ಕೊಪ್ಪಳ :ಕೊಪ್ಪಳ ಜಿಲ್ಲೆಯ ಕುಷ್ಟಗಿ ವೃತ್ತದ ಹನಮಸಾಗರ ಪೊಲೀಸ್ ಠಾಣೆ ಮತ್ತು ತಾವರಗೇರಾ ಪೊಲೀಸ್ ಠಾಣೆ ಹಾಗೂ ಕನಕಗಿರಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ರೈತರ ಜಮೀನುಗಳಲ್ಲಿ ಶ್ರೀಗಂಧ ಮರಗಳನ್ನು ಕಡಿದು ಕಳ್ಳತನ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ಪತ್ತೆ ಮಾಡುವ ಕುರಿತು ಶ್ರೀಮತಿ ಯಶೋದಾ ವಂಟಗೋಡಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಮತ್ತು ಶ್ರೀ ಆರ್.ಎಸ್. ಉಜ್ಜನಕೊಪ್ಪ ಮಾನ್ಯ ಡಿ.ಎಸ್.ಪಿ. ಸಾಹೇಬರ ಗಂಗಾವತಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕುಷ್ಟಗಿ ವೃತ್ತದ ಶ್ರೀ ನಿಂಗಪ್ಪ ರುದ್ರಪ್ಪಗೋಳ ಸಿ.ಪಿ.ಐ. ಸಾಹೇಬರ ನೇತೃತ್ವದಲ್ಲಿ ಹನಮಸಾಗರ ಪೊಲೀಸ್ ಠಾಣೆಯ ಶ್ರೀ ಅಶೋಕ ಬೇವೂರು ಪಿ.ಎಸ್.ಐ. (ಕಾಸು) ಹಾಗೂ ಶ್ರೀ ಬಸಪ್ಪ ಎಲ್.ಟಿ. ಪಿ.ಎಸ್.ಐ(ತನಿಖೆ) ಹನಮಸಾಗರ ಪೊಲೀಸ್‌ ಠಾಣೆ ರವರಿಗೆ ಸೂಕ್ತ ಮಾರ್ಗದರ್ಶನ ನೀಡಿ ದಾಖಲಾದ ಶ್ರೀಗಂಧ ಮಗರಳ ಕಳ್ಳತನ ಮಾಡಿ ರೈತರ ನೆಮ್ಮದಿ ಹಾಳು ಮಾಡಿದ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡುವ ಕುರಿತು ಹನಮಸಾಗರ ಠಾಣೆಯ ಸಿಬ್ಬಂದಿಯವರಾದ ವಸಂತ ಎ.ಎಸ್.ಐ. ಸಿದ್ರಾಮಪ್ಪ ಪಿಸಿ-518, ವಿರುಪಾಕ್ಷಿ ಪಿಸಿ-436, ಮಲ್ಲಪ್ಪ ಪಿಸಿ-375 ಮತ್ತು ತಾವರಗೇರಾ ಠಾಣೆಯ ಸಿಬ್ಬಂದಿಯವರಾದ ಗುಂಡಪ್ಪ ಪಿ.ಸಿ-126 ಹಾಗೂ ಕುಷ್ಟಗಿ ವೃತ್ತದ ದುರಗಪ್ಪ ಎ.ಎಸ್‌.ಐ. ವಿರುಪಾಕ್ಷಿ ಹೆಚ್.ಸಿ-128, ಪರಶುರಾಮ ಪಿ.ಸಿ-162 ರವರು ಹಾಗೂ ಅಧಿಕಾರಿಗಳು ಸೇರಿ ಒಂದು ತಂಡವನ್ನು ರಚಿಸಿ ಶ್ರೀಗಂಧ ಮರಗಳ ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.

1] ರಾಜಪ್ಪ ತಂದೆ ಹನಮಪ್ಪ ಭಜಂತ್ರಿ ವಯಾ: 45 ವರ್ಷ ಜಾತಿ: ಭಜಂತ್ರಿ ಉ: ಕೂಲಿಕೆಲಸ ಸಾ: ವಣಗೇರಿ ತಾ:ಕುಷ್ಟಗಿ

2] ಶಿವಪ್ಪ ತಂದೆ ಲಕ್ಷ್ಮಪ್ಪ ಭಜಂತ್ರಿ ವಯಾ: 33 ವರ್ಷ ಜಾತಿ: ಭಜಂತ್ರಿ ಉ: ವ್ಯಾಪಾರ ಸಾ: ವಣಗೇರಿ ತಾ: ಕುಷ್ಟಗಿ

ರವರನ್ನು ದಸ್ತಗಿರಿ ಮಾಡಿದ್ದು, ಆರೋಪಿತರು ತಾವು ಹನಮಸಾಗರ ಪೊಲೀಸ್ ಠಾಣೆ ಹಾಗೂ ತಾವರಗೇರಾ ಪೊಲೀಸ್ ಠಾಣೆ ಮತ್ತು ಕನಕಗಿರಿ ಠಾಣೆಯ ಗುನ್ನೆಗಳಲ್ಲಿ ಶ್ರೀಗಂಧ ಮರಗಳನ್ನು ಕಡಿದು ಕಳ್ಳತನ ಮಾಡಿಕೊಂಡು ಹೋಗಿದ್ದರು

3] ಹನಮಂತಪ್ಪ ತಂದೆ ಬಸಪ್ಪ ಜುಮಲಾಪೂರ ವಯಾ: 54 ವರ್ಷ ಜಾತಿ: ವಾಲ್ಮೀಕಿ ಉ: ಕೂಲಿಕೆಲಸ ಸಾ: ದೋಟಿಹಾಳ ತಾ: ಕುಷ್ಟಗಿ ಇವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು.

ಆರೋಪಿ ಹನಮಂತಪ್ಪನನ್ನು ದಸ್ತಗಿರಿ ಮಾಡಿ ವಿಚಾರಿಸಲಾಗಿ ತನ್ನ ತಪ್ಪನ್ನು ಒಪ್ಪಿಕೊಂಡು, ತಾನು ಶ್ರೀಗಂಧ ಮರಗಳನ್ನು ಸ್ವೀಕರಿಸಿ.

4] ಶಶಿಕುಮಾರ ತಂದೆ ಚನ್ನಪ್ಪ ರೂಡಗಿ ವಯಾ: 24 ವರ್ಷ ಜಾತಿ: ಪಂಚಮಸಾಲಿ ಉ: ಒಕ್ಕಲುತನ ಸಾ: ಕಾರಜೋಳ ತಾ: ಬಬಲೇಶ್ವರ ಜಿ: ವಿಜಯಪುರ ಈತನಿಗೆ ಇವರಿಗೆ ಮಾರಾಟ ಮಾಡಿರುವುದಾಗಿ ಸದರಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಮತ್ತು ಕಳುವಾದ 40 ಕೆ.ಜಿ. ಶ್ರೀಗಂಧ ಕಟ್ಟಿಗೆಗಳು ಅಂದಾಜು 3 ಲಕ್ಷ ಬೆಲೆ ಬಾಳುವವನ್ನು ಆರೋಪಿತರಿಂದ ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಲಾಗಿದೆ.

ಪ್ರಕರಣಗಳಲ್ಲಿ ಭಾಗಿಯಾದ ಕೆಲವು ಆರೋಪಿಗಳು  ಪರಾರಿ ಇರುವ ಆರೋಪಿತರಾದ

1] ಮಂಜುನಾಥ ತಾಯಿ ಹನಮವ್ವ ಮಾದರ ಸಾ: ದೊಟಿಹಾಳ ತಾ: ಕುಷ್ಟಗಿ 2] ಚಂದ್ರಪ್ಪ ತಾಯಿ ಹನಮವ್ವ ಮಾದರ ಸಾ: ದೋಟಿಹಾಳ ತಾ: ಕುಷ್ಟಗಿ

3] ಈರಣ್ಣ ತಂದೆ ಸಂಗಪ್ಪ ಕುಂಬಾರ ಸಾ: ದೊಟಿಹಾಳ ತಾ: ಕುಷ್ಟಗಿ 4] ಸಣ್ಣೆಪ್ಪ ತಂದೆ ಗಿಡ್ಡಪ್ಪ ಮಾದರ ಸಾ: ದೋಟಿಹಾಳ ತಾ: ಕುಷ್ಟಗಿ ಇವರ ಪತ್ತೆ ಕಾರ್ಯ ಮುಂದುವರೆದಿದ್ದು ಇರುತ್ತದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಸದರ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡುವಲ್ಲಿ ಮತ್ತು ಕಳ್ಳತನವಾದ ಶ್ರೀಗಂಧ ಮರಗಳ ಕಟ್ಟಿಗೆಗಳನ್ನು ವಶಪಡಿಸಿಕೊಳ್ಳುವಲ್ಲಿ ಪತ್ತೆ ಕಾರ್ಯದಲ್ಲಿ ತೊಡಿಗಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ಮಾಡಿದ್ದಾರೆ

error: Content is protected !!