ಕೊರಟಗೆರೆ :ಬೆಳ್ಳಂ ಬೆಳಗ್ಗೆ ಓರ್ವ ರೈತ ಒಂದು ಹಸುವಿನ ಮೇಲೆ ಕರಡಿ ದಾಳಿ.ಜಮೀನಿನ ಬಳಿ ತೆರಳುವಾಗ ನರಸಿಂಹಮೂರ್ತಿ ಎನ್ನುವ ರೈತನ ಮೇಲೆ ದಾಳಿ ಮಾಡಿದ ಕರಡಿ ನಂತರ ಗ್ರಾಮದೊಳಗೆ ಬಂದ ಕರಡಿ ರೈತರೊಬ್ಬರ ಮನೆಗೆ ನುಗ್ಗಿ ಹಸುವಿನ ಮೇಲು ದಾಳಿ ನಡೆಸಿದೆ
ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆ ನಡೆದಿರುವ ಘಟನೆ..
ಆತಂಕಗೊಂಡ ಗ್ರಾಮಸ್ಥರು
ಇನ್ನು ಗಾಯಗೊಂಡ ವ್ಯಕ್ತಿಯನ್ನು ಸ್ಥಳಿಯರ ಸಹಾಯದಿಂದ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದ ಬಂದಿದೆ…
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಕರಡಿ ಸೆರೆ ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ, ಸಿಪಿಐ ಸುರೇಶ್ ಮತ್ತು ಆರ್ ಎಫ್ ಓ ಸುರೇಶ್ ಭೇಟಿನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.