ಮಾನ್ವಿ :ಮಾನವಿ ತಾಲೂಕಿನ ಹಿರೇಕೊಟ್ನೆಕಲ್ ನಾಡಾ ಕಛೇರಿ ಇದ್ದು. ಇಲ್ಲದಂತಾಗಿದೆ. ಅಧಿಕಾರಿಗಳು ಮತ್ತು ನಾಡಾ ತಹಸೀಲ್ದಾರರಾದ ಶ್ರೀ ಮಲ್ಲಿಕಾರ್ಜುನ ಮತ್ತು ಕಂಪ್ಯೂಟರ್ ಆಪರೇಟರ್ ಶ್ರೀಮತಿ ನಿರ್ಮಲ ಇವರಿಬ್ಬರು ಸೇರಿ ಜನಸಾಮಾನ್ಯರಿಗೆ ಸರಿಯಾದ ಸೌಲಭ್ಯಗಳನ್ನು ಕೊಡದೇ ಹಾರಿಕೆಯ ಉತ್ತರಗಳನ್ನು ನೀಡುತ್ತಾ ರೈತ ಮತ್ತು ವಿದ್ಯಾರ್ಥಿ ಜನಸಾಮಾನ್ಯರನ್ನು ಕಛೇರಿಗೆ ಅಲೆದಾಡಿಸುವುದು ಇವರ ಕಾರ್ಯವಾಗಿದೆ, ಹಾಗೂ
ಸರ್ಕಾರದ ನಿಯಮದಂತೆ ಸರಿಯಾದ ಸಮಯಕ್ಕೆ ಇವರುಗಳು ಕಛೇರಿಯಲ್ಲಿ ಹಾಜರಿರುವುದಿಲ್ಲ.


ಜನಸಾಮಾನ್ಯರು ಇದರ ಬಗ್ಗೆ ಕೇಳಿದರೆ ನಿಮ್ಮೂರಿನ “ಗ್ರಾಮ ಒನ್” ಮತ್ತು ಇತರೆ ಖಾಸಗಿ ಆನ್‌ಲೈನ್ ಕಂಪ್ಯೂಟರ್‌ಗಳಿಗೆ ಹೋಗಿ ನಿಮ್ಮ ಕೆಲಸಗಳನ್ನು ಅಲ್ಲಿ ಮಾಡಿಸಿಕೊಳ್ಳಿ ಎಂದು ಸಬೂಬು ಹೇಳುತ್ತಾರೆ. ಜಾತಿ ಪ್ರಮಾಣ ಪತ್ರ, ವಿಧವಾ ವೇತನ, ವೃದ್ಯಾಪ್ಯ ವೇತನ, ವಂಶಾವಳಿ, ಇನ್ನಿತರ ಪ್ರಮಾಣ ಪತ್ರಗಳನ್ನು ಪಡೆಯಲು ಹೋದರೆ ಲಂಚಕೊಟ್ಟು ತೆಗೆದುಕೊಳ್ಳಲು ಪ್ರೇರೇಪಿಸುತ್ತಾರೆ. ವೃದ್ಯಾಪ್ಯ ವೇತನಗಳನ್ನು ಗ್ರಾಮಲೆಕ್ಕಾಧಿಕಾರಿ ಮತ್ತು ಕಂದಾಯ ನಿರೀಕ್ಷಕರು ತಿರಸ್ಕರಿಸಿದ ಅರ್ಜಿಗಳನ್ನು ಕಂಪ್ಯೂಟರ್ ಆಪರೇಟರ್ ಮತ್ತು ನಾಡಾತಹಸೀಲ್ದಾರ ಲಂಚವನ್ನು ತೆಗೆದುಕೊಂಡು ಮಂಜೂರು ಮಾಡಿರುವುದು ಸುಮಾರು ಉಧಾಹರಣೆಗಳು ಕಂಡುಬರುತ್ತವೆ.
ನಾಡಾ ಕಛೇರಿಯಲ್ಲಿ ನೆಟ್‌ವರ್ಕ ಮತ್ತು ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ನೆಪ ಹೇಳುತ್ತಾರೆ. ಮೂಲಭೂತ ಸೌಲಭ್ಯಗಳು ಆ ಕಛೇರಿಯಲ್ಲಿ ಇಲ್ಲವೇ ಇಲ್ಲ, ಕಂಪ್ಯೂಟರ್ ಆಪರೇಟರ್ ಯಾವುದಾದರೋ ಒಂದು ಪ್ರಮಾಣ ಪತ್ರವನ್ನು ತೆಗೆದುಕೊಳ್ಳಲು ಹೋದಾಗ 100 ರಿಂದ 150 ರೂ.ಗಳನ್ನು ತೆಗೆದುಕೊಂಡು ಪ್ರಮಾಣ ಪತ್ರಗಳನ್ನು ನೀಡುತ್ತಾರೆ.
ಆದ್ದರಿಂದ ಹಿರೇಕೊಟ್ಟೆಕಲ್ ನಾಡಾ ಕಛೇರಿಯಲ್ಲಿನ ನಾಡಾತಹಸೀಲ್ದಾರ ಮತ್ತು ಕಂಪ್ಯೂಟರ್ ಆಪರೇಟರ್ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಇಬ್ಬರು ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಲು ಮಾನ್ಯ ಜಿಲ್ಲಾಧಿಕಾರಿಗಳು, ರಾಯಚೂರು ರವರಿಗೆ ಶಿಫಾರಸ್ಸು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಸಂಘಟನೆಯು ಒತ್ತಾಯಿಸುತ್ತದೆ.
ಒಂದು ವೇಳೆ ಈ ವಿಷಯದ ಬಗ್ಗೆ ತಾವುಗಳು ಕ್ರಮಕೈಗೊಳ್ಳದೇ ನಿರ್ಲಕ್ಷವಹಿಸಿದಲ್ಲಿ ಸದರಿ ನಾಡಾ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗುವದೆಂದು ತಮ್ಮ ಗಮನಕ್ಕೆ ತರಬಯಸುತ್ತೇವೆ.ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯರಾಜ ಕೊಡ್ಲಿ ತಾಲೂಕ ಅಧ್ಯಕ್ಷರು
ಬಸವರಾಜ ಬಾಗಲವಾಡ ಕ್ರಾಂತಿಕಾರಿ ಹೋರಾಟಗಾರ
ಶ್ಯಾಮ್‌ಸಿಂಗ್ ರಜಪೂತ್ ಮುಖಂಡರು
ಮೌನೇಶ ನಾಯಕ ಮುಖಂಡರು ರಮೇಶ ಉಪ್ಪಾರ ಬಸವರಾಜ ಸೂಗನೂರು ಮುಖಂಡರ ವೀರೇಶ ನಾಯಕ
ಮುಖಂಡರು ಲಕ್ಷ್ಮಣ ಜಾಲವಾಡಗಿ ಮುಖಂಡರು