ಬೇಸರ ವ್ಯಕ್ತಪಡಿಸಿದ ಮುಖಂಡರು, ನೋಟಿಸ್ ಜಾರಿ ಮಾಡಿದ ತಹಶಿಲ್ದಾರ್.
ಕೊರಟಗೆರೆ: ನಾಡಪ್ರಭು ಕೆಂಪೇಗೌಡರ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗದಿರುವುದನ್ನು ಕಂಡು ಮುಖಂಡರುಗಳು ಪ್ರಶ್ನಿಸಿದಾಗ ಈ ವಿಚಾರವಾಗಿ ಗೈರಾದ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್ ಗರಂ ಆದ ಘಟನೆ ನಡೆದಿದೆ.
ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಸಿ ಮಾತನಾಡಿದ ತಹಶಿಲ್ದಾರ್ ಮುನಿಶಾಮಿರೆಡ್ಡಿ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಕೈಕೊಂಡಿರುವುದು ತಿಳಿದು ಬಂದಿದೆ.
ಇದೇ ಜೂ.27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುವ ಕುರಿತು ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗದಿರುವುದರ ವಿರುದ್ಧ ಒಕ್ಕಲಿಗ ಸಮುದಾಯದ ಮುಖಂಡರು ಕೆಂಡಮಂಡಲರಾದ ಘಟನೆಯು ಸಹ ನಡೆದಿದೆ.