ತುಮಕೂರು: ತುಮಕೂರಿನ ನಿಟ್ಟೂರು ಬಳಿಯ ಗ್ರಾಮದಲ್ಲಿ ಬೆಸ್ಕಾಂ ನಿಂದ ಕಳಪೆ ಕಾಮಗಾರಿ ಆರೋಪ. ಕಳಪೆ ಕಾಮಗಾರಿ ಹೊತ್ತಿರುವ ಬೆಸ್ಕಾಂ ಅಧಿಕಾರಿಗಳು. ಗುತ್ತಿಗೆದಾರ ಹಾಗೂ ಬೆಸ್ಕಾಂ ಅಧಿಕಾರಿಗಳ ಕೇವಲ 40 ವಿದ್ಯುತ್ ಕಂಬ ಅಳವಡಿಸಿ 131 ಹೊಸ ಕಂಬ ಅಳವಡಿಸಿದ್ದೇವೆ ಎಂದು ಬಿಲ್ ಮಾಡಿ ಹಣ ತಿಂದಿದ್ದಾರೆ ಎಂದು ರೈತರ ಆರೋಪ.
ವಿದ್ಯುತ್ ಕಂಬ ವಿದ್ಯುತ್ ಅಳವಡಿಸುವ ನೆಪದಲ್ಲಿ 26 ಲಕ್ಷ ಗುಳುಂ. ಅಧಿಕಾರಿಗಳಿಂದಲೇ ಗೋಲ್ಮಾಲ್ ಆರೋಪ. ನಿಟ್ಟೂರು ಬೆಸ್ಕಾಂ ಉಪ ವಿಭಾಗದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ.
ಕರೆಂಟ್ ಸರಿಯಾಗಿ ಕೊಡುತ್ತಿಲ್ಲ. ಹಳೆಯ ವೈರುಗಳನ್ನೇ ಹಾಕಿ ಸರ್ಕಾರಕ್ಕೆ ಹೊಸ ಬಿಲ್ ತೋರಿಸಿ ಹಣ ತಿಂದಿದ್ದಾರೆ. ಮನುಷ್ಯರ ಕೈಗೆಟಕುವಂತೆ ಹೈ ವೋಲ್ಟೇಜ್ ಕೇಬಲ್ ಗಳನ್ನು ಹಾಕಲಾಗಿದೆ ಇದರಿಂದ ಪ್ರಾಣಹಾನಿಯಾಗುವ ಸಾಧ್ಯತೆಗಳಿವೆ ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಕೆಲಸ ಪೂರ್ಣಗೊಳಿಸಲು ವಾಹನ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದ್ದರಿಂದ ಕೆಲಸ ವಿಳಂಬವಾಗಿದೆ ಮುಂಬರುವ ದಿನಗಳಲ್ಲಿ ಕೆಲಸ ಮುಗಿಸುವುದಾಗಿ ಅಧಿಕಾರಿ ಹೇಳಿದ್ದಾರೆ.