳಿಯ ಶಾಸಕರ ನೇತೃತ್ವದಲ್ಲಿ ಗಂಗಾವತಿ ತಾಲೂಕ ಪಂಚಾಯತ್ ಸಭಾಂಗಣ ಮಂಥನದಲ್ಲಿ ಶುಕ್ರವಾಗಿ ಬೆಳಿಗ್ಗೆ 11-20ಕ್ಕೆ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಆಹ್ವಾನಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಜಿ.ಪಂ. ಸಿ.ಇ.ಓ. ರವರು ಪತ್ರಕರ್ತರನ್ನು ಈ ಸಭೆಗೆ ಆಹ್ವಾನಿಸಿಲ್ಲ, ಸಭೆ ಆದ ನಂತರ ನಿಮ್ಮನ್ನು ಕರೆಯಲಾಗುತ್ತದೆ ಎಂದು ತಿಳಿಸಿದರು. ಇದರಿಂದ ಪತ್ರಕರ್ತರ ಕಾರ್ಯಕಲಾಪಕ್ಕೆ ಧಕ್ಕೆಯಾಗುವಂತಹ ಮಾತುಗಳನ್ನಾಡಿರುವ ಜಿ.ಪಂ. ಸಿ.ಇ.ಒ. ರವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರ ಅನುಷ್ಠಾನ ಮಾಡುವ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಪತ್ರಕರ್ತರು ಮತ್ತು ಮಾಧ್ಯಮದವರು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಕೆ.ಡಿ.ಪಿ.ಮತ್ತು ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಳ್ಳುವುದು ಹಲವು ದಶಕಗಳ ಸಂಪದಾಯವಾಗಿರುತ್ತದೆ. ಆದರೆ ಜಿ.ಪಂ. ಸಿ.ಇ.ಒ. ರವರು ಜಿಲ್ಲೆಯ ಇತರೇ ತಾಲೂಕುಗಳಲ್ಲಿಯೂ ಸಹ ಜೆ.ಜೆ.ಎಂ. ಕಾಮಗಾರಿ ಪರಿಶೀಲನಾ ಸಭೆ ನಡೆದಾಗ ಅಲ್ಲಿಯು ಸಹ ಪತ್ರಕರ್ತರನ್ನು ಹೊರಗಡೆ ಕಳುಹಿದ್ದಾರೆ.

ಇದರಿಂದ ಪತ್ರಕರ್ತರು ಮತ್ತು ಮಾಧ್ಯಮದವರು ಕೆಲಸಗಳಿಗೆ ಅಡ್ಡಿಯನ್ನು ಮಾಡುವ ಆತಂಕ ಇದ್ದು, ಕೂಡಲೇ ಸರ್ಕಾರ ಸೂಕ್ತ ಸುತ್ತೋಲೆ ಮೂಲಕ ತಾಲೂಕ ಮತ್ತು ಜಿಲ್ಲಾಮಟ್ಟದ ಸರ್ಕಾರದ ಅಭಿವೃದ್ಧಿ ಕಾಮಗಾರಿ ಕೆ.ಡಿ.ಪಿ. ಸಾಮಾನ್ಯ ಸಭೆ, ಮತ್ತು ಅಧಿಕಾರಿಗಳ ಸಭೆಗಳು ನಡೆದಲ್ಲಿ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಸಭೆಗೆ ಆಹ್ವಾನಿಸಿ ಸಂಪೂರ್ಣ ಮಾಹಿತಿ ಪಡೆಯಲು ಅನುಕೂಲ ಮಾಡಿಕೊಡಬೇಕು, ಗಂಗಾವತಿ ಪತ್ರಕರ್ತರು ಮತ್ತು ಮಾಧ್ಯಮದವರನ್ನು ಸಭೆಯಿಂದ ಹೊರಗಡೆ ಕಳುಹಿಸಿದ ಜಿ.ಪಂ. ಸಿ.ಇ.ಓ. ಕೊಪ್ಪಳ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.ಈ ಸಭೆಯಲ್ಲಿ ಶಾಸಕರೊಂದಿಗೆ ಅವರ ಬೆಂಬಲಿಗರೂ ಸಹ ಪಾಲ್ಗೊಂಡಿದ್ದರು ಅವರನ್ನು ಸಭೆಯಲ್ಲಿ ಉಳಿಸಿಕೊಂಡು, ಪತ್ರಕರ್ತರು ಮತ್ತು ಮಾಧ್ಯಮದವರನ್ನು ಹೊರಗಡೆ ಕಳುಹಿಸಿರುವುದು ಖಂಡನಿಯವಾಗಿದೆ.


ಪತ್ರಕರ್ತರು ಮತ್ತು ಮಾಧ್ಯಮದವರಿಗೆ ಅವಮಾನ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಸರ್ಕಾರ ಕೈಗೊಂಡು ಪತ್ರಕರ್ತರು ಮತ್ತು ಮಾಧ್ಯಮದವರ ಕೆಲಸ ಕಾರ್ಯಗಳನ್ನು ಮಾಡಲು ಅನುವು ಮಾಡಿಕೊಡಬೇಕು ಜೊತೆಗೆ ಹಕ್ಕು ಮತ್ತು ಕರ್ತವ್ಯಗಳನ್ನು ಕಾಪಾಡುವಂತೆ ಮನವಿ ಮಾಡಿದರು.


ಈ ಸಂದರ್ಭದಲ್ಲಿ ಪತ್ರಕರ್ತರಾದ ಕೆ.ನಿಂಗಜ್ಜ, ನಾಗರಾಜ ಇಂಗಳಗಿ.ರಾಮಮೂರ್ತಿ ನವಲಿ,ಸಿ.ಮಹಾಲಕ್ಷ್ಮಿ, ಎಂ.ಜೆ.ಶ್ರೀನಿವಾಸ,ಹರೀಶ ಕುಲಕರ್ಣಿ, ವಿಶ್ವನಾಥ ಬೆಳಗಲ್ ಮಠ,ಜೋಗದ ಕೃಷ್ಙಪ್ಪ ನಾಯಕ,ಜಿ.ತಿರುಪಾಲಯ್ಯ, ರವಿ ಸಾಕ್ಷಿ,ದೇವದಾನಂ,ಮುಕ್ಕುಂದಿ ಚಂದ್ರಶೇಖರ,ವಿಜಯಕುಮಾರ್, ಸೈಯದ್ ಅಲಿ,ಗಾದಿಲಿಂಗಪ್ಪ ನಾಯಕ,ಜೋಗಿನ್ ರಮೇಶ, ಮಲ್ಲಿಕಾರ್ಜುನ ಗೋಟೂರು,ಶಿವಪ್ಪ ನಾಯಕ,ವೆಂಕಟೇಶ ಮಾಂತ,ಚನ್ನಬಸವ ಮಾನ್ವಿ,ವೆಂಕಟೇಶ ಉಪ್ಪಾರ,ಮಂಜುನಾಥ ಗುಡ್ಲಾನೂರು, ಸಿ.ಡಿ. ರಾಮಕೃಷ್ಣ,ಎಂ.ಡಿ.ಗೌಸ್,ಎಂ.ಡಿ.ಅಲಿ.ಮಂಜುನಾಥ ಹೋಸ್ಕೇರಿ, ಕೆ.ಎಂ.ಶರಣಯ್ಯ, ಹನುಮೇಶ ಭಟಾರಿ,ನಾಗರಾಜ ಕೊಟ್ನೆಕಲ್,ಹೊಸಳ್ಳಿ ರಗಡಪ್ಪ ಸೇರಿ ಪತ್ರಕರ್ತರು ಮಾಧ್ಯಮದವರಿದ್ದರು

error: Content is protected !!