ಗಂಗಾವತಿ : ಗಂಗಾವತಿ ನಗರದ ಶ್ರೀ ಗುರು ಸ್ವಾಮಿಗಳಾದ ಶೇಖರ್ ಯಮನೂರಪ್ಪ ಇವರ ನೇತೃತ್ವದಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಬೆಳಗಿನ ಜಾವ ಎಂಟು ಗಂಟೆಗೆ ಗಂಗಾವತಿ ನಗರದಿಂದ ಕಂಪ್ಲಿ ಮಾರ್ಗವಾಗಿ ಮಂತ್ರಾಲಯಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.
ಪಾದಯಾತ್ರೆಯ ಮಾರ್ಗ
ಗಂಗಾವತಿ ನಗರದಿಂದ ಆರಂಭವಾಗಿ ಕಂಪ್ಲಿ ಸಿರುಗುಪ್ಪ ಉರುಕುಂದಿ ಈರಣ್ಣ ಮಾದಾವರ ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಾರೆ. ಗುರುವಾರದಂದು ಮಂತ್ರಾಲಯಕ್ಕೆ ತೆರಳುತ್ತಾರೆ.


ಈ ಪಾದಯಾತ್ರೆಯನ್ನು ಶ್ರದ್ಧಾ ಭಕ್ತಿಯಿಂದ ಆರಂಭಿಸಿದ್ದಾರೆ ಹಾಗೂ ತಮ್ಮ ಇಷ್ಟಾರ್ಥ ಬೇಡಿಕೆಗಳನ್ನು ಈಡೇರಿಸುವುದರ ಸಲುವಾಗಿ ಈ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ರಾಘವೇಂದ್ರ ಬುಕ್ ಡಿಪೋ ಮಾಲಕರು,ಯಮನೂರಪ್ಪ, ರಮೇಶ್ ಮಡಿವಾಳ್ ಹನುಮಂತಪ್ಪ ಐಹೊಳೆ ಬಸವರಾಜ್ ಕಟ್ಟಿಮನಿ ಚಂದ್ರಶೇಖರ್ ಹಡಪದ ಶಿವಪ್ಪ ಮಾದಿಗ ಹಾಗೂ ಇನ್ನೂ ಮುಂತಾದ ಭಕ್ತಾದಿಗಳು ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.

