ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ಕಿಷ್ಕಿಂದೆಯ ಅಂಜನಾದ್ರಿ ಸನ್ನಿಧಿದಾನದಲ್ಲಿ ಪ್ರತಿ ಅಮವಾಸೆಗೆ ಭೋಜನ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಮತ್ತು ಸಮಾಜ ಸೇವೆ ಜೊತೆಗೆ ಧಾರ್ಮಿಕ ಮನೋಭಾವನೆ ಹೊಂದಿರುವ ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಜಿ ರಾಮಕೃಷ್ಣ ಅವರು ಸೋಮವಾರ ದಂದು ಭೀಮನ ಹಾಗೂ ನಾಗರ ಅಮಾವಾಸ್ಯೆ ಪ್ರಯುಕ್ತ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಭೋಜನ ಹಾಗೂ ಪ್ರಸಾದ ವ್ಯವಸ್ಥೆಯನ್ನು ಮಾಡಿದರು,

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ ವಂಶಸ್ಥರಾದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಶ್ರೀರಾಮನಗರದ ಜಿ ರಾಮಕೃಷ್ಣ ಅವರು ಅತ್ಯಂತ ಕ್ರಿಯಾಶೀಲರಾಗಿದ್ದು. ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಮನೋಭಾವನೆಯ ಜೊತೆಗೆ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ, ಅವರು ಪ್ರತಿ ಅಮಾವಾಸ್ಯೆಗೆ ಕಿಷ್ಕಿಂದೆಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುರಸ್ಕಾರದ ಜೊತೆಗೆ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ನಡೆಸುವ ಸಂಕಲ್ಪವನ್ನು ಹೊಂದಿದ್ದು ಇದರಿಂದ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿ ಅವರ ಕಾರ್ಯವನ್ನು ಪ್ರಶಂಶಿಸಿದರು, ಪ್ರಸ್ತುತ ಇಂದಿನ ಪ್ರಸಾದ ಹಾಗೂ ಬೋಧನಾ ವ್ಯವಸ್ಥೆಯನ್ನು ಅವರ ಶ್ರೀಮತಿಯಾದ ಶ್ರೀಮತಿ ದುರ್ಗಾರಾಣಿ ಜಿ ರಾಮಕೃಷ್ಣ ಮತ್ತು ಕುಟುಂಬದವರು ನೆರವೇರಿಸಿದ್ದು.ಈ ಹಿನ್ನೆಲೆಯಲ್ಲಿ, ಶ್ರೀಮತಿ ದುರ್ಗಾರಾಣಿ ಹಾಗೂ ಶ್ರೀಮತಿ ಲಲಿತಾರಾಣಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಭಕ್ತರು ಗೌರವಿಸಿದರು. ಆಯೋಜಕ ಜಿ ರಾಮಕೃಷ್ಣ ಮಾತನಾಡಿ, ಸೇರಿದಂತೆ ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ಹಾಗೂ ಭೋಜನೆ ಮೂಲಕ ಕಿಷ್ಕಿಂದೆಯ ಶ್ರೀ ಆಂಜನೇಯ ಸ್ವಾಮಿ ವಿಶ್ವದಾದ್ಯಂತ ಪಸರಿಸಲಿ ಆತನ ಅನುಗ್ರಹ ಆಶೀರ್ವಾದ ಸದಾ ಕಾಲ ವಿಶ್ವದ ಜನತೆಗೆ ದೊರೆಯಲಿ ಎಂದು ತಿಳಿಸಿದರು, ಇದಕ್ಕೂ ಮುಂಚೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಅಷ್ಟೋತ್ತರ. ಶತರಾಮಾವಳಿ ಪಾರಾಯಣ ಪೂಜಾ ಕಾರ್ಯಕ್ರಮಗಳನ್ನು ಜಿ.ರಾಮಕೃಷ್ಣ ದಂಪತಿಗಳು ನೆರವೇರಿಸಿದರು,, ಅಮಾವಾಸ್ಯೆ ಪ್ರಯುಕ್ತ ಆಗಮಿಸಿದ ನೂರಾರು ಸಂಖ್ಯೆ ಭಕ್ತಾದಿಗಳು ಶುಚಿ ರುಚಿಯಾದ ಪ್ರಸಾದ ಭೋಜನವನ್ನು ಸವಿದು ಜಿ.ರಾಮಕೃಷ್ಣ ದಂಪತಿಗಳಿಗೆ ಶುಭ ಹಾರೈಸಿದರು

error: Content is protected !!