ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿವತಿಯಿಂದ ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಲಕ್ಷಾಂತರ ರೂಗಳ ಚೆಕ್ ವಿತರಣೆ….

ಕೊರಟಗೆರೆ ತಾಲ್ಲೂಕಿನ ಹಲವು ಗ್ರಾಮಗಳ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಚೆಕ್ ಬಿಡುಗಡೆ ಮಾಡಿದ ಜಿಲ್ಲಾ ನಿರ್ದೇಶಕರಾದ ದಿನೇಶ್ ಟಿ ಹಾಗೂ ತಾಲ್ಲೂಕು ಯೋಜನಾಧಿಕಾರಿಗಳಾದ ಬಾಲಕೃಷ್ಣ ರವರು.

ಕೊರಟಗೆರೆ ಪಟ್ಟಣದ ತೇರಿನ ಬೀದಿಯ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಗೆ ಒಂದು ಲಕ್ಷದ ಐವತ್ತು ಸಾವಿರ ರೂಗಳು ಹಾಗೂ ಇದೇ ತಾಲ್ಲೂಕಿನ ಟಿ ಗೊಲ್ಲಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ದೇವಾಲಯದ ಅಭಿವೃದ್ಧಿ ಜೀರ್ಣೋದ್ಧಾರಕ್ಕಾಗಿ ಎರಡು ಲಕ್ಷ ಮೌಲ್ಯದ ಚೆಕ್ ವಿತರಣೆ ಮಾಡಿದರು.

ನಂತರ ಜಿಲ್ಲಾ ನಿರ್ದೇಶಕ ದಿನೇಶ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ವೀರೇಂದ್ರ ಹೆಗ್ಗಡೆ ರವರು ನಮ್ಮ ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಸಹಾಯ ಧನವನ್ನು ನೀಡುತ್ತಿದ್ದಾರೆ.

ಒಂದು ಗ್ರಾಮ ಮುಂದುವರೆಯಬೇಕೆಂದರೆ ಎರಡು ಮುಖ್ಯವಾದ ಕಾರಣಗಳೆಂದರೆ ಶಾಲೆ ಮತ್ತು ದೇವಸ್ಥಾನಗಳು.

ಶಾಲೆಯಲ್ಲಿ ಒಳ್ಳೆ ಸಂಸ್ಕಾರ ಹಾಗೂ ವಿದ್ಯೆಯನ್ನು ಕಲಿತರೆ ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯಾಗಿ ಮನುಷ್ಯ ಗುರುತಿಸಿಕೊಳ್ಳುತ್ತಾನೆ.

ದೇವಸ್ಥಾನಗಳಿದ್ದರೆ ಮನುಷನಲ್ಲಿ ಒಳ್ಳೆಯ ಭಾವನೆ, ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.

ಅದೇ ರೀತಿ ಪೂಜ್ಯರು ಕೆರೆಗಳ ಊಳು ಎತ್ತುವ ಕೆಲಸ, ಶುದ್ಧ ನೀರಿನ ಘಟಕಗಳ ಸ್ಥಾಪನೆ,ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರುಗಳನ್ನು ನೇಮಕಾತಿ ಮತ್ತು ಶಾಲಾ ಕಟ್ಟಡಗಳ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳತ್ತಾ ಗಮನಹರಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮೇಲ್ವಿಚಾರಕರಾದ ರವೀಂದ್ರ ,ಸೇವಾ ಪ್ರತಿನಿಧಿಗಳಾದ ಭಾಗ್ಯ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

error: Content is protected !!