ಗಂಗಾವತಿ.ಆ 06 :ತಾಯಿಯ ಹಾಲು ಅಮೃತಕ್ಕೆ ಸಮಾನ ತಾಯಿ ಹಾಲಿನಿಂದ ಮಗು  ತಾಯಿ ಬಾಂಧವ್ಯ ಹೆಚ್ಚುತ್ತದೆ ಎಂದು  ತಾಲೂಕು ಆಶಾ ಕಾರ್ಯಕರ್ತೆ  ಮೇಲ್ವಿಚಾರಕರಾದ ಮಂಜುಳಾ ಹೇಳಿದರು.

ನಗರದ ವಾರ್ಡ್ 31 ನೇ  ವಿರುಪಾಪೂರ ತಾಂಡ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಸ್ತನಪಾನಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ  ತಾಯಿಯ ಹಾಲು ಅಮೃತಕ್ಕೆ ಸಮಾನ ಮಗು ಹುಟ್ಟಿದ ತಕ್ಷಣ ಮಗುವಿಗೆ ಅರ್ಧ ಗಂಟೆ ಒಳಗೆ ಹಾಲುಣಿಸಬೇಕು
ಹುಟ್ಟಿದ ಮಗುವುಗೆ ಮೊದಲ ಆರು ತಿಂಗಳು ಕೇವಲ ತಾಯಿ ಹಾಲು ಮಾತ್ರ ಕೊಡಬೇಕು ನಂತರ ಮಗುವಿಗೆ ತಾಯಿ ಹಾಲು ಜೊತೆಗೆ ಮೇಲಿನ ಆಹಾರಗಳಾದ ಅಕ್ಕಿ ಗಂಜಿ ಹಣ್ಣಿನ ರಸ ಕುದಿಸಿದ ತರಕಾರಿಗಳು ಎರಡು ವರ್ಷಗಳವರೆಗೆ ಕೊಡಬೇಕು ತಾಯಿ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಮತ್ತು ಮಗುವಿನ ಬೆಳವಣಿಗೆ ಬೇಕಾದ ಪೋಷಕಾಂಶಗಳು ಇರುತ್ತದೆ ತಾಯಿಯ ಹಾಲುಣೊಸುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹನುಮಂತಿ,ಮಲೇರಿಯಾ ಲಿಂಕ್ ವರ್ಕರ ಹೆಚ್.ಸುರೇಶ. ಕಾಸೀಬಿ.ಅಂಗನವಾಡಿ ಕಾರ್ಯಕರ್ತರಾದ ಶಾಂತಮ್ಮ.ಸಾವಿತ್ರಿ. ಸುಲೇಚನಮ್ಮ,ಉಮಾದೇವಿ. ಗಿರೀಜಾ. ಆಶಾ ಕಾರ್ಯಕರ್ತರಾದ ಸರೋಜಬಾಯಿ. ದೀಪಾ.ಮೀನಾಕ್ಷಿ.ಜ್ಯೋತಿ. ಲಲಿತಾ ಸೇರಿದಂತೆ ಇತರರು ಇದ್ದರು

error: Content is protected !!